ನವದೆಹಲಿ: ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರದಂದು ಮೃತಪಟ್ಟಿರುವ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ 15 ವರ್ಷಗಳ ಹಿಂದೆ ವಿಯೆಟ್ನಾಂ ದೇಶದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ. " ಪುನರ್ಜನ್ಮವೊಂದಿದ್ದರೆ ಇದ್ದರೆ, ನಾನು ವಿಯೆಟ್ನಾಮೀಸ್ ಆಗಿ ಜನಿಸಲು ಇಚ್ಚಿಸುತ್ತೇನೆ ಎಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ನ ವಾರ್ಷಿಕ ಸಭೆಯಲ್ಲಿ ಹೇಳಿಕೆ ನೀಡಿದ್ದರು.


COMMERCIAL BREAK
SCROLL TO CONTINUE READING

ಬೆಂಗಳೂರಿನ ಈ ಸಮ್ಮೇಳನದಲ್ಲಿ ಮಾತನಾಡುತ್ತಾ ವಿಯೆಟ್ನಾಂ ಜನರ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ವಿಯೆಟ್ನಾಂ ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಬಗ್ಗೆ ವಿವರಿಸುತ್ತಾ ಜಾರ್ಜ್ ಫೆರ್ನಾಂಡಿಸ್ " ನಾನು ಅದನ್ನು ವಿರೋಧಿಸುತ್ತಿಲ್ಲ; ನಾನು ವಿಯೆಟ್ನಾಂನ ಅಭಿಮಾನಿಯಾಗಿದ್ದೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.ಒಂದು ದೇಶ 100 ವರ್ಷ ಹೇಗೆ ಮುಂದಾಲೋಚನೆ ಮಾಡಬಹುದು ಎನ್ನುವುದಕ್ಕೆ ಅವರು ವಿಯೆಟ್ನಾಂನ್ನು ಉದಾಹರಣೆಯಾಗಿ ನೀಡಿದ್ದರು.


ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಫರ್ನಾಂಡಿಸ್ ವಿಯೆಟ್ನಾಂಗೆ ಭೇಟಿ ನೀಡಿದ ಮೊದಲ ಭಾರತೀಯ ರಕ್ಷಣಾ ಸಚಿವರು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು.ಬಾಂಬೆ ಟ್ಯಾಕ್ಸಿ ಯೂನಿಯನ್ಸ್ ಅಸೋಸಿಯೇಷನ್ ನೇತೃತ್ವ ವಹಿಸಿ ಮುಂದೆ 1967 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಸ್.ಕೆ. ಪಾಟೀಲ್ ಅವರನ್ನು ಜಾರ್ಜ್ ಫರ್ನಾಂಡಿಸ್ ಸೋಲಿಸಿ ಸಕ್ರೀಯ ರಾಜಕಾರಣಕ್ಕೆ ಪ್ರವೇಶಿಸಿದ್ದರು.