ನವದೆಹಲಿ: ಇತ್ತೀಚೆಗಷ್ಟೇ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತನ್ನ ಡಾರ್ಕ್ ಕಲೆಗಳನ್ನು ಮರೆಮಾಚುವ ಜಾಹೀರಾತು ಮಾಡುವ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿತ್ತು. ಇದೀಗ ಈ ಸರಣಿಯಲ್ಲಿ ಹಿಂದೂಸ್ತಾನ್ ಯುನಿಲೀವರ್ ಕೂಡ ಸೇರಿಕೊಂಡಿದೆ. ಹೌದು, ಹಿಂದುಸ್ತಾನ್ ಯುನಿಲೀವರ್ ಕಂಪನಿ ತನ್ನ ಪ್ರಚಲಿತ ಬ್ರಾಂಡ್ ಫೇರ್ ಅಂಡ್ ಲವ್ಲಿಯಿಂದ 'ಫೇರ್' ಪದವನ್ನು ತೆಗೆದುಹಾಕುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ ಕಂಪನಿ ಬ್ರಾಂಡ್ ನ ಹೊಸ ಹೆಸರಿಗಾಗಿ ಅರ್ಜಿ ಕೂಡ ಸಲ್ಲಿಸಿದೆ. ಆದರೆ, ಇನ್ನೂ ಅದಕ್ಕೆ ಅನುಮೋದನೆ ದೊರೆತಿಲ್ಲ.


COMMERCIAL BREAK
SCROLL TO CONTINUE READING

ಜಾರ್ಜ್ ಪ್ಲಾಯಡ್ ಸಾವಿನ ಬಳಿಕ ನಡೆಯುತ್ತಿರುವ ಆಂದೋಲನವೇ ಇದಕ್ಕೆ ಕಾರಣ ಎನ್ನಲಾಗಿದೆ
ಕಳೆದ ಹಲವು ವಾರಗಳಿಂದ ಅಮೆರಿಕದಲ್ಲಿ ಅಷ್ವೇತ ನಾಗರಿಕ ಜಾರ್ಜ್ ಫ್ಲಾಯ್ಡ್  ಅವರ ಸಾವು ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವಾದ್ಯಂತ ಅಷ್ವೇತ ಜನರೊಂದಿಗೆ ನಡೆಸಲಾಗುತ್ತಿರುವ ತಾರತಮ್ಯದ ಚರ್ಚೆಗಳನ್ನು ಆರಂಭಗೊಂಡಿವೆ. ಅಮೆರಿಕದಲ್ಲಿ ಹಿಂಸಾಚಾರವೂ ನಡೆಯುತ್ತಿದೆ. ಇದು ತಾರತಮ್ಯಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಕಂಪನಿ ಹಲವು ವರ್ಷಗಳಿಂದ ಎದುರಿಸುತ್ತಿದೆ ಎಂದು ಯೂನಿಲಿವರ್ ಹೇಳಿಕೊಂಡಿದೆ. ಅಷ್ಟೇ ಅಲ್ಲ ಇದೆ ಕಾರಣದಿಂದಾಗಿ ಕಂಪನಿಯು ಇದೀಗ ತನ್ನ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದೆ.


ಇದರಿಂದ ಕಂಪನಿಗೆ ಲಾಭವಾಗಲಿದೆಯೇ ಅಥವಾ ನಷ್ಟವಾಗಲಿದೆ?
ಈ ಕುರಿತು ಹೇಳಿಕೆ ನೀಡಿರುವ ಹಿಂದುಸ್ತಾನ್ ಯುನಿಲೀವರ್ ಚೈರ್ಮನ್ ಹಾಗೂ MD ಸಂಜೀವ್ ಮೆಹ್ತಾ, 2019ರಲ್ಲಿ ಕಂಪನಿ ತನ್ನ ಉತ್ಪನ್ನದ ಮೇಲಿದ್ದ ಎರಡು ಮುಖಗಳಿರುವ ಕ್ಯಾಮಿಯೋ ತೆಗೆದು ಹಾಕಿತ್ತು ಹಾಗೂ ಇದರ ಜೊತೆಗೆ ಶೆಡ್ ಗೈಡ್ ಕೂಡ ತೆಗೆದುಹಾಕಿತ್ತು. ಇದು ಒಂದು ಸಕಾರಾತ್ಮಕ ಪ್ರಭಾವ ಬೀರಿದ್ದು, ಗ್ರಾಹಕರಿಂದ ಉತ್ತಮ ಬೆಂಬಲ ಕೂಡ ಲಭಿಸಿತ್ತು ಎಂದಿದ್ದಾರೆ.


ಫೇರ್ ಅಂಡ್ ಲವ್ಲಿ ಸಂಕ್ಷಿಪ್ತ ಇತಿಹಾಸ
ಕಂಪನಿಯು 1975 ರಲ್ಲಿ ಫೇರ್ & ಲವ್ಲಿ ಕ್ರೀಮ್ ಅನ್ನು ಮೊದಲ ಬಾರಿಗೆ ಪರಿಚಯಿಸಿತ್ತು. ಈ ಕ್ರೀಮ್ ಎಷ್ಟು ಜನಪ್ರಿಯವಾಗಿದೆ, ಮಾರುಕಟ್ಟೆಯಲ್ಲಿ ಈ ಕ್ರೀಮ್ ಶೇ.50-ಶೇ.70 ರಷ್ಟು ಪಾಲನ್ನು ತನ್ನ ಕೆಟಗರಿಯಲ್ಲಿ ಹೊಂದಿದೆ. 2016 ರಲ್ಲಿ, ಫೇರ್ & ಲವ್ಲಿ 2000 ಕೋಟಿ ಕ್ಲಬ್ ಗೂ ಕೂಡ ಎಂಟ್ರಿ ಹೊಡೆದಿದೆ.