ನವದೆಹಲಿ: ದೇಶದ ಮುಂಚೂಣಿಯಲ್ಲಿರುವ ಕಾರು ಉತ್ಪಾದಕ ಕಂಪನಿ ಮಾರುತಿ ಸುಜ್ಹುಕಿ, ಆಟೋ ಎಕ್ಸ್ಪೋ 2020ರಲ್ಲಿ ತನ್ನ VITARA BREZZA ಕಾರಿನ ಫೇಸ್ ಲಿಫ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಇದಕ್ಕೂ ಮೊದಲು ಈ ಕಾರಿನ ಡಿಸೇಲ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೆ, ಇದೀಗ BS6 ಮಾನದಂಡಗಳು ಜಾರಿಗೆ ಬಂದ ಬಳಿಕ ನೂತನ VITARA BREZZA ಪೆಟ್ರೋಲ್ ಇಂಜಿನ್ ಆವುರ್ತ್ತಿಯಾಗಿ ಬಿಡುಗಡೆಯಾಗುತ್ತಿದೆ. ಫೆಬ್ರವರಿ 18ರಂದು ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಕಾರನ್ನು ಖರೀದಿಸಲು ಗ್ರಾಹಕರು ರೂ.11,000 ರೂ.ಗಳನ್ನು ಮುಂಗಡವಾಗಿ ಬುಕ್ ಮಾಡಿ ಕಾಯ್ದಿರಿಸಬಹುದಾಗಿದೆ. ಆದರೆ, ಆರಂಭದಲ್ಲಿ ತಮ್ಮ ಕಾರಿನ ಡಿಲೆವರಿ ಪಡೆಯಲು ಗ್ರಾಹಕರು 6 ರಿಂದ 8 ವಾರಗಳ ಕಾಲ ಕಾಯಬೇಕು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಮಾರುತಿ ವಿಟಾರಾ ಬ್ರೆಜ್ಜಾ ಫೇಸ್ ಲೈಫ್ ಕಾರು ಒಟ್ಟು ನಾಲ್ಕು ಟ್ರಿಮ್ ಗಳಾಗಿರುವ LXi, VXi, ZXi ಹಾಗೂ ZXi + ಗಳಲ್ಲಿ ಬಿಡುಗಡೆಯಾಗಲಿದೆ. ಇದು ನೂತನ BS6 ಕಂಪ್ಲೇಂಟ್ ನ 1.5 ಲೀಟರ್ ಪೆಟ್ರೋಲ್ ಇಂಜಿನ್ ಮೂಲಕ ಸಂಚರಿಸಲಿದೆ. ಮೂರು ಸ್ವಯಂಚಾಲಿತ ಮಾಡೆಲ್ (VXi, ZXi ಹಾಗೂ ZXi +) ಮತ್ತು ನಾಲ್ಕು ಮ್ಯಾನುಅಲ್ ವೇರಿಯಂಟ್ ಮಾಡೆಲ್ ಗಳು ಇದರಲ್ಲಿ ಇರಲಿವೆ. ಈ ಫೇಸ್ ಲಿಫ್ಟ್ ಮಾಡೆಲ್ ಸದ್ಯ ಪೆಟ್ರೋಲ್ ಇಂಜಿನ್ ಮಾತ್ರ ದೊರಯಲಿದೆ. ಏಕೆಂದರೆ ಏಪ್ರಿಲ್ 2020ರಲ್ಲಿ ಮಾರುತಿ ತನ್ನ ಡಿಸೇಲ್ ಇಂಜಿನ್ ಆವೃತ್ತಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.


ಹೊಸ ಕಲರ್ ಹೊಸ ಲುಕ್
ನೂತನ ಮಾರುತಿ ವಿಟಾರಾ ಬ್ರೆಜ್ಜಾ 2020, ಆರು ಮೆಟಾಲಿಕ್ ಹಾಗೂ ಮೂರು ಡ್ಯುಯೆಲ್ ಟೋನ್ ಕಲರ್ ಸ್ಕೀಮ್ ಆಪ್ಶನ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಮೆಟಾಲಿಕ್ ಶೆಡ್ ಗಳಲ್ಲಿ ಆರೆಂಜ್, ಪ್ರೀಮಿಯಂ, ಸಿಲ್ವರ್, ಟಾರ್ಕ್ ಬ್ಲೂ, ಗ್ರ್ಯಾನೈಟ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್ ಹಾಗೂ ಸಿಜಲಿಂಗ್ ರೇಜ್ ಬಣ್ಣಗಳು ಶಾಮೀಲಾಗಿವೆ. ಈ ಬಣ್ಣಗಳ ಕಾರಣ ಈ ಕಾರು ಇನ್ನಷ್ಟು ಆಕರ್ಷಕವಾಗಿ ಕಂಡುಬರಲಿದೆ.


ಸ್ಮಾರ್ಟ್ ಫೀಚರ್ಸ್
ವೈಶಿಷ್ಟ್ಯಗಳ ದೃಷ್ಟಿಯಿಂದ ಸುಧಾರಿತ ವಿಟಾರ ಬ್ರೆಜ್ಜಾ ಆವೃತ್ತಿಯಲ್ಲಿ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಜೊತೆಗೆ ಹೊಸ ಸ್ಮಾರ್ಟ್ ಪ್ಲೇ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇರಲಿದ್ದು, ಇದರಲ್ಲಿ ಆಟೋ ಡೀಮಿಂಗ್ IRVM ಹಾಗೂ ಆಟೋ ಫೋಲ್ಡಿಂಗ್ ORVM ಶಾಮೀಲಾಗಿವೆ. ಕಾರಿನ ಡಿಸೈನ್ ನಲ್ಲಿ ಸಾಮಾನ್ಯ ಬದಲಾವಣೆಗಳನ್ನು ಮಾಡಲಾಗಿದೆ.


ಕಾರ್ ಬೆಲೆ ಎಷ್ಟು?
ಮಾರುತಿ ಬ್ರೆಜ್ಜಾ ಫೇಸ್ ಲಿಫ್ಟ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 7 ಲಕ್ಷ ರೂ.ಗಳ ಹತ್ತಿರ ಇರುವ ಸಾಧ್ಯತೆ ಇದೆ. ಈ ಕಾರಿನ ಡಿಸೇಲ್ ಆವೃತ್ತಿಯ ಬೆಲೆ ಸುಮಾರು 7.63 ಲಕ್ಷ ರೂ.ಗಳಷ್ಟಿತ್ತು. ಈ ಹೊಸ ಬ್ರೆಜ್ಜಾ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಹುಂಡೈ ವೆನ್ಯೂ, ಮಹಿಂದ್ರಾ XUV300, ಫೋರ್ಡ್ ಇಕೋಸ್ಪೋರ್ಟ್  ಹಾಗೂ ಟಾಟಾ ನೇಕ್ಸಾನ್ ಗಳಂತಹ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.