ಹೈದ್ರಾಬಾದ್ ಎನ್ಕೌಂಟರ್: ಶಂಶಾಬಾದ್ DCP ಹೇಳಿದ್ದೇನು?
ಹೈದರಾಬಾದ್ನ ಮಹಿಳಾ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಹೈದ್ರಾಬಾದ್ ಪೊಲೀಸರು ಎನ್ಕೌಂಟರ್ ನಡೆಸುವ ಮೂಲಕ ಹತ್ಯೆಗೈದಿದ್ದಾರೆ.
ಹೈದರಾಬಾದ್:ಮಹಿಳಾ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಆರೋಪಿಗಳು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಿತ್ತು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದು, ಈ ದಾಳಿಯಲ್ಲಿ ಆರೋಪಿಗಳು ಸಾವನ್ನಪ್ಪಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಶಂಶಾಬಾದ್ DCP ಪ್ರಕಾಶ್ ರೆಡ್ಡಿ, ಅಪರಾಧ ಸ್ಥಳದಲ್ಲಿ ಘಟನೆಯನ್ನು ಮರುಸೃಷ್ಟಿಸಲು ಸೈಬರಾಬಾದ್ ಪೊಲೀಸರು ಆರೋಪಿಗಳನ್ನು ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಿತ್ತು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಸಹ ಪ್ರತಿ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಆರೋಪಿಗಳು ಸಾವನ್ನಪ್ಪಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ.
ಹೈದ್ರಾಬಾದ್ ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾದ್ ನಗರ್ ಬಳಿ ಇರುವ ಚರ್ನಪಲ್ಲಿ ಬಳಿ ಶುಕ್ರವಾರ ಬೆಳಗ್ಗೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾಗ ಈ ಎನ್ಕೌಂಟರ್ ನಡೆಸಲಾಗಿದೆ.
ನವೆಂಬರ್ 27ರ ರಾತ್ರಿ ಹೈದ್ರಾಬಾದ್ ನ ಹೊರವಲಯದಲ್ಲಿರುವ ಶಂಶಾಬಾದ್ ಬಳಿ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಈ ಕಿರಾತಕರು ಬಳಿಕ ಆಕೆಯನ್ನು ಹತ್ಯೆಗೈದು ಆಕೆಯ ದೇಹವನ್ನು ಸುಟ್ಟುಹಾಕಿದ್ದರು. ಇಂದು ಬೆಳಗ್ಗೆ ಎಲ್ಲ ನಾಲ್ವರು ಆರೋಪಿಗಳು ಅದೇ ಸ್ಥಳದಲ್ಲಿ ನಡೆಸಲಾಗಿರುವ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯ್ಯಲಾಗಿದೆ.
ತನಿಖೆಯ ಭಾಗವಾಗಿ, ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು, ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಎನ್ಕೌಂಟರ್ ನಡೆಸಿ ನಾಲ್ವರು ಆರೋಪಿಗಳನ್ನು ಹೊಡೆದುರುಳಿಸಿದ್ದಾರೆ. ಯುವ ವೈದ್ಯೆಯ ಜೊತೆ ನಡೆದ ಆಘಾತಕಾರಿ ಘಟನೆಯ ಬಳಿಕ, ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಅಪರಾಧಿಗಳಿಗೆ ತಕ್ಷಣವೇ ಮರಣದಂಡನೆ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.