`ಗಗನಯಾನ`ಕ್ಕೆ 10 ಯಾತ್ರಿಗಳನ್ನು ಸಿದ್ದಗೊಳಿಸುವ ಹೊಣೆ ವಾಯುಸೇನೆಯದ್ದು -ಇಸ್ರೋ
ಮಾನವ ಸಹಿತ ಗಗನಯಾನಕ್ಕೆ 10 ಯಾತ್ರಿಕರನ್ನು ಸಜ್ಜು ಗೊಳಿಸುವ ಹೊಣೆಯನ್ನು ಈಗ ಇಸ್ರೋ ಭಾರತೀಯ ವಾಯುಸೇನೆಗೆ ನೀಡಿದೆ.
ನವದೆಹಲಿ: ಮಾನವ ಸಹಿತ ಗಗನಯಾನಕ್ಕೆ10 ಯಾತ್ರಿಕರನ್ನು ಸಜ್ಜುಗೊಳಿಸುವ ಹೊಣೆಯನ್ನು ಈಗ ಇಸ್ರೋ ಭಾರತೀಯ ವಾಯುಸೇನೆಗೆ ನೀಡಿದೆ.
ದೇಶದ ಮೊದಲ ಮಾನವ ಸಹಿತ ಕಾರ್ಯಕ್ರಮವಾದ ಗಗನಯಾನದ ಭಾಗವಾಗಿ ಈ ಜವಾಬ್ದಾರಿಯನ್ನು ಅದು ವಾಯುಸೇನೆಗೆ ನೀಡಿದೆ.ಈ ಕುರಿತಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ "ನಾವು ಈಗಾಗಲೇ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯವನ್ನು ಮತ್ತು ತರಬೇತಿ ನೀಡುವ ಕಾರ್ಯವನ್ನು ನಾವು ವಾಯುಸೇನೆಗೆ ನೀಡಿದ್ದೇವೆ. ಆದ್ದರಿಂದ ಈಗ 10 ಜನರ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ವಾಯುಸೇನೆ ಹೊರಲಿದೆ. ಮೊದಲ ಎರಡು ಹಂತದ ತರಬೇತಿಯು ಬೆಂಗಳೂರಿನಲ್ಲಿ ನಡೆಯಲಿದೆ. ನಂತರ ಅಂತಿಮ ಹಂತದ ತರಬೇತಿ ವಿದೇಶದಲ್ಲಿ ನಡೆಯಲಿದೆ" ಎಂದು ತಿಳಿಸಿದರು.
'ಗಗನಯಾನ ಕೈಗೊಳ್ಳುವ ತಂಡದ ಸದಸ್ಯರ ಬಗ್ಗೆ ಮಾತನಾಡಿದ ಶಿವನ್ " ನಮಗೆ 10 ಅಭ್ಯರ್ಥಿಗಳು ಗಗನಯಾನ ಕಾರ್ಯಕ್ಕೆ ಅಗತ್ಯವಿದೆ. ಇದರಲ್ಲಿ ನಾವು ಅಂತಿಮವಾಗಿ ನಾವು ಮೂವರನ್ನು ಆಯ್ಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.ಇದೇ ವೇಳೆ ತಂಡದ ಸದಸ್ಯರಿಗೆ ವಿದೇಶದಲ್ಲಿ ತರಬೇತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಇಸ್ರೋ ಅಧ್ಯಕ್ಷ ಶಿವನ್ " ರಷ್ಯ ಅಥವಾ ಫ್ರಾನ್ಸ್ ಈ ವಿಚಾರವಾಗಿ ಚರ್ಚೆಯಲ್ಲಿದೆ, ಆದರೆ ಇನ್ನು ಅಂತಿಮವಾಗಿ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಅವರು ತಿಳಿಸಿದರು.