ಅಹ್ಮದಾಬಾದ್: ಗುಜರಾತ ಚುನಾವಣೆಯ ಮತ ಎಣಿಕೆಗೆ ಕೆಲವೇ ಘಂಟೆಗಳು ಬಾಕಿ ಇವೆ, ಹಾರ್ದಿಕ ಪಟೇಲ ಇವಿಎಮ್ ಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಹಾರ್ದಿಕ್, "ನನ್ನ ಮಾತುಗಳು ನಿಮಗೆ ನಗುವನ್ನು ತರಿಸಬಹುದು, ಆದರೆ  ದೇವರು ಸೃಷ್ಟಿ ಮಾಡಿರುವ ದೇಹವನ್ನು ನಾಶಪಡಿಸಬಹುದಾದರೆ, ಮನುಷ್ಯನೇ ಸೃಷ್ಟಿಸಿರುವ ಈ ಎವಿಎಂಗಳನ್ನು ತಿರುಚಲೇಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನು ಮುಂದುವರೆದು ಇಂದಿನ ದಿನಗಳಲ್ಲಿ ಎಟಿಎಂಗಳನ್ನೇ ಹ್ಯಾಕ್ ಮಾಡುತ್ತಿರಬೇಕಾದರೆ ಇವಿಎಂಗಳೇಕೆ ಸಾಧ್ಯವಿಲ್ಲ" ಎಂದು ಮತಯಂತ್ರದ ಪಾರದರ್ಶಕತೆಯ ಕುರಿತು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.


ಇದೆ ಸಂಧರ್ಭದಲ್ಲಿ ಹಾರ್ಧಿಕ್ ಆದಿವಾಸಿ ಮತ್ತು ಪಟೇಲ್ ಸಮುದಾಯಗಳ ಪ್ರದೇಶಗಳಲ್ಲಿ ಇವಿಎಮ್ ಗಳನ್ನು ಹ್ಯಾಕ್ ಮಾಡುವಂತಹ ಪ್ರಯತ್ನ ನಡೆದಿದೆ ಎಂದು ದೂರಿದ್ದಾರೆ.




ಈ ಆರೋಪವನ್ನು ತಳ್ಳಿಹಾಕಿರುವ ಅಹಮದಾಬಾದ್ ನ ಜಿಲ್ಲಾಧಿಕಾರಿ ಈ ಎಲ್ಲ ಆರೋಪಗಳು ಆಧಾರರಹಿತವಾಗಿದ್ದು.ಇದಕ್ಕೆ ಯಾವುದೇ ರೀತಿಯ ಸ್ಪಷ್ಟೀಕರಣವನ್ನು ನೀಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ  ಸ್ಪಷ್ಟೀಕರಣ ನೀಡಬೇಕಾದರೆ ಅದನ್ನು ಚುನಾವಣಾ ಆಯೋಗದ ಮೂಲಕವೇ ನೀಡಲಾಗುತ್ತದೆ ಎಂದು ತಿಳಿಸಿದರು.