ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ಭೂಪ...!

ಆಶ್ಚರ್ಯಕರ ಘಟನೆಯೊಂದರಲ್ಲಿ ಭಾನುವಾರ ವ್ಯಕ್ತಿಯೊಬ್ಬನ ಮೇಲೆ ಹಾವು ದಾಳಿ ನಡೆಸಿ ಕಚ್ಚಿದಾಗ ನಂತರ ಆ ವ್ಯಕ್ತಿ ಹಾವನ್ನೇ ಕಚ್ಚಿ ತುಂಡರಿಸಿದ್ದಾನೆ.

Last Updated : Jul 29, 2019, 02:45 PM IST
 ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ಭೂಪ...!  title=
ANI PHOTO

ನವದೆಹಲಿ: ಆಶ್ಚರ್ಯಕರ ಘಟನೆಯೊಂದರಲ್ಲಿ ಭಾನುವಾರ ವ್ಯಕ್ತಿಯೊಬ್ಬನ ಮೇಲೆ ಹಾವು ದಾಳಿ ನಡೆಸಿ ಕಚ್ಚಿದಾಗ ನಂತರ ಆ ವ್ಯಕ್ತಿ ಹಾವನ್ನೇ ಕಚ್ಚಿ ತುಂಡರಿಸಿದ್ದಾನೆ.

ಈಗ ಹಾವು ಕಚ್ಚಿದ್ದರಿಂದಾಗಿ ಆ ವ್ಯಕ್ತಿ ಅಸ್ತವ್ಯಸ್ತಗೊಂಡಿದ್ದಾನೆ ಎಂದು ಹೇಳಲಾಗಿದೆ. ಎತಾಹ್ ದ ಅಸ್ರೌಲಿ ಗ್ರಾಮದ ರಾಜಕುಮಾರ್ ಎಂದು ಆ ವ್ಯಕ್ತಿಯನ್ನು ಗುರುತಿಸಲಾಗಿದೆ.

ಈ ಘಟನೆ ಕುರಿತಾಗಿ ಈಗ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಆ ವ್ಯಕ್ತಿಯ ತಂದೆ ಬಾಬು ರಾಮ್ 'ನನ್ನ ಮಗ ಕುಡಿದಿದ್ದನು. ಹಾವು ನಮ್ಮ ಮನೆಗೆ ಪ್ರವೇಶಿಸಿ ಅವನನ್ನು ಕಚ್ಚಿತು. ಮತ್ತು ನಂತರ ಅವನು ಹಾವನ್ನು ಕಚ್ಚಿ ತುಂಡುಗಳಾಗಿ ಪುಡಿಮಾಡಿದನು. ಅವನ ಸ್ಥಿತಿ ಗಂಭೀರವಾಗಿದೆ. ಅವನ ಚಿಕಿತ್ಸಾ ವೆಚ್ಚವನ್ನು ಭರಿಸಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈಗ ರಾಜ್‌ಕುಮಾರ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 'ರೋಗಿಯೊಬ್ಬರು ನನ್ನ ಬಳಿಗೆ ಬಂದು ಅವರು ಹಾವನ್ನು ಕಚ್ಚಿದ್ದಾರೆಂದು ಹೇಳಿದರು. ಹಾವು ಅವನನ್ನು ಕಚ್ಚಿದೆ ಎಂದು ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ. ಅವನ ಸ್ಥಿತಿ ಗಂಭೀರವಾಗಿದೆ. ಅವನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ" ಎಂದು ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಘಟನೆಯ ನಂತರ ರಾಜ್‌ಕುಮಾರ್ ಅವರ ಕುಟುಂಬವು ಹಾವನ್ನು ಅಂತ್ಯಕ್ರಿಯೆ ಮಾಡಿತು.

Trending News