ಸ್ನಾನ ಮಾಡುತ್ತಿದ್ದ ಯುವತಿಯರ ವಿಡಿಯೋ ರೆಕಾರ್ಡ್: ಕುಂದಾಪುರ ಮೂಲದ ಕಾಮುಕನ ಬಂಧನ

ಬೆಂಗಳೂರು: ತನ್ನ ಜೊತೆ ಕೆಲಸ ಮಾಡುತ್ತಿದ್ದ ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಕುಂದಾಪುರ ಮೂಲದ ಆರೋಪಿಯನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.  

Written by - VISHWANATH HARIHARA | Last Updated : May 25, 2023, 01:45 PM IST
  • ಕುಂದಾಪುರ ಮೂಲದ ರಘುರಾಮ್‌ ಎಂಬಾತನನ್ನು ಬಂಧಿಸಲಾಗಿದೆ.
  • ನಿಸರ್ಗ ಗಾರ್ಡನ್‌ನಲ್ಲಿ ಕ್ಯಾಟರಿಂಗ್‌ ನಡೆಸುತ್ತಿದ್ದ ಕಾಮುಕ
  • ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ
ಸ್ನಾನ ಮಾಡುತ್ತಿದ್ದ ಯುವತಿಯರ ವಿಡಿಯೋ ರೆಕಾರ್ಡ್: ಕುಂದಾಪುರ ಮೂಲದ ಕಾಮುಕನ ಬಂಧನ title=
File Photo

ಪಶ್ಚಿಮ ಬಂಗಾಳ ಮೂಲದ ಯುವತಿಯ ದೂರಿನನ್ವಯ ಕುಂದಾಪುರ ಮೂಲದ ರಘುರಾಮ್‌ ಎಂಬಾತನನ್ನು ಬಂಧಿಸಲಾಗಿದೆ. ನಿಸರ್ಗ ಗಾರ್ಡನ್‌ನಲ್ಲಿ ಕ್ಯಾಟರಿಂಗ್‌ ನಡೆಸುತ್ತಿದ್ದ ಕಾಮುಕ, ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ಬಾಗ್‌ ಮನೆ ಟೆಕ್‌ಪಾರ್ಕ್‌ ಹಾಗೂ ಮತ್ತಿತರ ಕಡೆಗಳಿಗೆ ಕ್ಯಾಟರಿಂಗ್‌ ಸರ್ವಿಸ್ ನೀಡುತ್ತಿದ್ದ. 

ಸಂತ್ರಸ್ತ ಯುವತಿ ಕ್ಯಾಟರಿಂಗ್‌ ನ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದರೆ, ಆಕೆಯ ಸ್ನೇಹಿತೆ ಕೌಂಟರ್‌ ಮ್ಯಾನೇಜರ್‌ ಆಗಿದ್ದಳು. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತೆ ಹಾಗೂ ಆರೋಪಿ ರಘುರಾಮ್‌ ನಿಸರ್ಗ ಗಾರ್ಡನ್‌ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೇ 12ರಂದು ಸಂತ್ರಸ್ತೆ ಸ್ನಾನ ಮಾಡುವ ವೇಳೆ ಕಾಮುಕ ಬಾತ್‌ ರೂಮಿನ ಗೋಡೆಯ ಮೇಲಿನಿಂದ ಮೊಬೈಲ್ ನಲ್ಲಿ ಸ್ನಾನ ಮಾಡುವ ದೃಶ್ಯವನ್ನು ಸೆರೆಹಿಡಿಯುತ್ತಿದ್ದ. 

ಇದನ್ನೂ ಓದಿ-Premraj Arora Death: ಕೇವಲ 42ನೇ ವಯಸ್ಸಿಗೆ ನಿಧನರಾದ ಪ್ರಸಿದ್ಧ ದೇಹದಾರ್ಢ್ಯ ಪಟು!

ಇದನ್ನು ಗಮನಿಸಿದ ಆಕೆಯ ಸ್ನೇಹಿತೆ ಜೋರಾಗಿ ಕೂಗಿಕೊಂಡಿದ್ದಾಳೆ. ನಂತರ ಆರೋಪಿಯ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದಾಗ ಇಬ್ಬರು ಯುವತಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಪತ್ತೆಯಾಗಿವೆ. ಈ ಬಗ್ಗೆ ಯುವತಿಯರು ಪ್ರಶ್ನಿಸಿದಾಗ ನಾನು ತಾನು ಹೇಳಿದಂತೆ ಕೇಳಬೇಕು, ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲವಾದಲ್ಲಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ನೊಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಈಗ ಕಾಮುಕ ರಘುರಾಮ್ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ-Rain Alert: ಮುಂದಿನ 48 ಗಂಟೆಗಳಲ್ಲಿ ಮತ್ತೆ ವರುಣಾರ್ಭಟ: ಗುಡುಗು ಸಹಿತ ಬಿರುಗಾಳಿಯ ಮುನ್ಸೂಚನೆ: ಈ ಭಾಗದಲ್ಲಿ ಆರೆಂಜ್ ಅಲರ್ಟ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News