ಎನ್ ಡಿ ಎ ಮೈತ್ರಿಕೂಟಕ್ಕೆ ಮತ ಹಾಕದಿದ್ದರೆ ನಿಮ್ಮ ಪತಿಯನ್ನು ಉಪವಾಸಕ್ಕಿರಿಸಿ- ಸಿಎಂ ನಿತೀಶ್ ಕುಮಾರ್
ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಗಂಡಂದಿರು ಮತ ಚಲಾಯಿಸದಿದ್ದರೆ ಅವರಿಗೆ ಊಟ ನೀಡಬೇಡಿ ಅವರನ್ನು ಉಪವಾಸಕ್ಕೆ ಕೆಡವಿರಿ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಗಂಡಂದಿರು ಮತ ಚಲಾಯಿಸದಿದ್ದರೆ ಅವರಿಗೆ ಊಟ ನೀಡಬೇಡಿ ಅವರನ್ನು ಉಪವಾಸಕ್ಕೆ ಕೆಡವಿರಿ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಿಹಾರದ ಝಾನ್ಜಾರಪುರ್ ನಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು "ನಿಮ್ಮ ಪತಿಗೆ ಮತ ಹಾಕಲು ಹೇಳಿ, ಒಂದು ವೇಳೆ ಎನ್ ಡಿಎ ಮೈತ್ರಿಕೂಟಕ್ಕೆ ಮತ ಚಲಾಯಿಸಿದರೆ ಅವರಿಗೆ ಚೆನ್ನಾಗಿ ಉಣ್ಣಿಸಿ, ಇಲ್ಲದಿದ್ದರೆ ಅವರನ್ನು ಉಪವಾಸಕ್ಕೆ ಕೆಡವಿರಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ ಮಹಾಘಟಬಂಧನ್ ವಿರುದ್ಧ ಕಿಡಿ ಕಾರಿದ ನಿತೀಶ್ ಕುಮಾರ್ ಆರ್ಜೆಡಿ ನಾಯಕನ ಏಕೈಕ ಉದ್ದೇಶ ಬಿಹಾರದ ಜನರನ್ನು ಲೂಟಿ ಮಾಡುವುದು ಎಂದು ಹೇಳಿದರು."ಮಹಾಘಟಬಂಧನ್ ಸಮಾಜವನ್ನು ಜಾತಿ ಸಮುದಾಯದ ಮೂಲಕ ವಿಭಜಿಸಿ ಅಧಿಕಾರಕ್ಕೆ ಏರುವುದು ಅದರ ಪ್ರಮುಖ ಗುರಿ.ಅದರ ಉದ್ದೇಶ ಅಧಿಕಾರವನ್ನು ಪಡೆದು ಲೂಟಿ ಹೊಡೆಯುವುದು ಎಂದು ಅವರು ಕಿಡಿ ಕಾರಿದರು.
ಲೋಕಸಭಾ ಚುನಾವಣೆಯ ಮೂರನೇ ಹಂತದಲ್ಲಿ ಬಿಹಾರದ ಐದು ಸ್ಥಾನಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಜಂಝಾರ್ಪುರ್ ಕೂಡಾ ಸೇರಿದೆ. ಜಂಝಾರ್ಪುರ್ ಲೋಕಸಭಾ ಕ್ಷೇತ್ರದಲ್ಲಿ ಜೆಡಿಯು ರಾಮ್ ಪ್ರೀತ್ ಮಂಡಲ್ ರನ್ನು ಕಣಕ್ಕೆ ಇಳಿಸಿದ್ದು, ರಾಷ್ಟ್ರೀಯ ಜನತಾ ದಳ ಪಕ್ಷವು ಗುಲಾಬ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ.