Husband Murdered Wife Using Cobra - ಹಾವಿನ ಕಡಿತದಿಂದ 25 ವರ್ಷದ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ನ್ಯಾಯಾಲಯ ಪತಿಯನ್ನು ಅಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿತಸ್ಥ ಪತಿಗೆ ಬುಧವಾರ ಶಿಕ್ಷೆ ವಿಧಿಸಲಾಗುವುದು. ವಾಸ್ತವವಾಗಿ, ತಪ್ಪಿತಸ್ಥ ಪತಿಯು ಮಲಗಿದ್ದ ಹೆಂಡತಿಯನ್ನು ಹಾವಿನಿಂದ ಕಚ್ಚಿಸಿ  (Snake Bite Death) ಹತ್ಯೆಗೈದಿದ್ದಾನೆ.


COMMERCIAL BREAK
SCROLL TO CONTINUE READING

ಈ ಪ್ರಕರಣ ಕಳೆದ ವರ್ಷ ಮೇ ತಿಂಗಳಿಗೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ಆರೋಪಿ ಪತಿ ಸೂರಜ್ ತನ್ನ ಪತ್ನಿ ಉಥರಾಳನ್ನು ನಾಗರ ಹಾವಿನಿಂದ (King Cobra) ಕಚ್ಚಿಸಿ ಸಾಯುವಂತೆ ಮಾಡಿದ್ದಾನೆ (Woman Murdered With Help Of Snake). ಈ ಪ್ರಕರಣದಲ್ಲಿ, ಕೊಲ್ಲಂನ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಪೋಲೀಸರ ಸಾಕ್ಷ್ಯದ ಆಧಾರದಲ್ಲಿ ಆರೋಪಿ ಸೂರಜ್ ನನ್ನು ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣದ ಅಪರಾಧಿಗೆ ಬುಧವಾರ ಶಿಕ್ಷೆಯಾಗಲಿದೆ.


ಇದನ್ನೂ ಓದಿ-ವಿಚಿತ್ರ ಆದರೂ ಸತ್ಯ: ಆರು ದಿನದಲ್ಲಿ ಮಹಿಳೆಗೆ ಮೂರು ಬಾರಿ ಕಡಿದ ನಾಗರಾಜ!


ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಇದು ಅಪರೂಪದ ಪ್ರಕರಣಗಳಲ್ಲಿ ಅತ್ಯಂತ ಅಪರೂಪದ (Rarest Case) ಪ್ರಕರಣವಾಗಿದೆ. ಇದರಲ್ಲಿ, ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸ್ ತಂಡವನ್ನು ಅಭಿನಂದಿಸಿದ ಅವರು, ಕೊಲೆ ಪ್ರಕರಣವನ್ನು ಹೇಗೆ ವೈಜ್ಞಾನಿಕವಾಗಿ ಮತ್ತು ವೃತ್ತಿಪರ ರೀತಿಯಲ್ಲಿ ತನಿಖೆ ಮಾಡಲಾಗಿದೆ ಮತ್ತು ಪತ್ತೆಹಚ್ಚಲಾಗಿದೆ ಎಂಬುದಕ್ಕೆ ಇದು ಒಂದು ಜ್ವಲಂತ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ಭೂಪ...!


ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಕಾಂತ್, "ಪ್ರಕರಣವು ಕ್ಲಿಷ್ಟಕರವಾಗಿತ್ತು. ಆದರೆ ಪ್ರಕರಣವನ್ನು ಭೇದಿಸಲು ವಿಧಿವಿಜ್ಞಾನ ಔಷಧ, ಫೈಬರ್ ಡೇಟಾ, ಪ್ರಾಣಿಗಳ ಡಿಎನ್ಎ ಮತ್ತು ಇತರ ಪುರಾವೆಗಳನ್ನು ವಿಶ್ಲೇಷಿಸುವಲ್ಲಿ ತನಿಖಾ ತಂಡವು ತುಂಬಾ ಶ್ರಮಿಸಿದೆ" ಎಂದು ಹೇಳಿದ್ದಾರೆ. 


ಇದನ್ನೂ ಓದಿ-Viral Video: ನಾಗರಹಾವಿಗೆ ರಾಖಿ ಕಟ್ಟಲು ಹೋದ ಭೂಪ ಕೊನೆಗೆ ಏನಾದ ಗೊತ್ತಾ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ