ನವದೆಹಲಿ: ಐಎಎಸ್ ಟೀನಾ ದಾಬಿ ಅತಿಹೆಚ್ಚು ಚರ್ಚಿತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಇಂದು ನಾವು ಅವರ ಕೆಲವು ವೈಯಕ್ತಿಕ ಜೀವನದ ಸಂಗತಿಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅವರು 2ನೇ ಮದುವೆಯಾದಾಗ ಎಲ್ಲರ ಮನದಲ್ಲಿಯೂ ಒಂದು ಸಾಮಾನ್ಯ ಪ್ರಶ್ನೆ ಕಾಡಿತ್ತು. ಯುವ ಐಎಎಸ್ ಅಧಿಕಾರಿ ಟೀನಾ ವಯಸ್ಸಿನಲ್ಲಿ ತನಗಿಂತಲೂ 13 ವರ್ಷ ಹಿರಿಯ ವ್ಯಕ್ತಿ, ಐಎಎಸ್ ಅಧಿಕಾರಿ ಪ್ರದೀಪ್ ಗಾವಂಡೆ ಅವರನ್ನು ಏಕೆ ಮದುವೆಯಾದರು? ಅನ್ನೋದು.


COMMERCIAL BREAK
SCROLL TO CONTINUE READING

ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತಾವು ಮದುವೆಯಾದ ಕಾರಣವನ್ನು ತಿಳಿಸಿದ್ದಾರೆ. ಐಎಎಸ್ ಟೀನಾ ದಾಬಿ ಮತ್ತು ಐಎಎಸ್ ಪ್ರದೀಪ್ ಗವಾಂಡೆ ಇಬ್ಬರೂ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಗಳು. ಟೀನಾ 2015ರ ಬ್ಯಾಚ್‍ನ ಯುಪಿಎಸ್‍ಸಿ ಟಾಪರ್ ಆಗಿದ್ದರು. ಅದೇ ಬ್ಯಾಚ್‍ನ 2ನೇ ಟಾಪರ್ ಅಥರ್ ಅಮೀರ್ ಖಾನ್ ಜೊತೆಗೆ ಮೊದಲ ಮದುವೆಯಾಗಿದ್ದರು. ಬಳಿಕ ಅವರಿಂದ ವಿಚ್ಛೇದನ ಪಡೆದು ಪ್ರದೀಪ್ ಗವಾಂಡೆ ಜೊತೆಗೆ 2ನೇ ಮದುವೆಯಾದರು.


ಇದನ್ನೂ ಓದಿ: New Year: 2023ರ ದೀರ್ಘ ವಾರಾಂತ್ಯ ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ


ಟೀನಾ ದಾಬಿ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. Instagra ನಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ತಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.  


ಇದೀಗ ಟೀನಾ ದಾಬಿ ಪತಿ ಪ್ರದಿವ್ ಗವಾಂಡೆ ಬಗ್ಗೆ ಮಾತನಾಡೋಣ. ಐಎಎಸ್ ಪ್ರದೀಪ್ ಗವಾಂಡೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಗೆ ಸೇರಿದವರು. ಪ್ರದೀಪ್ ಗಾವಂಡೆ ದೆಹಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಪ್ರದೀಪ್ 2013ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. 478 ರ್ಯಾಂಕ್‍ ಪಡೆದುಕೊಂಡಿದ್ದ ಪ್ರದೀಪ್ ಗಾವಂಡೆ ಡಿಸೆಂಬರ್ 9, 1980ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಪ್ರದೀಪ್ ಗವಾಂಡೆ ಅವರು ಔರಂಗಾಬಾದ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ನಂತರ ಹಲವು ಆಸ್ಪತ್ರೆಗಳಲ್ಲಿ ವೈದ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರದೀಪ್ ಕೂಡ ಮರಾಠಿ ಕುಟುಂಬದವರು, ನನ್ನ ತಾಯಿಯೂ ಮರಾಠಿ ಕುಟುಂಬದವರು ಎಂದು ಐಎಎಸ್ ಟೀನಾ ದಾಬಿ ಹೇಳಿದ್ದಾರೆ.


ಇದನ್ನೂ ಓದಿ: Leave letters Viral: ಡಿ.5ರ ರಾತ್ರಿ 8 ಗಂಟೆಗೆ ನನ್ನ ತಾಯಿ ಸಾಯಲಿದ್ದಾರೆ, ಶಿಕ್ಷಕನ ಲೀವ್ ಲೆಟರ್ ವೈರಲ್!


ಸಂದರ್ಶನವೊಂದರಲ್ಲಿ ಪತಿ ಬಗ್ಗೆ ಹೇಳುತ್ತಾ ಟೀನಾ, ‘ಪ್ರದೀಪ್ ಗವಾಂಡೆ ಒಬ್ಬ ಒಳ್ಳೆಯ ವ್ಯಕ್ತಿ. ಅವರು ಈ ಹಿಂದೆ ನನಗೆ ಪ್ರಪೋಸ್ ಮಾಡಿದ್ದರು’ ಎಂದು ಹೇಳಿಕೊಂಡಿದ್ದಾರೆ. ತನಗಿಂತ 13 ವರ್ಷ ದೊಡ್ಡವರಾದ ಪ್ರದೀಪ್‍ರನ್ನು ಏಕೆ ಮದುವೆಯಾಗಿದ್ದೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ ಟೀನಾ, ‘ವಯಸ್ಸಿನ ಆಧಾರದ ಮೇಲೆ ಸಂಬಂಧಗಳನ್ನು ನಿರ್ಧರಿಸಲಾಗುವುದಿಲ್ಲ. ಪರಸ್ಪರ ತಿಳುವಳಿಕೆ, ಪ್ರೀತಿ ಮತ್ತು ಹೊಂದಾಣಿಕೆ ಬಹಳ ಮುಖ್ಯ’ ಅಂತಾ ಹೇಳಿದ್ದಾರೆ. ಟೀನಾ ಮತ್ತು ಪ್ರದೀಪ್ ಇಬ್ಬರು ಕೋವಿಡ್ 2ನೇ ಅಲೆಯ ಸಮಯದಲ್ಲಿ ಭೇಟಿಯಾಗಿದ್ದರು. ಇಬ್ಬರೂ ರಾಜಸ್ಥಾನ ಆರೋಗ್ಯ ಇಲಾಖೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.