ವಾಹನ ಸವಾರರೇ ಎಚ್ಚರ.. ಈ ಟ್ರಾಫಿಕ್ ನಿಯಮ ಪಾಲಿಸದಿದ್ದರೇ ಬೀಳಲಿದೆ 1000 ರೂಪಾಯಿ ದಂಡ !

Traffic Rules : ವಾಹನ ಚಾಲಕರು ಸಂಚಾರ ನಿಯಮಗಳನ್ನು ತಿಳಿದುಕೊಳ್ಳಬೇಕು. ಟ್ರಾಫಿಕ್ ನಿಯಮಗಳ ಅರಿವಿಲ್ಲದೆ ಅನೇಕರು ಅಪಘಾತಕ್ಕೀಡಾಗುತ್ತಿದ್ದಾರೆ.

Written by - Chetana Devarmani | Last Updated : Sep 15, 2024, 09:13 AM IST
    • ಹೆಚ್‌ಎಸ್‌ಆರ್‌ಪಿ ಎಂದರೇನು?
    • HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು
    • ಬೀಳಲಿದೆ 1000 ರೂಪಾಯಿ ದಂಡ !
ವಾಹನ ಸವಾರರೇ ಎಚ್ಚರ.. ಈ ಟ್ರಾಫಿಕ್ ನಿಯಮ ಪಾಲಿಸದಿದ್ದರೇ ಬೀಳಲಿದೆ 1000 ರೂಪಾಯಿ ದಂಡ !  title=

HSRP number plate: ವಾಹನ ಚಾಲಕರು ಸಂಚಾರ ನಿಯಮಗಳನ್ನು ತಿಳಿದುಕೊಳ್ಳಬೇಕು. ಟ್ರಾಫಿಕ್ ನಿಯಮಗಳ ಅರಿವಿಲ್ಲದೆ ಅನೇಕರು ಅಪಘಾತಕ್ಕೀಡಾಗುತ್ತಿದ್ದಾರೆ. ಇದರ ಜೊತೆಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಚಾಲನಾ ಪರವಾನಗಿ ಎಷ್ಟು ಮುಖ್ಯವೋ ವಾಹನದ ನಂಬರ್ ಪ್ಲೇಟ್ ಸರಿಯಗಿರುವುದು ಅಷ್ಟೇ ಮಹತ್ವದ್ದಾಗಿದೆ. ಅಪಘಾತವಾದರೆ..ಯಾರಾದರೂ ವಾಹನ ಕದ್ದರೆ.. ವಾಹನ ಎಲ್ಲೋ ಬಿಟ್ಟು ಮರೆತರೆ.. ನಂಬರ್ ಪ್ಲೇಟ್ ಮೂಲಕವೇ ಪೊಲೀಸರು ವಾಹನ ಪತ್ತೆ ಹಚ್ಚುತ್ತಾರೆ.

ಇತ್ತೀಚಿನ ದಿನಗಳಲ್ಲಿ ಅನೇಕರು ನಂಬರ್ ಪ್ಲೇಟ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಟ್ರಾಫಿಕ್ ದಂಡವನ್ನು ತಪ್ಪಿಸಲು ಕೆಲವರು ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುತ್ತಾರೆ. ಅಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: Daily GK Quiz: ವಿಶ್ವಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯವನ್ನು ಯಾರು ನಾಶಪಡಿಸಿದರು?

ನ್ಯಾಯಾಲಯದ ಆದೇಶದ ಜೊತೆಗೆ ಸರ್ಕಾರವು HSRP ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯಗೊಳಿಸಿದೆ. ಸರ್ಕಾರ ಈಗಾಗಲೇ ಕೊನೆಯ ದಿನಾಂಕಗಳನ್ನು ವಿಸ್ತರಿಸಿದೆ.. ಮತ್ತೊಮ್ಮೆ ವಿಸ್ತರಣೆಯ ಪ್ರಸ್ತಾಪ ಬಂದಿಲ್ಲ.

ಸರ್ಕಾರ ಈಗಾಗಲೇ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 15, 2024 ಎಂದು ನಿಗದಿಪಡಿಸಿದೆ. ತೆಲಂಗಾಣದಲ್ಲಿ 2 ಕೋಟಿ ವಾಹನಗಳಿದ್ದರೆ, 51 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಲಾಗಿದೆ.

ಇನ್ನೂ 1.49 ಕೋಟಿ ವಾಹನಗಳು ಈ ಮಾನದಂಡಗಳನ್ನು ಪಾಲಿಸಿಲ್ಲ. ಸೆಪ್ಟೆಂಬರ್ 16 ರಿಂದ ತೆಲಂಗಾಣದ ಎಲ್ಲಾ ಜಿಲ್ಲೆಗಳಲ್ಲಿ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಆರಂಭಿಸಲಿದೆ. ಇದರಡಿ ನಂಬರ್‌ ಪ್ಲೇಟ್ ಇಲ್ಲದ ವಾಹನಗಳ ಮಾಲೀಕರು ಮೊದಲ ಬಾರಿ ಸಿಕ್ಕಾಗ 500 ರೂಪಾಯಿ ಪಾವತಿಸಬೇಕಾಗುತ್ತದೆ. ಎರಡನೇ ಬಾರಿ ಸಿಕ್ಕಿಬಿದ್ದರೆ 1000 ರೂ. ದಂಡ ತುಂಬಬೇಕು. ಮೂರನೇ ಬಾರಿಗೆ ಕಠಿಣ ಕ್ರಮ ವಿಧಿಸಲಾಗುವುದು. 

ಕೇಂದ್ರ ಸರ್ಕಾರವು ದೇಶದಾದ್ಯಂತ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸುವ ಎಚ್ ಎಸ್ ಆರ್ ಪಿ ಯೋಜನೆಯನ್ನು ಜಾರಿಗೆ ತಂದಿದೆ. ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಮತ್ತು ಅಪರಾಧಿಗಳ ವಾಹನಗಳನ್ನು ಗುರುತಿಸಲು ಅಧಿಕಾರಿಗಳು ಈ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Road Accident: ಲಾರಿ-ಸರ್ಕಾರಿ ಬಸ್‌ ನಡುವೆ ಭೀಕರ ಅಪಘಾತ, 8 ಮಂದಿ ಸ್ಥಳದಲ್ಲೇ ಸಾವು!

ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು ಹಾಟ್-ಸ್ಟ್ಯಾಂಪ್ಡ್ ಕ್ರೋಮಿಯಂ ಹೊಲೊಗ್ರಾಮ್ ಆಗಿದ್ದು, ಶಾಶ್ವತ ಗುರುತಿನ ಸಂಖ್ಯೆಯಂತಹ ಅನೇಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳನ್ನು ಟ್ಯಾಂಪರ್ ಮಾಡಲು ಹೆಚ್ಚು ಕಷ್ಟಕರವಾಗಿಸುತ್ತದೆ.

ಇವು ನಕಲಿ ನಂಬರ್ ಪ್ಲೇಟ್‌ಗಳನ್ನು ಪತ್ತೆ ಮಾಡುವ ಕೆಲಸವನ್ನು ಸುಲಭ ಮಾಡುತ್ತವೆ. ಒಮ್ಮೆ ನಿಯಮ ಜಾರಿ ಆದರೆ ಯಾವುದೇ ಕಾಲಾವಕಾಶ ಇರುವುದಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News