Who Will Become New CM of Delhi?: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ದಿನಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ದೆಹಲಿಯ ಆಪ್ ಆದ್ಮಿ ಪಕ್ಷದ (AAP) ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, 2 ದಿನಗಳ ನಂತರ ಮುಖ್ಯಮಂತ್ರಿ ಹುದ್ದೆ ತೊರೆಯುವುದಾಗಿ ಹೇಳಿದರು. ʼಚುನಾವಣೆ ಮುಗಿದ ಮೇಲೆ ನಾನೇ ಮತ್ತೆ ಸಿಎಂ ಕುರ್ಚಿಯಲ್ಲಿ ಕೂರುತ್ತೇನೆ, ನನ್ನ ಜಾಗದಲ್ಲಿ ಮತ್ತೊಬ್ಬ ಸಿಎಂ ಬರುತ್ತಾರೆʼ ಎಂದಿದ್ದಾರೆ. ಇದಾದ ನಂತರ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಶುರುವಾಗಿದೆ.


COMMERCIAL BREAK
SCROLL TO CONTINUE READING

ಮನೀಶ್ ಸಿಸೋಡಿಯಾ ಮುಖ್ಯಮಂತ್ರಿಯಾಗಲ್ಲ!


ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ʼದೆಹಲಿಯಲ್ಲಿ ಹೊಸ ಮುಖ್ಯಮಂತ್ರಿ ನೇಮಕವಾಗಲಿದ್ದಾರೆ, ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆ ನಡೆಯುವವರೆಗೆ ಮನೀಶ್ ಸಿಸೋಡಿಯಾ ಜೊತೆಗೆ ಯಾವುದೇ ಹುದ್ದೆಯನ್ನು ತೆಗೆದುಕೊಳ್ಳುವುದಿಲ್ಲವೆಂದು ಅವರು ಹೇಳಿದ್ದಾರೆ. ಅಂದರೆ ಮನೀಶ್ ಸಿಸೋಡಿಯಾ ಕೂಡ ಮುಖ್ಯಮಂತ್ರಿಯಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ: Video: ಸಾರ್ವಜನಿಕ ಸ್ಥಳದಲ್ಲಿ ಕಿರಿ ಸೊಸೆಯ ಮೇಲೆ ಮುಖೇಶ್‌ ಅಂಬಾನಿ ಗರಂ! ದುಃಖ ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟಿದ್ದೇಕೆ ರಾಧಿಕಾ?


ನಂಬಿಕಸ್ಥರಿಗೆ ಕುರ್ಚಿ ಹಸ್ತಾಂತರ?


2 ದಿನಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮತ್ತು ದೆಹಲಿಯಲ್ಲಿ ಅವಧಿಪೂರ್ವ ಚುನಾವಣೆಗೆ ಒತ್ತಾಯಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಜನರು ‘ಪ್ರಾಮಾಣಿಕತೆಯ ಪ್ರಮಾಣಪತ್ರ’ ಕೊಡುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವುದಿಲ್ಲ ಎಂದರು. ಇಂದು ನಿಮ್ಮ ನ್ಯಾಯಾಲಯಕ್ಕೆ ಬಂದಿದ್ದೇನೆ, ಸಾರ್ವಜನಿಕ ನ್ಯಾಯಾಲಯಕ್ಕೆ ಬಂದಿದ್ದೇನೆ ಎಂದು ಘೋಷಿಸಿದರು. ನೀವು ಕೇಜ್ರಿವಾಲ್ ಅವರನ್ನು ಪ್ರಾಮಾಣಿಕ ಅಥವಾ ಅಪರಾಧಿ ಎಂದು ಪರಿಗಣಿಸುತ್ತೀರಾ? ಎಂದು ಕೇಳಲು ನಾನು ಬಂದಿದ್ದೇನೆ. ಕೇಜ್ರಿವಾಲ್‌ ಅವರ ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ತಿರುಗೇಟು ನೀಡಿದ್ದು, ಇದೊಂದು ರಾಜಕೀಯ ಸ್ಟಂಟ್ ಎಂದು ಹೇಳಿದೆ.


ಮುಖ್ಯಮಂತ್ರಿ ರೇಸ್‌ನಲ್ಲಿ ಐವರ ಹೆಸರು


ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನಂತರ ರಾಖಿ ಬಿರ್ಲಾ ಅವರ ಹೆಸರು ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ರಾಖಿ ಬಿರ್ಲಾ ಎಸ್ಸಿ ಮುಖವಾಗಿದ್ದು, ಹಿಂದುಳಿದ ವರ್ಗವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಕುರ್ಚಿ ನೀಡಬಹುದು. ಇದಲ್ಲದೇ ದೆಹಲಿ ಸರ್ಕಾರದ ಸಚಿವೆ ಅತಿಶಿ ಮರ್ಲೆನಾ ಅವರ ಹೆಸರೂ ಕೇಳಿ ಬರುತ್ತಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಲು ಅತಿಶಿ ಅವರನ್ನು ಕೇಜ್ರಿವಾಲ್ ಸೂಚಿಸಿದ್ದರು, ಆದರೆ ಅದನ್ನು ತಿರಸ್ಕರಿಸಲಾಯಿತು. ಸಿಎಂ ರೇಸ್‌ನಲ್ಲಿ ೩ನೇ ಹೆಸರು ಸೌರಭ್ ಭಾರದ್ವಾಜ್, ಅವರು ಪಕ್ಷದ ವಕ್ತಾರರಾಗಿದ್ದಾರೆ. ಇವರು ಕೇಜ್ರಿವಾಲ್ ಜೈಲಿಗೆ ಹೋದ ನಂತರ ಸರ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ದೆಹಲಿಯ ಸಾರಿಗೆ ಮತ್ತು ಪರಿಸರ ಸಚಿವರಾಗಿರುವ ಕೈಲಾಶ್ ಗೆಹ್ಲೋಟ್ ಅವರ ಹೆಸರನ್ನು ಸಹ ಮುಖ್ಯಮಂತ್ರಿ ಹುದ್ದೆಗೆ ಹೆಸರಿಸಲಾಗಿದೆ. ಇದಲ್ಲದೇ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಹೆಸರು ಕೂಡ ಸದ್ದು ಮಾಡುತ್ತಿದೆ. ಕೇಜ್ರಿವಾಲ್ ಅವರ ಪತ್ನಿಯನ್ನು ಮುಖ್ಯಮಂತ್ರಿ ಮಾಡಬೇಕೆಂದು ಬಿಜೆಪಿ ಕೂಡ ಹೇಳುತ್ತಿದೆ.


ಇದನ್ನೂ ಓದಿ: ವಾಹನ ಸವಾರರೇ ಎಚ್ಚರ.. ಈ ಟ್ರಾಫಿಕ್ ನಿಯಮ ಪಾಲಿಸದಿದ್ದರೇ ಬೀಳಲಿದೆ 1000 ರೂಪಾಯಿ ದಂಡ !


6 ಷರತ್ತುಗಳ ಮೇಲೆ ಕೇಜ್ರಿವಾಲ್‌ಗೆ ಜಾಮೀನು!


ಅರವಿಂದ್ ಕೇಜ್ರಿವಾಲ್ 6 ಷರತ್ತುಗಳ ಮೇಲೆ ಜಾಮೀನು ಪಡೆದಿದ್ದಾರೆ. ಇದರಡಿ ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಸರ್ಕಾರದ ಯಾವುದೇ ಕಡತಕ್ಕೆ ಸಹಿ ಹಾಕುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವುದಿಲ್ಲ. 10 ಲಕ್ಷ ರೂ. ಜಾಮೀನು ಬಾಂಡ್ ಪಾವತಿಸಬೇಕಾಗುತ್ತದೆ. ತನಿಖೆಗೆ ಅಡ್ಡಿಪಡಿಸಲು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದಿಲ್ಲ. ಅಗತ್ಯಬಿದ್ದರೆ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ ತನಿಖೆಗೆ ಸಹಕರಿಸಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.