ನವದೆಹಲಿ: ಮುಂಬರುವ ಛತ್ತೀಸ್ ಗಡ್ ಮತ್ತು ಸಾರ್ವತ್ರಿಕ ಲೋಕಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಜೋಗಿ ತಾವು ಚತ್ತೀಸ್ ಗಡ್ ದ ಮುಖ್ಯಮಂತ್ರಿಯಾದರೆ ಮಾಯಾವತಿ ಪ್ರಧಾನಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.


COMMERCIAL BREAK
SCROLL TO CONTINUE READING

"ನಾವು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ, ನಾನು ಮುಖ್ಯಮಂತ್ರಿಯಾಗಲು ನಿರ್ಧರಿಸಿದ್ದೇನೆ" ಎಂದು ಅಜಿತ್ ಜೋಗಿ ಹೇಳಿದ್ದಾರೆ.ಈ ಮೊದಲು ಮಧ್ಯಪ್ರದೇಶದಿಂದ ಛತ್ತೀಸ್ ಘಡ್ ವಿಭಜನೆಯಾದ ನಂತರ ಅದರ ಮೊದಲ ಸಿಎಂ ಆಗಿ 2000 ರಲ್ಲಿ ಕಾರ್ಯನಿರ್ವಹಿಸಿದ್ದರು.


ಇದೇ ವೇಳೆ ಮುಂಬರುವ 2019 ರ ವೇಳೆ ಪ್ರಧಾನಿ ಅಭ್ಯರ್ಥಿಗೆ ಬಿಎಸ್ಪಿಯ ಮಾಯಾವತಿ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು. "2019 ರಲ್ಲಿ  ಕಾಂಗ್ರೆಸೇತರ ಮತ್ತು ಬಿಜೆಪಿಯೇತರ ಮೈತ್ರಿಕೂಟ ಬಹುಮತ ಪಡೆಯುತ್ತೆ ಎಂದು ನಾನು ನಂಬಿದ್ದೇನೆ. ಯಾರು ಪ್ರಧಾನಿಯಾಗುತ್ತಾರೆ ಎನ್ನುವುದನ್ನು ಅನಂತರ ನಿರ್ಧರಿಸಲಾಗುತ್ತದೆಯಾದರೂ ನಾನು ವೈಯಕ್ತಿಕವಾಗಿ ನಾಲ್ಕು ಬಾರಿ ಸಿಎಂ ಆಗಿರುವ  ಮಾಯಾವತಿಯವರು ಇದಕ್ಕೆ ಸೂಕ್ತ ರಾಜಕಾರಣಿ" ಎಂದು ಜೋಗಿ ತಿಳಿಸಿದ್ದಾರೆ.


ರಾಜಕಾರಣಕ್ಕೂ ಮೊದಲು ಭಾರತೀಯ ನಾಗರಿಕ ಸೇವೆಯಲ್ಲಿದ್ದ ಜೋಗಿ 1986ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು,ತದನಂತರ ಮೂರು ದಶಕಗಳ ಕಾಲ ಕಾಂಗ್ರೆಸ್ ನಲ್ಲಿದ್ದು 2016 ರಲ್ಲಿ ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತದೆ ಎಂದು ಅವರು 2016 ರಲ್ಲಿ ಕಾಂಗ್ರೆಸ್ ನಿಂದ ಹೊರಬಂದು ತಮ್ಮದೇ ಆದ ಸ್ವಂತ ಪಕ್ಷವನ್ನು ಅವರು ಸ್ಥಾಪಿಸಿದ್ದರು.