ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) ಕಳೆದ ತಿಂಗಳು ಸಿಎಸ್‌ಇ 2020 ಅಂತಿಮ ಪರೀಕ್ಷೆ(CSE 2020 final examination)ಯ ಫಲಿತಾಂಶಗಳನ್ನು ಪ್ರಕಟಿಸಿತು. ಇದರಲ್ಲಿ 25 ವರ್ಷದ ದಿವ್ಯಾಂಶು ನಿಗಮ್ ಕೂಡ ಯಶಸ್ವಿಯಾಗಿದ್ದಾರೆ. 44ನೇ ಶ್ರೇಯಾಂಕವನ್ನು ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅವರ ಯಶೋಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಯುಪಿಎಸ್‌ಸಿ ಸಂದರ್ಶನಕ್ಕೆ ತಯಾರಿ ನಡೆಸುವಾಗ ತಮ್ಮ ತಂದೆಯನ್ನು ಕಳೆದುಕೊಂಡ  ದಿವ್ಯಾಂಶುಗೆ ಆಘಾತವಾಗಿತ್ತು. ಈ ಆಘಾತದಿಂದ ಹೊರಬರುವುದು ಅವರಿಗೆ ಸುಲಭವಾಗಿರಲಿಲ್ಲ.   


COMMERCIAL BREAK
SCROLL TO CONTINUE READING

ಕೊರೊನಾ ವೈರಸ್‌ನಿಂದ ತಂದೆಯನ್ನು ಕಳೆದುಕೊಂಡರು


ಉತ್ತರಪ್ರದೇಶದ ರಾಜಧಾನಿಯಾದ ಲಕ್ನೋ ನಿವಾಸಿ ದಿವ್ಯಾಂಶು ನಿಗಮ್(Divyanshu Nigam)ಯುಪಿಎಸ್‌ಸಿ ಸಿಎಸ್‌ಇ 2020ರ ಸಂದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಈ ಮಧ್ಯೆ ಅವರ ತಂದೆಗೆ ಮಾರಕ ಕೊರೊನಾ ವೈರಸ್ ತಗುಲಿತ್ತು. ಜೂನ್ 2020 ರಲ್ಲಿ ಅವರ ತಂದೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದರು.


ಇದನ್ನೂ ಓದಿ: Amazon Flipkart Sale: ಮೂರೇ ದಿನದಲ್ಲಿ ಮಾರಾಟವಾಯ್ತು 1 ಲಕ್ಷಕ್ಕೂ ಹೆಚ್ಚು Xiaomi Smart TV


ತಂದೆಯ ಸಾವಿನಿಂದ ತೀವ್ರ ಆಘಾತ


ದಿವ್ಯಾಂಶು ನಿಗಮ್(Divyanshu Nigam) ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ಅವರ ತಂದೆ ಎಸ್.ಕೆ.ನಿಗಂ ಅವರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ಲಕ್ನೋದ SGPGI ಆಸ್ಪತ್ರೆಗೆ ದಾಖಲಿಸಲಾಯಿತು. ತಂದೆಯ ಆರೋಗ್ಯಕ್ಕೆ ಆದ್ಯತೆ ನೀಡಿದ ಅವರಿಗೆ ಪರೀಕ್ಷಾ ಸಿದ್ಧತೆಯನ್ನು ಕೆಲಕಾಲ ನಿಲ್ಲಿಸಬೇಕಾಯಿತು. ದುರದೃಷ್ಟವಶಾತ್ ಅವರ ತಂದೆ ಆಸ್ಪತ್ರೆಯಿಂದ ಮನೆಗೆ ಮರಳಲಿಲ್ಲ. ಕೊರೊನಾ ವೈರಸ್(CoronaVirus) ಅವರನ್ನು ಬಲಿ ತೆಗೆದುಕೊಂಡಿತ್ತು. ಇದರಿಂದ ದಿವ್ಯಾಂಶು ಸೇರಿದಂತೆ ಅವರ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾದರು.


ತಂದೆ ಬದುಕಿದ್ದರೆ ಮಗನ ಸಾಧನೆ ಬಗ್ಗೆ ಹೆಮ್ಮೆ ಪಡುತ್ತಿದ್ದರು


ತಮ್ಮ ತಂದೆಯನ್ನು ಕಳೆದುಕೊಂಡ ಆಘಾತದಿಂದ ಹೊರಬರಲು ದಿವ್ಯಾಂಶು ನಿಗಮ್ ಅವರಿಗೆ ಕೆಲಸಮಯವೇ ಹಿಡಿಯಿತು. ತುಂಬಾ ದುಃಖದಲ್ಲಿ ಮುಳುಗಿದ್ದ ಅವರಿಗೆ ತಮ್ಮ ಗುರಿಯ ಬಗ್ಗೆ ನೆನಪಾಯಿತು. ಸಂಯಮದಿಂದ ಸಂದಿಗ್ಧಕ್ಕೆ ತಯಾರಿ ಮಾಡುವತ್ತ ಗಮನಹರಿಸಿದರು. ಪ್ರತಿಕೂಲ ಪರಿಸ್ಥಿತಿಯಲ್ಲೂ ತಮಗೆ ತಾವೇ ಧೈರ್ಯ ತೆಗೆದುಕೊಂಡರು. ದಿವ್ಯಾಂಶು ಅವರ ತಂದೆ ಎಸ್.ಕೆ.ನಿಗಮ್(SK Nigam)ಇಂದು ಬದುಕಿದ್ದರೆ ಅವರು ತಮ್ಮ ಮಗನ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿದ್ದರು.


ಇದನ್ನೂ ಓದಿ: ಹಳೆಯ ಪಠ್ಯಕ್ರಮದಂತೆಯೇ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ


ದಿವ್ಯಾಂಶು 3ನೇ ಪ್ರಯತ್ನದಲ್ಲಿ ಯಶಸ್ಸು ಪಡೆದರು


ಬಿಐಟಿಎಸ್ ಪಿಲಾನಿ (ಗೋವಾ) ದಿಂದ ಕೆಮಿಕಲ್ ಇಂಜಿನಿಯರಿಂಗ್ ಮಾಡಿದ ದಿವ್ಯಾಂಶು ನಿಗಮ್ 3ನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದರು. ದೇಶಕ್ಕೆ 44ನೇ ಸ್ಥಾನವನ್ನು ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು. ಇದಕ್ಕೂ ಮುಂಚೆ ಅವರು ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ(UPSC Exam)ಯನ್ನು ಬರೆದಿದ್ದರು. ಆದರೆ ಪ್ರಿಲಿಮ್ಸ್ ಅಲ್ಲಿ ಮಾತ್ರ ತೇರ್ಗಡೆ ಹೊಂದಿದದ್ದ ಅವರು ಮುಂದಿನ ಸುತ್ತಿಗಳಲ್ಲಿ ವಿಫಲರಾಗಿದ್ದರು. ಕೊನೆಗೂ ತಾವಂದುಕೊಂಡಿದ್ದನ್ನು ದಿವ್ಯಾಂಶು ಸಾಧಿಸಿದ್ದಾರೆ. ಅವರ ಯಶೋಗಾಥೆಯು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುವ ಪ್ರತಿಯೊಬ್ಬ ಸರ್ಧಾಕಾಂಕ್ಷಿಗಳಿಗೂ ಸ್ಫೂರ್ತಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.