ನವದೆಹಲಿ : ಕೌನ್ಸಿಲ್ ಐಸಿಎಸ್‌ಇ, ಐಎಸ್‌ಸಿ ಮಂಡಳಿಯ ಫಲಿತಾಂಶಗಳನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲು ತೀರ್ಮಾನಿಸಿದೆ. ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಅವರ ಐಸಿಎಸ್ಇ, ಐಎಸ್‌ಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಇದು ಜುಲೈ 24 ರ ಶನಿವಾರ ಕೌನ್ಸಿಲ್ನ ಅಧಿಕೃತ ವೆಬ್ ಸೈಟ್ ಗಳಾದ  cisce.org ಮತ್ತು results.cisce.org. ಲಭ್ಯವಾಗಲಿದೆ.


COMMERCIAL BREAK
SCROLL TO CONTINUE READING

ದಿನಾಂಕವನ್ನು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್(Gerry Arathoon) ಅವರು ಶುಕ್ರವಾರ ಪ್ರಕಟಿಸಿದ್ದಾರೆ. 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಜುಲೈ 24 ರ (ಶನಿವಾರ) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : Maharashtra Rain: ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಆರ್ಭಟ, ಹಲವು ಜಿಲ್ಲೆಗಳು ಜಲಾವೃತ್ತ, ರಕ್ಷಣಾ ಕಾರ್ಯಾಚರಣೆಗಿಳಿದ Army, NDRF


ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶ: ಯಾವಾಗ ಪರಿಶೀಲಿಸಬೇಕು?


ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶಗಳು(Results) ಜುಲೈ 24 ರ ಶನಿವಾರ ಲಭ್ಯವಾಗಲಿದೆ


ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶ: ಎಲ್ಲಿ ಪರಿಶೀಲಿಸಬೇಕು?


ಕೌನ್ಸಿಲ್ ನ  ಅಧಿಕೃತ ವೆಬ್‌ಸೈಟ್‌(Website)ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು cisce.org ಮತ್ತು results.cisce.org ನಲ್ಲಿ ಪರಿಶೀಲಿಸಬಹುದು.


ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ವೇತನದಲ್ಲಿ ₹23760 ಮತ್ತೆ DA ಯಲ್ಲಿ ₹60,480 ಹೆಚ್ಚಳ! ಇಲ್ಲಿದೆ ನೋಡಿ ಲೆಕ್ಕಾಚಾರ


ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶ: ಪರಿಶೀಲಿಸುವುದು ಹೇಗೆ?


* 'Results 2021'' ನೋಡಿ
* unique ID, Index No ಮತ್ತು CAPTCHA ಸೇರಿದಂತೆ ಅಗತ್ಯ ಮಾಹಿತಿಯನ್ನು ನಮೂದಿಸಬೇಕು 
* ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, submit ಬಟನ್ ಕ್ಲಿಕ್ ಮಾಡಿ
* ಆಗ ನಿಮ್ಮ ಫಲಿತಾಂಶವನ್ನು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
* ಉಪಯೋಗಕ್ಕಾಗಿ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.


ಫಲಿತಾಂಶಗಳನ್ನು ಘೋಷಣೆ ನಂತರ ವಿದ್ಯಾರ್ಥಿಗಳು ಅದನ್ನು ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು - cisce.org, ಇದರ ಹೊರತಾಗಿ, ಫಲಿತಾಂಶಗಳು SMS ಮತ್ತು ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ