ನವದೆಹಲಿ: ಇತ್ತೀಚಿಗೆ ಬಿಜೆಪಿ ಸೇರಿದ್ದ ಬಾಲಿವುಡ್ ನಟ ಸನ್ನಿ ಡಿಯೋಲ್ ಈಗ ಗುರುದಾಸ್ಪುರ್ ದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮಗೆ ಬಾಲಾಕೊಟ್ ವಾಯುದಾಳಿ ಮತ್ತು ಭಾರತದೊಂದಿಗಿನ ಪಾಕ್ ಸಂಬಂಧದ ಬಗ್ಗೆ ಅಷ್ಟು ತಿಳಿದಿಲ್ಲ. ನಾನು ಇಲ್ಲಿ ಬಂದಿರೋದು ಜನರ ಸೇವೆ ಮಾಡಲಿಕ್ಕೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

"ಸಿನಿಮಾಗಳು ಭಿನ್ನ, ಆದರೆ ಇದು ನಿಜ ಜೀವನ ಹೊರತು ಸಿನಿಮಾವಲ್ಲ. ನನ್ನ ಜೀವನದಲ್ಲಿ ನಾನು ಯಾವಾಗಲು ಸಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಅದೇ ರೀತಿ ನನ್ನ ಭಾವನೆ ಗಳು ಅಷ್ಟೇ ಎಂದರು. ಇನ್ನು  ಪ್ರಧಾನಿ ಮೋದಿ ಬಗ್ಗೆ ಪ್ರತಿಕ್ರಿಯಿಸಿದ ಅವರು " ಕಳೆದ ಐದು ವರ್ಷಗಳಲ್ಲಿ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ನಾನು ಅವರಿಗೆ ಇದೆ ರೀತಿ ಉತ್ತಮ ಕೆಲಸವನ್ನು ಮುಂದುವರೆಸುವಂತೆ ಆಶಿಸುತ್ತೇನೆ...ಎಲ್ಲಕ್ಕಿಂತ ಹೆಚ್ಚಾಗಿ ದೇಶವನ್ನು ಒಗ್ಗಟ್ಟಿನಿಂದ ಮುಂದೆ ತೆಗೆದುಕೊಂಡು ಹೋಗಬೇಕು. ಅದು ಉತ್ತಮ ನಾಯಕನ ಲಕ್ಷಣ" ಎಂದು ತಿಳಿಸಿದರು. 


ಮೋದಿ ಅಲೆ ಪ್ರಯೋಜನವನ್ನು ತಾವು ಪಡೆಯುತ್ತಿದ್ದಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸನ್ನಿ ಡಿಯೋಲ್ " ನಾನು ಯಾವುದನ್ನು ಕೂಡ ಎನ್ ಕ್ಯಾಶ್ ಮಾಡುತ್ತಿಲ್ಲ. ನನಗೆ ದೇಶಕ್ಕಾಗಿ ಕೆಲಸ ಮಾಡಬೇಕಷ್ಟೆ . ಒಂದು ವೇಳೆ ನಾನು ಗೆಲುವು ಸಾಧಿಸಿದರೆ ಉತ್ತಮ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಜನರು ರಾಜಕಾರಣಿಗಳು ಏನೂ ಮಾಡುವುದಿಲ್ಲವೆಂದು ಹೇಳುತ್ತಾರೆ.ಆದ್ದರಿಂದ ನಾನು ಬದಲಾವಣೆ ಮಾಡುವುದಕ್ಕಾಗಿ ರಾಜಕೀಯಕ್ಕೆ ಏಕೆ ಇಳಿಯಬಾರದು ಎಂದು ನಿರ್ಧಿರಿಸಿದೆ. ಆಲೋಚನೆಗಳು ಸರಿಯಾಗಿದ್ದರೆ ನೀವು ಏನನಾದರೂ ಸಾಧಿಸಬಹುದು" ಎಂದು ಸನ್ನಿ ಡಿಯೋಲ್ ಆಶಾಭಾವ ವ್ಯಕ್ತಪಡಿಸಿದರು.