ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಈಗ ಹೆಚ್ಚು ಸುಧಾರಿಸಿದೆ, ಹುರಿಯತ್ ನಾಯಕರು ಮಾತುಕತೆಗೆ ಸಿದ್ಧರಾಗಿದ್ದಾರೆ ಎಂದು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ


COMMERCIAL BREAK
SCROLL TO CONTINUE READING

ಶ್ರೀನಗರದಲ್ಲಿ ಶನಿವಾರದಂದು ದೂರದರ್ಶನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಘೋಷಿಸಿದ ರಾಜ್ಯಪಾಲರು, ಈಗ ತಾಪಮಾನ ಕಡಿಮೆಯಾಗಿದೆ ಎಂದು ಹೇಳಿದರು."ಈಗ ಪರಿಸ್ಥಿತಿ ಉತ್ತಮವಾಗಿದೆ. ಹುರಿಯತ್ ನ್ನು ನೀವು ಗಮನಿಸಿದ್ದೀರಿ. ರಾಮ್ ವಿಲಾಸ್ ಪಾಸ್ವಾನ್ ಅವರು ಹುರಿಯತ್ ನಾಯಕರ ಬಾಗಿಲಲ್ಲಿ ನಿಂತಾಗ ಅವರು ಬಾಗಿಲು ತೆರೆಯಲಿಲ್ಲ. ಈಗ ಅವರು ಮಾತುಕತೆಗೆ ಸಿದ್ಧರಾಗಿದ್ದಾರೆ" ಎಂದು ಮಲಿಕ್ ಹೇಳಿದರು.


ಜಮ್ಮುವಿನ ದಿನಪತ್ರಿಕೆ ಎಕ್ಸೆಲ್ಸಿಯರ್‌ನಲ್ಲಿ ಶುಕ್ರವಾರ ಪ್ರಕಟವಾದ ಸಂದರ್ಶನದಲ್ಲಿ, ಎಲ್ಲಾ ಪಕ್ಷಗಳ ಹುರಿಯತ್ ಕಾನ್ಸಫರೆನ್ಸ್  ಅಧ್ಯಕ್ಷ ಮಿರ್ವಾಯಿಜ್ ಉಮರ್ ಫಾರೂಕ್ ಅವರು ಹುರಿಯತ್ ನಾಯಕರು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 'ಇಂತಹ ಬೃಹತ್ ಜನಾದೇಶದೊಂದಿಗೆ, ರಾಜ್ಯದ ರಾಜಕೀಯ ಪ್ರಕ್ರಿಯೆಯನ್ನು ಮುಂದಕ್ಕೆ ತೆಗೆದುಕೊಳ್ಳುವುದು ಮತ್ತು ರಾಜ್ಯದಲ್ಲಿನ ಎಲ್ಲ ಹಿಂಸಾಚಾರಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ' ಎಂದು ಹೇಳಿದ್ದರು.


ಮಿಜ್ವಾಯಿಜ್ ಉಮರ್ ಫಾರೂಕ್ ಮಾತನಾಡಿ 'ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕ ದಾಳಿಯ ನಂತರ ಸ್ಥಗಿತಗೊಂಡಿರುವ ಮಾತುಕತೆಗಳನ್ನು  ಭಾರತ ಮತ್ತು ಪಾಕಿಸ್ತಾನ ಮತ್ತೆ ಪ್ರಾರಂಭಿಸಬೇಕಂದು ಒತ್ತಾಯಿಸಿದರು.