ಅಮರಾವತಿ: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ತೆಲುಗು ದೇಶಂ ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆಂದು ಇತ್ತೀಚೆಗೆ ಟೀಕಿಸಿದ್ದ ಜಗನ್‌ ಮೋಹನ್‌ ರೆಡ್ಡಿಯವರ ವೈಎಸ್‌ಆರ್‌ಸಿಪಿ ಪಕ್ಷ, ‘ಪ್ಯಾಕೇಜ್‌ ಸ್ಟಾರ್‌’ ಎಂದು ಟ್ರೋಲ್‌ ಮಾಡಿತ್ತು.


COMMERCIAL BREAK
SCROLL TO CONTINUE READING

ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿರುವ ನಟ ಪವನ್ ಕಲ್ಯಾಣ್, ‘ಇನ್ನೊಂದು ಸಾರಿ ಏನಾದ್ರೂ ಪ್ಯಾಕೇಜ್ ಸ್ಟಾರ್ ಅಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಅಂತಾ ಬೆದರಿಕೆ ಹಾಕಿದ್ದಾರೆ.


ಮಂಗಳವಾರ ಗುಂಟೂರಿನಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೇ ನಿಂತು ಚಪ್ಪಲಿಯಲ್ಲಿ ಹೊಡೆಯುವುದಾಗಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ಪ್ಯಾಕೇಜ್ ಸ್ಟಾರ್ ಎಂದಿರುವವರ ವಿರುದ್ಧ ಕೆಂಡಾಮಂಡಳವಾಗಿರುವ ನಟ ಟ್ರೋಲ್‌ ಮಾಡಿದವರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.


Viral Video: ಮದುವೆ ಮಂಟಪದಲ್ಲಿ ವಧುವನ್ನು ಕಂಡು ಕಿರುಚಾಡುತ್ತಾ ಎದ್ದು ಬಿದ್ದು ಓಡಿಹೋದ ವರ!


ಪವನ್ ಕಲ್ಯಾಣ್ ಅವರನ್ನು ‘ಪ್ಯಾಕೇಜ್ ಸ್ಟಾರ್’ ಎಂದು ಕರೆದು ಟ್ರೋಲ್ ಮಾಡಿದ್ದರು. ಇದು ಟಾಲಿವುಡ್ ಸ್ಟಾರ್ ನಟನ ಪಿತ್ತವನ್ನು ನೆತ್ತಿಗೇರಿಸಿತ್ತು.


ಇದನ್ನೂ ಓದಿ: DENGUE Alert! ಚಿಂತೆ ಹೆಚ್ಚಿಸಲಿದೆಯಾ ಅಕ್ಟೋಬರ್ ತಿಂಗಳು? ನಾವೇನು ಮುಂಜಾಗ್ರತೆ ವಹಿಸಬೇಕು? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ