ನವದೆಹಲಿ: ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಎಲ್.ಕೆ.ಅಡ್ವಾಣಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅಂತಹ ನಾಯಕರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸುವುದು ನಿಜಕ್ಕೂ ಗೌರವದ ಸಂಗತಿ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಅಮಿತ್ ಷಾ ನಾಲ್ಕು ಕಿಲೋಮೀಟರ್ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದರು.ಅಹ್ಮದಾಬಾದ್ ನಾರನ್ ಪುರ್ ದಲ್ಲಿರುವ ಸರ್ದಾರ್ ಪಟೇಲ್ ಮೂರ್ತಿಯಿಂದ ಗಾತ್ಲೋಡಿಯಾದ ಪಾಟಿದಾರ್ ಚೌಕಿಯವರೆಗೆ ಮೆರವಣಿಗೆಯನ್ನು ಸಾಗಿತು.ಇದೇ ವೇಳೆ ಅಮಿತ್ ಷಾ ಅವರ ಜೊತೆಗೆ ರಾಜ್ ನಾಥ್ ಸಿಂಗ್ ,ನೀತಿನ್ ಗಡ್ಕರಿ,ಉದ್ದವ್ ಠಾಕ್ರೆ, ಪ್ರಕಾಶ್ ಸಿಂಗ್ ಬಾದಲ್,ರಾಮ್ ವಿಲಾಸ್ ಪಾಸ್ವಾನ್ ಉಪಸ್ಥಿತರಿದ್ದರು.



ಇದೇ ವೇಳೆ ಮಾತನಾಡಿದ ಅಮಿತ್ ಶಾ"ಅಟಲ್ ಬಿಹಾರಿ ವಾಜಪೇಯಿ,ಎಲ್.ಕೆ ಅಡ್ವಾಣಿಯಂತಹ ಹಿರಿಯ ನಾಯಕರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಕ್ಕೆ ನನಗೆ ಆಶೀರ್ವಾದ ದಕ್ಕಿದೆ,ಇದು ನನಗೆ ಸಿಕ್ಕ ಗೌರವ ಎಂದು ಷಾ ಹೇಳಿದರು.



1991 ರಿಂದ ಎಲ್.ಕೆ ಅಡ್ವಾಣಿ ಅವರು ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿದ್ದರು.ಆದರೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿ ಅಮಿತ್ ಷಾ ಅವರನ್ನು ಈ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.ಸದ್ಯ ಅಮಿತ್ ಷಾ ಅವರು ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದಾರೆ.