ಜಮ್ಮುವಿನಲ್ಲಿ ಸ್ಫೋಟಕ ಹೊತ್ತು ತಂದಿದ್ದ ಡ್ರೋನ್ ಪತ್ತೆ: 5 ಕೆಜಿ ಐಇಡಿ ವಶ..!

ಸ್ಫೋಟಕವನ್ನು ಹೊತ್ತು ತಂದಿದ್ದ ಹೆಕ್ಸಾಕೋಪ್ಟರ್  ಡ್ರೋನ್ ಪತ್ತೆಯಾಗಿದೆ.

Written by - Zee Kannada News Desk | Last Updated : Jul 23, 2021, 11:22 AM IST
  • ಸ್ಫೋಟಕ ಹೊತ್ತು ತಂದಿದ್ದ ಹೆಕ್ಸಾಕೋಪ್ಟರ್ ಡ್ರೋನ್ ಹೊಡೆದುರುಳಿಸಿದ ಜಮ್ಮು ಪೊಲೀಸರು
  • ಅಂಕೂರ್ ಪ್ರದೇಶದ ಕಾನಚಕ್ ವಲಯದ ಬಳಿ ಪತ್ತೆಯಾದ ಡ್ರೋನ್ ನಲ್ಲಿತ್ತು 5 ಕೆಜಿ IED ಸ್ಫೋಟಕ
  • ಭಯೋತ್ಪಾದಕರ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಸೂಚನೆ
ಜಮ್ಮುವಿನಲ್ಲಿ ಸ್ಫೋಟಕ ಹೊತ್ತು ತಂದಿದ್ದ ಡ್ರೋನ್ ಪತ್ತೆ: 5 ಕೆಜಿ ಐಇಡಿ ವಶ..!  title=
ಜಮ್ಮು-ಕಾಶ್ಮೀರದಲ್ಲಿ ಸ್ಫೋಟಕವಿದ್ದ ಡ್ರೋನ್ ಪತ್ತೆಯಾಗಿದೆ (Photo Courtesy: ANI)

ಜಮ್ಮು-ಕಾಶ್ಮೀರ: ಸ್ಫೋಟಕವನ್ನು ಹೊತ್ತು ತಂದಿದ್ದ ಹೆಕ್ಸಾಕೋಪ್ಟರ್  ಡ್ರೋನ್ ಜಮ್ಮು-ಕಾಶ್ಮೀರ ಗಡಿಯಲ್ಲಿ ಪತ್ತೆಯಾಗಿದೆ. ಅಂಕೂರ್ ಪ್ರದೇಶದ ಕಾನಚಕ್ ವಲಯದ ಬಳಿ ಗುರುವಾರ ಪತ್ತೆಯಾದ ಸ್ಫೋಟಕವಿದ್ದ ಡ್ರೋನ್ ಅನ್ನು ಜಮ್ಮು-ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ.

ಜಮ್ಮು ವಾಯುನೆಲೆ ಮೇಲೆ ಡ್ರೋನ್ ದಾಳಿ(Drone Attack) ನಡೆಸಿದ ಬಳಿಕ ಮತ್ತೆ ಗಡಿಯಲ್ಲಿ ಸ್ಫೋಟಕ ತುಂಬಿದ ಡ್ರೋನ್ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. 8 ಕಿ. ಮೀ ಅಂತಾರಾಷ್ಟ್ರೀಯ ಗಡಿಯೊಳಗೆ ಪತ್ತೆಯಾದ ಡ್ರೋನ್ ಅನ್ನು ಜಮ್ಮು ಪೊಲೀಸರು ಹೊಡೆದುರುಳಿಸಿದ್ದಾರೆ. ಡ್ರೋನ್ ನಲ್ಲಿ ಉಗ್ರರು ಇರಿಸಿದ್ದ 5 ಕೆಜಿಯಷ್ಟು ಸುಧಾರಿತ ಸ್ಫೋಟಕ ಸಾಧನ(IED)ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ಸಿನ ಆಂತರಿಕ ಕಲಹಕ್ಕೆ ಕೊನೆ ಹಾಡುತ್ತಾ ಟೀ ಪಾರ್ಟಿ..?

ಪಾಕ್ ಮೂಲದ ಲಷ್ಕರ್-ಎ-ತೈಬಾ (LeT) ಉಗ್ರ ಸಂಘಟನೆ ಈ ಡ್ರೋನ್ ಅನ್ನು ಭಾರತದ ಗಡಿಯೊಳಗೆ ಕಳುಹಿಸಿರಬಹುದೆಂದು ತನಿಖೆ ನಡೆಸಲಾಗುತ್ತಿದೆ. ಈ ಹಿಂದೆ ಜಮ್ಮು ವಾಯುನೆಲೆ ಮೇಲೆ ನಡೆಸಿದ್ದ ಡ್ರೋನ್ ದಾಳಿ ಮಾದರಿ ರೂಪದಲ್ಲಿಯೇ ಮತ್ತೊಂದು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರಾ..? ಎಂಬ ಶಂಕೆ ವ್ಯಕ್ತವಾಗಿದೆ.

ಜಮ್ಮ-ಕಾಶ್ಮೀರ(Jammu and Kashmir) ಬಳಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಪತ್ತೆಯಾಗಿರುವುದು ಇದೇ ಮೊದಲೇನಲ್ಲ. ಜುಲೈ 27ರಂದು ಜಮ್ಮು ವಾಯುನೆಲೆ ಮೇಲೆ ಅವಳಿ ಸ್ಫೋಟ ಸಂಭವಿಸಿತ್ತು. ಕಳೆದ ಕೇವಲ ಒಂದೇ ತಿಂಗಳಿನಲ್ಲಿ ಜಮ್ಮುವಿನ ವಿವಿಧ ಪ್ರದೇಶಗಳಲ್ಲಿ ಅನೇಕ ಡ್ರೋನ್ ಗಳು ಪತ್ತೆಯಾಗಿದ್ದವು. ಸ್ಫೋಟಕ ತುಂಬಿದ ಡ್ರೋನ್ ಗಳ ಮೂಲಕ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಭದ್ರತಾ ಪಡೆಗೆ ದೊರೆದಿದೆ.

ಇದನ್ನೂ ಓದಿ: Oxygen shortage:"ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ" ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಡ್ರೋನ್ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್, ಭಯೋತ್ಪಾದಕರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿರಂತರವಾಗಿ ಉಗ್ರರು ಡ್ರೋನ್ ಮೂಲಕ ದಾಳಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅಲರ್ಟ್ ಆಗಿರುವಂತೆ ಅವರು ನಿರ್ದೇಶಿಸಿದ್ದಾರೆ.

ಆಗಸ್ಟ್ 15ರಂದು ನಡೆಯಲಿರುವ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಪಡಿಸಲು ಉಗ್ರರು ಡ್ರೋನ್ ದಾಳಿ ನಡೆಸುವ ಭೀತಿ ಎದುರಾಗಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ(Independence Day) ಸಮಾರಂಭದಲ್ಲಿ ಪಾಲ್ಗೋಳ್ಳುವ ಪ್ರಧಾನಿ ಮೋದಿಯವರ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಲು ಉಗ್ರರ ತಂಡವೊಂದು ಸಂಚು ನಡೆಸುತ್ತಿದೆ ಎಂದು ಈ ಹಿಂದೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News