ಜೈಪುರ್: ಭಾರತೀಯ ಲೋಕಸೇವಾ ಆಯೋಗದ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ರಾಜಸ್ಥಾನವು ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ಜೈಪುರದ ನಿವಾಸಿಯಾಗಿರುವ ಕನಿಶಕ್ ಕಟಾರಿಯಾ ಅವರು ಮೊದಲ ಸ್ಥಾನ ಪಡೆದಿದ್ದರೆ, ಮಲ್ವಿಯಾ ನಗರದಲ್ಲಿ ವಾಸಿಸುತ್ತಿರುವ ಅಕ್ಷತ್ ಜೈನ್ ಎಂಬಾತ ಎರಡನೇ ಶ್ರೇಯಾಂಕ ಪಡೆದರು.


COMMERCIAL BREAK
SCROLL TO CONTINUE READING

ಯುಪಿಎಸ್​ಸಿಯಲ್ಲಿ ಅಗ್ರಸ್ಥಾನ ಗಳಿಸಿರುವ ಕನಿಶಕ್ ಕಟಾರಿಯಾ ಎಎನ್ಐ ಜೊತೆಗೆ ಮಾತನಾಡುತ್ತಾ, ಇದು ತುಂಬಾ ಆಶ್ಚರ್ಯಕರ ಕ್ಷಣವಾಗಿದೆ. ಯುಪಿಎಸ್​ಸಿ ಪರೀಕ್ಷೆಯಲ್ಲಿ ನಾನು ಮೊದಲ ಸ್ಥಾನ ಪಡೆಯುತ್ತೇನೆ ಎಂದು ನಿರೀಕ್ಷಿಸಿಯೇ ಇರಲಿಲ್ಲ.
ನನಗೆ ನೈತಿಕ ಬೆಂಬಲ ನೀಡಿ ನನ್ನ ಈ ಯಶಸ್ಸಿಗೆ ಕಾರಣರಾದ ನನ್ನ ತಂದೆ-ತಾಯಿ, ಸಹೋದರಿ ಮತ್ತು ನನ್ನ ಗರ್ಲ್ ಫ್ರೆಂಡ್ ಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.



ಐಐಟಿ ಮುಂಬೈನಲ್ಲಿ ತಮ್ಮ ಅಧ್ಯಯನ ಮುಗಿಸಿದ ಕನಿಶಕ್, ವಿದೇಶದಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಕನಿಶಕ್ ತಂದೆ ಸಂವರ್ಲಾಲ್ ವರ್ಮಾ ಐಎಎಸ್ ಅಧಿಕಾರಿಯಾಗಿದ್ದು, ಅವರಿಂದಲೇ ಪ್ರೇರಣೆಗೊಂಡಿದ್ದ ಕನಿಶಕ್ ಲೋಕಸೇವಾ ಆಯೋಗದಲ್ಲಿ ತೇರ್ಗಡೆಯಾಗಿ ದೇಶಸೇವೆ ಮಾಡಬೇಕೆಂದು ನಿರ್ಧರಿಸಿದ್ದರು ಎಂದು ತಿಳಿಸಿದ್ದಾರೆ.


ಕನಿಶಕ್ ಬಾಲ್ಯದಿಂದಲೂ ತುಂಬಾ ಬುದ್ಧಿವಂತನಾಗಿದ್ದನು. ಐಐಟಿ ಮುಂಬೈನಲ್ಲಿ ತಮ್ಮ ಅಧ್ಯಯನ ಮುಗಿಸಿದ ಕನಿಶಕ್, ವಿದೇಶದಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಂದುವರೆಸಿದರು. ಭಾರತಕ್ಕೆ ಮರಳಿದ ಬಳಿಕ ಐಎಎಸ್ ಗಾಗಿ ತಯಾರಿ ನಡೆಸಲು ಇಚ್ಛಿಸಿದರು. ಅದಕ್ಕಾಗಿ ನಾವು ಸಹಕರಿಸಿದೆವು. ಇಂದಿನ ಆತನ ಯಶಸ್ಸು ನಮಗೆ ಬಹಳ ಸಂತೋಷ ತಂದಿದೆ ಎಂದು ಆತನ ತಂದೆ ಸಂವರ್ಲಾಲ್ ವರ್ಮಾ ಹೇಳಿದ್ದಾರೆ.