Car and Bike in Diwali Gift for Employee : ದೀಪಾವಳಿ ಹತ್ತಿರ ಬಂದಿದೆ. ಈ ವಿಶೇಷ ಸಂದರ್ಭದಲ್ಲಿ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಿಹಿತಿಂಡಿಗಳ ಜೊತೆಗೆ ಕೆಲವು ಉಡುಗೊರೆಗಳನ್ನು ಸಹ ನೀಡುತ್ತವೆ. ಈ ಕೆಲವು ಕಂಪನಿಗಳು ಅದನ್ನು ಸ್ಮರಣೀಯವಾಗಿಸಾಲು ತಮ್ಮ ಉದ್ಯೋಗಿಗಳಿಗೆ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಆದ್ರೆ, ಇಲ್ಲೊಬ್ಬ ಮಾಲೀಕ ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರು, ಬೈಕ್ ಗಳನ್ನು ನೀಡಿದ್ದಾರೆ. ಇದು ಸಧ್ಯ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಕೆಲಸವನ್ನು ಉತ್ತೇಜಿಸಲು ಈ ಗಿಫ್ಟ್ಸ್
ಚೆನ್ನೈನ ಆಭರಣ ವ್ಯಾಪಾರಿ ಮತ್ತು ಮಾಲೀಕ ಜಯಂತಿ ಲಾಲ್ ಅವರು ತಮ್ಮ ತಮ್ಮ 10 ಮಂದಿ ಉದ್ಯೋಗಿಗಳಿಗೆ ಕಾರು ಹಾಗೂ 20 ಮಂದಿ ಉದ್ಯೋಗಿಗಳಿಗೆ 20 ಬೈಕ್ ಗಳನ್ನು ನೀಡಿರುವುದಾಗಿ ಹೇಳಿದ್ದಾರೆ. ಈ ಜಇವರು ನನಗೆ ಎಲ್ಲಾ ಸಮಯವನ್ನು ನೀಡಿದ್ದಾರೆ. ಅವರು ಪ್ರತಿ ಕಷ್ಟ ಸುಖದಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಬಹುಮಾನವು ಅವರ ಕೆಲಸವನ್ನು ಪ್ರೋತ್ಸಾಹಿಸಲು ನೀಡುತ್ತಿದ್ದೇನೆ, ಈ ಕೆಲಸದಿಂದ ಅವರಿಗೆ ಕೆಲಸದಲ್ಲಿ ಇನ್ನಷ್ಟು ಆಸಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
Chennai, Tamil Nadu | A jewellery shop owner gifted cars and bikes to his staff as Diwali gifts
They have worked with me through all ups and downs. This is to encourage their work. We are giving cars to 10 people and bikes to 20: Jayanthi Lal, owner of the jewellery shop (16.10) pic.twitter.com/xwUI0sgNRn
— ANI (@ANI) October 17, 2022
ಇದನ್ನೂ ಓದಿ : Viral Video: ಬ್ಯಾಂಕ್ ಲೂಟಿ ಮಾಡಲು ಬಂದ ಕಳ್ಳನನ್ನು ಏಕಾಂಗಿಯಾಗಿ ಹೊಡೆದೋಡಿಸಿದ ಮಹಿಳಾ ಮ್ಯಾನೇಜರ್.. ವಿಡಿಯೋ ನೋಡಿ
ಸೂರತ್‌ನ ವಜ್ರದ ವ್ಯಾಪಾರಿಗಳು ನೀಡಿದ್ದಾರೆ ಈ ರೀತಿಯ ಗಿಫ್ಟ್ಸ್!
ಇಷ್ಟು ದೊಡ್ಡ ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸೂರತ್‌ನ ಕೋಟ್ಯಾಧಿಪತಿ ವಜ್ರದ ಉದ್ಯಮಿ ಸಾವ್ಜಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ ಫ್ಲಾಟ್‌ಗಳು, ಕಾರುಗಳು ಮತ್ತು ಇತರ ಬೆಲೆಬಾಳುವ ಉಡುಗೊರೆಗಳನ್ನು ನೀಡುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದಾರೆ. 2016 ರಲ್ಲಿ, ಅವರು ತಮ್ಮ ಉದ್ಯೋಗಿಗಳಿಗೆ ಮೊದಲ ಬಾರಿಗೆ ದೀಪಾವಳಿ ಬೋನಸ್ ಆಗಿ 400 ಫ್ಲಾಟ್‌ಗಳು ಮತ್ತು 1,260 ಕಾರುಗಳನ್ನು ನೀಡಿದ್ದರು. ಆಗ ಈ ಸುದ್ದಿ ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆದಿತ್ತು. ಅದಾದ ನಂತರ ಹಲವು ವರ್ಷಗಳ ಕಾಲ ತನ್ನ ಸಿಬ್ಬಂದಿಗೆ ಕಾರು ಮತ್ತಿತರ ಬೆಲೆಬಾಳುವ ವಸ್ತುಗಳನ್ನು ನೀಡಿದ ಸುದ್ದಿ ಬರುತ್ತಲೇ ಇತ್ತು. ಇದೀಗ ಚೆನ್ನೈನ ಉದ್ಯಮಿಯೊಬ್ಬರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರು, ಬೈಕ್ ಗಳನ್ನು ನೀಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಯಜಮಾನನಾದರೆ ಹೀಗೇ ಇರಬೇಕು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : DENGUE Alert! ಚಿಂತೆ ಹೆಚ್ಚಿಸಲಿದೆಯಾ ಅಕ್ಟೋಬರ್ ತಿಂಗಳು? ನಾವೇನು ಮುಂಜಾಗ್ರತೆ ವಹಿಸಬೇಕು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.