Rakesh Tikait : ರಾಕೇಶ್ ಟಿಕಾಯತ್​ಗೆ ಮಸಿ ಬಳಿದ ಪ್ರಕರಣ : 450 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಹಾಗೂ ಮಸಿ ಬಳಿದ ಪ್ರಕರಣ ಸಂಬಂಧಪಟ್ಟಂತೆ ಪೊಲೀಸರು ಬರೋಬ್ಬರಿ 450 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೈಗೌಂಡ್ಸ್ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 

Written by - Channabasava A Kashinakunti | Last Updated : Aug 10, 2022, 01:16 PM IST
  • ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಹಾಗೂ ಮಸಿ ಬಳಿದ ಪ್ರಕರಣ
  • ಪೊಲೀಸರು ಬರೋಬ್ಬರಿ 450 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್
  • 89 ಮಂದಿಯ ಸಾಕ್ಷಿಗಳನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
Rakesh Tikait : ರಾಕೇಶ್ ಟಿಕಾಯತ್​ಗೆ ಮಸಿ ಬಳಿದ ಪ್ರಕರಣ : 450 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು title=

ಬೆಂಗಳೂರು : ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಹಾಗೂ ಮಸಿ ಬಳಿದ ಪ್ರಕರಣ ಸಂಬಂಧಪಟ್ಟಂತೆ ಪೊಲೀಸರು ಬರೋಬ್ಬರಿ 450 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೈಗೌಂಡ್ಸ್ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 

ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ಇಬ್ಬರು ಆರೋಪಿಗಳಿಗೆ ಮಾತ್ರ ಜಾಮೀನು ನೀಡಲಾಗಿದೆ. ಹೈಗೌಂಡ್ಸ್ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಐ ವಿಟ್ನೆಸ್ ಆಗಿ ಇಪ್ಪತ್ತು ಮಂದಿಯ ಹೇಳಿಕೆ ಉಲ್ಲೇಖ ಮಾಡಿದ್ದಾರೆ. ಅಲ್ಲದೆ, ಬರೋಬ್ಬರಿ 89 ಮಂದಿಯ ಸಾಕ್ಷಿಗಳನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ : Davanagere : ಖಾಸಗಿ ಬಸ್ ಪಲ್ಟಿಯಾಗಿ 20 ಜನರಿಗೆ ಗಾಯ..!

ಮಸಿ ಬಳಿಯಲು ವಾರದಿಂದ ಪೋನ್ ನಲ್ಲಿ ಸಂಭಾಷಣೆ ಮಾಡಿದ್ದ ಟೆಕ್ನಿಕಲ್ ಎವಿಡೆನ್ಸ್ ಕೂಡ ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ. ಅಲ್ಲದೆ, ರಿಟ್ರೀವ್ ರಿಪೋರ್ಟ್, ಸಿಸಿಟಿವಿ ಫೋಟೋ ಸಹ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಿದ್ದಾರೆ. 

ಆರೋಪಿಗಳು ಕರ್ನಾಟಕದಲ್ಲಿ ಜನಪ್ರಿಯರಾಗಬೇಕು, ಎಲ್ಲೇ ಹೋದ್ರು ನಮ್ಮ ಕಡೆ ಎಲ್ಲರ ಗಮನವಿರಬೇಕೆಂದು ಕೇಂದ್ರದ ಪ್ರಮುಖ ನಾಯಕರು ಗುರುತಿಸಬೇಕೆಂದು ಮಸಿ ಬಳಿದಿದ್ದಾರೆ. 

ಆರೋಪಿಗಳು ಮೇ 29 ರಾಕೇಶ್ ಟಿಕಾಯತ್ ಬಂದ ದಿನವೇ ಮೊಟ್ಟೆ, ಕೊಳೆತ ಟಮೋಟ ಹೊಡೆಯಲು ಪ್ಲಾನ್ ಮಾಡಿದ್ದರು. ಅದು ಸಾಧ್ಯವಾಗದ ಹಿನ್ನೆಲೆ ಗಾಂಧಿಭವನದ ಬಳಿಯೂ ಮೊಟ್ಟೆ ಕೊಂಡೊಯ್ದಿದ್ದಾರೆ. ಈ ಪ್ಲಾನ್ ಯಶಸ್ಸು ಆಗದ ಹಿನ್ನೆಲೆ, ಆರೋಪಿಗಳು ಪೊಲೀಸ್ ಭದ್ರತೆ ಹಿನ್ನಲೆ ಕೇವಲ ಬಾಟಲ್ ನಲ್ಲಿ ಮಸಿ ತೆಗೆದುಕೊಂಡು ಹೋಗಿದ್ದಾ, ಈ ಬಗ್ಗೆಯೂ ಪೊಲೀಸರು ಉಲ್ಲೇಖಿಸಿದ್ದಾರೆ. 

ಅಲ್ಲದೆ, ಆರೋಪಿಗಳು ನೀಡಿರುವ ಹೇಳಿಕೆಯ ಪ್ರಕಾರ, ಟಿಕಾಯತ್ ಮೇಲೆ ಹಲ್ಲೆ ಮಾಡುವ ಯೋಚನೆಯೂ ಇರಲಿಲ್ಲ‌. ಶಿವಕುಮಾರ್ ರೊಚ್ಚಿಗೆದ್ದು ಲೋಗೊದಿಂದಲೇ ಹಲ್ಲೆ ಮಾಡಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳದ್ದೂ 164 ಹೇಳಿಕೆ ದಾಖಲಿಸಿರೋ ಪೊಲೀಸರು ಉಲ್ಲೇಖಿಸಿದ್ದಾರೆ. 

ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್ ಹೆಚ್ಚಳ, ಮಂಕಿಪಾಕ್ಸ್ ಭೀತಿ- ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದ ಆರೋಗ್ಯ ಸಚಿವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News