ನವದೆಹಲಿ: ಒಂದು ತಿಂಗಳಿಗಿಂತಲೂ ಕಡಿಮೆ ಇರುವ ವಿಧಾನಸಭಾ ಚುನಾವಣೆಗೆ ಈಗ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ವಿಳಂಬದ ಮಧ್ಯೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರೊಂದಿಗಿನ ಮಾತುಕತೆ ಉತ್ತಮವಾಗಿ ಪ್ರಗತಿಯಲ್ಲಿದೆ ಮತ್ತು ಶೀಘ್ರದಲ್ಲೇ ಅಂತಿಮ ತೀರ್ಮಾನವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಅಲ್ಲದೆ ಇದೇ ವೇಳೆ ಅವರು ಶಿವಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡುವ ಬಗ್ಗೆ ತಮ್ಮ ತಂದೆ ಬಾಳ್ ಠಾಕ್ರೆ ಅವರಿಗೆ ಭರವಸೆ ನೀಡಿರುವುದಾಗಿ ತಿಳಿಸಿದರು.ಉದ್ಧವ್ ಠಾಕ್ರೆ ಬಾಂದ್ರಾದ ರಂಗ್ ಶಾರದಾ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಟಿಕೆಟ್ ಆಕಾಂಕ್ಷಿಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. 'ನಾನು ಶಿವ ಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಬಾಲಾಸಾಹೇಬನಿಗೆ ಭರವಸೆ ನೀಡಿದ್ದೆ. ಈ ಭರವಸೆಯನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡಿದ್ದೇನೆ ಎಂದು ಹೇಳಿದರು.


"ನನಗೆ ಮಹಾರಾಷ್ಟ್ರದಲ್ಲಿ ಅಧಿಕಾರ ಬೇಕು, ಹಾಗಾಗಿ ನಾನು ಎಲ್ಲಾ 288 ಸ್ಥಾನಗಳಿಂದ ಆಕಾಂಕ್ಷಿಗಳನ್ನು ಕರೆದಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷವನ್ನು ಬಲಪಡಿಸಲು ನಾನು ಬಯಸುತ್ತೇನೆ. ಬಿಜೆಪಿಯೊಂದಿಗಿನ ಮೈತ್ರಿ ನಡೆದರೆ, ಅವರು ಸ್ಪರ್ಧಿಸುವ ಸ್ಥಾನಗಳಲ್ಲಿ ಬಿಜೆಪಿಯ ವಿಜಯವನ್ನು ಖಚಿತಪಡಿಸಿಕೊಳ್ಳಲು ಶಿವಸೇನೆ ಕೆಲಸ ಮಾಡುತ್ತದೆ. ಬಿಜೆಪಿಯ ಬೆಂಬಲ ಅವರು ಸ್ಪರ್ಧಿಸುವ ಸೇನಾ ಅಭ್ಯರ್ಥಿಗಳಿಗೆ ಯಾವಾಗಲೂ ಇರಬೇಕು ಎಂದು ಹೇಳಿದರು.ಶಿವ ಸೈನಿಕರು ನನ್ನನ್ನು ನಂಬಿದರೆ ಮತ್ತು ನನ್ನೊಂದಿಗೆ ಬೆಂಬಲವಾಗಿದ್ದರೆ ಇದ್ದರೆ, ನಾನು ವಿಶ್ವಾಸದಿಂದ ರಾಜಕೀಯದಲ್ಲಿ ಮುಂದುವರಿಯುವುದಾಗಿ ಹೇಳಿದರು.


ಸೆಪ್ಟೆಂಬರ್ 29 ರಂದು ಮುಂಬೈನಲ್ಲಿ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೀಟು ಹಂಚಿಕೆ ಒಪ್ಪಂದದ ಕುರಿತು ಪ್ರಕಟಣೆ ಪ್ರಕಟವಾಗುವ ಸಾಧ್ಯತೆ ಇದೆ.