Viral Video : ಮಕ್ಕಳೊಂದಿಗೆ ಟೀಚರ್ ಡ್ಯಾನ್ಸ್! ಸೊಂಟದ ವಿಷ್ಯಾ ಬ್ಯಾಡ ಓ ಶಿಷ್ಯಾ ಎಂದ ನೆಟ್ಟಿಜನ್‌!

Teacher Dance with Students : ಮಹಿಳಾ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಭೋಜ್‌ಪುರಿ ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಶಿಕ್ಷಕಿ ಜೊತೆ ಮಕ್ಕಳೂ ಡ್ಯಾನ್ಸ್‌ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

Written by - Chetana Devarmani | Last Updated : Dec 3, 2022, 07:19 PM IST
  • ಮಕ್ಕಳೊಂದಿಗೆ ಟೀಚರ್ ಡ್ಯಾನ್ಸ್
  • ಭೋಜ್‌ಪುರಿ ಹಾಡಿಗೆ ಕುಣಿದ ಶಿಕ್ಷಕಿ
  • ಎಲ್ಲೆಡೆ ಸಖತ್‌ ವೈರಲ್‌ ಆದ ವಿಡಿಯೋ
Viral Video : ಮಕ್ಕಳೊಂದಿಗೆ ಟೀಚರ್ ಡ್ಯಾನ್ಸ್! ಸೊಂಟದ ವಿಷ್ಯಾ ಬ್ಯಾಡ ಓ ಶಿಷ್ಯಾ ಎಂದ ನೆಟ್ಟಿಜನ್‌!  title=
ಮಕ್ಕಳೊಂದಿಗೆ ಟೀಚರ್ ಡ್ಯಾನ್ಸ್

Teacher Dance with Students : ಅನೇಕ ಬಾರಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಅನೇಕ ಬಾರಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೇಗ ಅರ್ಥವಾಗುವಂತೆ ಪಾಠ ಮಾಡುವುದನ್ನು ಕಾಣಬಹುದು. ಆದರೆ ಈ ವೇಳೆ ಮಹಿಳಾ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಭೋಜ್‌ಪುರಿ ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಶಿಕ್ಷಕಿ ಜೊತೆ ಮಕ್ಕಳೂ ಡ್ಯಾನ್ಸ್‌ ಮಾಡಿದ್ದಾರೆ. 

ಇದನ್ನೂ ಓದಿ :  Mosquito ಕಾಟವೇ? ಸೊಳ್ಳೆ ಓಡಿಸಲು ಸ್ಮಾರ್ಟ್‌ಫೋನ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್‌ ಮಾಡಿ

ಅನೇಕ ಬಳಕೆದಾರರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸೀರೆ ಧರಿಸಿದ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಕೆದಾರರೊಬ್ಬರು ಇದನ್ನು ಟ್ವೀಟ್ ಮಾಡಿದ್ದಾರೆ. ನಮ್ಮ ಬಾಲ್ಯದಲ್ಲಿ ನಮಗೆ ಇಂತಹ ಶಿಕ್ಷಕ ಏಕೆ ಸಿಗಲಿಲ್ಲ ಎಂದು ಈ ವಿಡಿಯೋಗೆ ಶೀರ್ಷಿಕೆ ಬರೆದಿದ್ದಾರೆ.  

 

 

ಶಿಕ್ಷಕಿ ಮಾಡುವ ಸ್ಟೆಪ್ಸ್‌ನ್ನು ಮಕ್ಕಳು ಅನುಸರಿಸುತ್ತಿದ್ದಾರೆ. ಜನರು ಈ ಶಿಕ್ಷಕಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ. ತರಗತಿಯಲ್ಲಿ ಈ ರೀತಿ ನೃತ್ಯ ಮಾಡುವುದು ಸರಿಹೊಂದುವುದಿಲ್ಲ ಎಂದು ಜನರು ಬರೆದಿದ್ದಾರೆ. ಆದರೆ, ಕೆಲವರು ಈ ವಿಡಿಯೋವನ್ನು ಶ್ಲಾಘಿಸಿ ಅದನ್ನು ಶಿಕ್ಷಕರ ವೈಯಕ್ತಿಕ ವಿಷಯವ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಜನರು ತಮ್ಮದೇ ಆದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ :  Video Viral : ಲಿಫ್ಟ್‌ನಲ್ಲಿ ಸಿಲುಕಿ ಒದ್ದಾಡಿದ ಮಕ್ಕಳು.. ಸಿಸಿಟಿವಿ ದೃಶ್ಯ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News