ಹೈದರಾಬಾದ್: ದೇಶದ ಹೈಟೆಕ್ ಸಿಟಿ ಹೈದರಾಬಾದ್‍ನಲ್ಲಿ ಮತ್ತೊಂದು ಶ್ರದ್ಧಾ ವಾಲ್ಕರ್ ಹಾಗೂ ನಿಕ್ಕಿ ಯಾದವ್ ಕೊಲೆ ರೀತಿಯ ಪ್ರಕರಣ ಬೆಳಕಿಗೆ ಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣದಂತೆ ಹೈದರಾಬಾದ್ ಮೂಲದ ಆರೋಪಿ ಈ ಕೃತ್ಯ ಎಸಗಿದ್ದಾನೆ. 48 ವರ್ಷದ ಬಿ.ಚಂದ್ರಮೋಹನ್ ಎಂಬಾತನೇ ಆರೋಪಿ. ಈತ 55 ವರ್ಷದ ಅನುರಾಧಾ ರೆಡ್ಡಿ ಎಂಬಾಕೆಯನ್ನು ಕೊಂದು ದೇಹವನ್ನು ತುಂಡರಿಸಿ ಫ್ರಿಡ್ಜ್‍ನಲ್ಲಿ ಇಟ್ಟಿದ್ದಾನೆ.


COMMERCIAL BREAK
SCROLL TO CONTINUE READING

ಆರೋಪಿ ಮೇ 12ರಂದು ಈ ಘೋರ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಮೇ 17ರಂದು ಹೈದರಾಬಾದ್‍ನ ಮುಸಿ ನದಿ ಬಳಿ ರುಂಡವೊಂದು ಪತ್ತೆಯಾಗಿತ್ತು. ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರು ಚಂದ್ರಮೋಹನ್‍ನನ್ನು ಬಂಧಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಆನ್‍ಲೈನ್ ಟ್ರೇಡಿಂಗ್ ನಡೆಸುತ್ತಿದ್ದ ಈತನಿಗೆ ಅನುರಾಧ ರೆಡ್ಡಿ ಎಂಬುವರ ಜೊತೆಗೆ ಕಳೆದ 15 ವರ್ಷಗಳಿಂದ ಅನೈತಿಕ ಸಂಬಂಧವಿತ್ತು.


ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಸಿಲಿನ ತಾಪಕ್ಕೆ ನಮೀಬಿಯಾದ ಎರಡು ಚೀತಾ ಮರಿಗಳ ಸಾವು


ಗಂಡನಿಂದ ಬೇರೆಯಾಗಿದ್ದ ಅನುರಾಧ ಆರೋಪಿ ಚಂದ್ರಮೋಹನ್ ಜೊತೆಗೆ ದಿಲ್‍ಖುಷ್ ನಗರದಲ್ಲಿರುವ ಚೈತನ್ಯಪುರಿ ಕಾಲೋನಿಯಲ್ಲಿ ವಾಸವಾಗಿದ್ದರು. ಬಡ್ಡಿಗೆ ಹಣ ನೀಡುತ್ತಿದ್ದ ಅನುಧಾಧ ಮೋಹನ್‍ಗೂ 7 ಲಕ್ಷ ರೂ. ಸಾಲ ನೀಡಿದ್ದರು. ಈ ನಡುವೆ ಹಣ ಹಿಂದಿರುಗಿಸುವಂತೆ ಆಕೆ ಒತ್ತಾಯಿಸಿದ್ದಳು. ಪರಿಣಾಮ ಆಕೆಯನ್ನು ಕೊಲೆ ಮಾಡಲು ಚಂದ್ರಮೋಹನ್ ಪ್ಲಾನ್ ಮಾಡಿದ್ದ. ಅದರಂತೆ ಮೇ 12ರಂದು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಆರೋಪಿ ಅನುರಾಧಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಎದೆ ಹಾಗೂ ಹೊಟ್ಟೆಗೆ ಗಂಭೀರ ಗಾಯ ಉಂಟಾಗಿದ್ದ ಅನುರಾಧ ಸಾವನ್ನಪ್ಪಿದ್ದಾರೆ.


ನಂತರ ಚಂದ್ರಮೋಹನ್ ಮೃತ ದೇಹವನ್ನು 22 ತುಂಡುಗಳಾಗಿ ಕತ್ತರಿಸಿದ್ದಾನೆ. ಆರೋಪಿಯ ಮನೆಯಲ್ಲಿ ಕಲ್ಲು ಕತ್ತರಿಸುವ ಯಂತ್ರ ಪತ್ತೆಯಾಗಿದೆ. ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‍ನಲ್ಲಿ ಬಚ್ಚಿಟ್ಟಿದ್ದ. ಮೇ 15ರಂದು ಆರೋಪಿ ಮೃತಳ ತಲೆಯನ್ನು ಕಡಿದುಹಾಕಿದ್ದ. ಬಳಿಕ ಆಟೋ ರಿಕ್ಷಾವೊಂದರಲ್ಲಿ ತೆರಳಿ ರುಂಡವನ್ನು ಮುಸಿ ನದಿ ಬಳಿ ಎಸೆದು ಎಸ್ಕೇಪ್ ಆಗಿದ್ದ.


ಇದನ್ನೂ ಓದಿ: Viral Video: ಪ್ರಿಯಕರಿನಿಗಾಗಿ ನಡುಬೀದಿಯಲ್ಲೇ ಮಾರಾಮಾರಿ, ಒಬ್ಬನಿಗೆ ಇಷ್ಟೊಂದು ಹುಡ್ಗೀರಾ?


ಈ ನಡುವೆ ಪಿನಾಯಿಲ್, ಕರ್ಪೂ ರ, ಆಗರಬತ್ತಿಗಳನ್ನು ತಂದು ದೇಹದ ಭಾಗಗಳಿಗೆ ಸಿಂಪಡಿಸಿ ದುರ್ನಾತ ಬೀರದಂತೆ ನೋಡಿಕೊಂಡಿದ್ದಾನೆ. ಮೇ 17ರಂದು ಮುಸಿ ನದಿ ಬಳಿಕ ಕಸ ವಿಲೇವಾರಿ ಮಾಡುತ್ತಿದ್ದ ಪೌರಕಾರ್ಮಿಕರಿಗೆ ರುಂಡ ಕಂಡುಬಂದಿದೆ. ಅವರು ನೀಡಿದ ಮಾಹಿತಿ ಅನ್ವಯ ಮಾಲಕ್ಪೇಟ್ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.