ನವದೆಹಲಿ: ಆಗಸ್ಟ್ 9 ರಂದು ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು ನಿತೀಶ್ ಕುಮಾರ್ ಅವರು 8 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.


COMMERCIAL BREAK
SCROLL TO CONTINUE READING

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ '2020 ರಲ್ಲಿ ಸಿಎಂ ಆಗಲು ನನಗೆ ಇಷ್ಟವಿಲ್ಲ, ಆದಾಗ್ಯೂ ನನಗೆ ಸಿಎಂ ಆಗುವಂತೆ ಒತ್ತಡ ಹೇರಲಾಯಿತು' ಎಂದು ದೂರಿದರು.


ಇದನ್ನೂ ಓದಿ : Rakesh Tikait : ರಾಕೇಶ್ ಟಿಕಾಯತ್​ಗೆ ಮಸಿ ಬಳಿದ ಪ್ರಕರಣ : 450 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು


ಬುಧವಾರದಂದು ನಿತೀಶ್ ಕುಮಾರ್ ಅವರು ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿ ಮಾತನಾಡಿದ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು 2024ರ ಲೋಕಸಭೆ ಚುನಾವಣೆಯಲ್ಲಿ ತನ್ನ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದರು.


ಇದನ್ನೂ ಓದಿ : Davanagere : ಖಾಸಗಿ ಬಸ್ ಪಲ್ಟಿಯಾಗಿ 20 ಜನರಿಗೆ ಗಾಯ..!


ಮಹಾಮೈತ್ರಿಕೂಟ ಬೆಂಬಲದೊಂದಿಗೆ ಹೊಸ ಸರ್ಕಾರವನ್ನು ರಚಿಸುವ ನಿಟ್ಟಿನಲ್ಲಿ ನಿತೀಶ್ ಕುಮಾರ್ ಮಂಗಳವಾರದಂದು ಬಿಜೆಪಿ ಸಖ್ಯವನ್ನು ತೊರೆದು ಆರ್ಜೆಡಿಯೊಂದಿಗೆ ಮತ್ತೆ ಸರ್ಕಾರವನ್ನು ರಚಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.