NSA On Partition Of India: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನಿಂದುದೆಹಲಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮಾರಕದಲ್ಲಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ದೇಶ ವಿಭಜನೆ ಮತ್ತು ನೇತಾಜಿಯವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಿದ್ದಾರೆ. ‘ನೇತಾಜಿ ಸುಭಾಷ್ ಚಂದ್ರ ಬೋಸ್ ಬದುಕಿದ್ದರೆ ಭಾರತ ವಿಭಜನೆ ಆಗುತ್ತಿರಲಿಲ್ಲ’ ಎಂದು ಎನ್ ಎಸ್ ಎ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ನೇತಾಜಿ ತಮ್ಮ ಜೀವನದಲ್ಲಿ ಅನೇಕ ಬಾರಿ ಧೈರ್ಯವನ್ನು ತೋರಿಸಿದ್ದಾರೆ  ಮತ್ತು ಅವರು ಮಹಾತ್ಮ ಗಾಂಧಿಯವರಿಗೆ ಸವಾಲು ಹಾಕುವ ಧೈರ್ಯವನ್ನು ಅವರು ಹೊಂದಿದ್ದರು" ಎಂದು ದೋವಲ್ ಹೇಳಿದ್ದಾರೆ, "ಆದರೆ ಮಹಾತ್ಮ ಗಾಂಧಿಯವರು ತಮ್ಮ ರಾಜಕೀಯ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಆಗ ಬೋಸ್ ಅವರು ಕಾಂಗ್ರೆಸ್ ತೊರೆದಿದ್ದರು. ನಾನು ಒಳ್ಳೆಯದು ಅಥವಾ ಕೆಟ್ಟದು ಎಂದು ಹೇಳುತ್ತಿಲ್ಲ, ಆದರೆ ಭಾರತೀಯ ಇತಿಹಾಸ ಮತ್ತು ವಿಶ್ವ ಇತಿಹಾಸದ ಇಂತಹ ಜನರಲ್ಲಿ ಪ್ರವಾಹದ ವಿರುದ್ಧ ಹೋಗುವ ಧೈರ್ಯವಿತ್ತು ಮತ್ತು ಇದು ಅವರ ಪಾಲಿಗೆ ಸುಲಭದ ಮಾತಾಗಿರಲಿಲ್ಲ ಎಂಬ ಸಮಾನತೆ ಕಂಡುಬರುತ್ತದೆ ಎಂದು ದೊವಲ್ ಹೇಳಿದ್ದಾರೆ. 


"ಜಪಾನ್ ನೇತಾಜಿಯನ್ನು ಬೆಂಬಲಿಸಿತು"
ನೇತಾಜಿ ಏಕಾಂಗಿಯಾಗಿದ್ದರು, ಜಪಾನ್ ಹೊರತುಪಡಿಸಿ ಅವರನ್ನು ಬೆಂಬಲಿಸಲು ಯಾವುದೇ ದೇಶ ಇರಲಿಲ್ಲ ಎಂದು ದೋವಲ್ ಹೇಳಿದ್ದಾರೆ. "ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ಕಡಿಮೆ ಯಾವುದಕ್ಕೂ ನಾನು ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ನೇತಾಜಿ ಹೇಳಿದ್ದರು. ಅವರು ಈ ದೇಶವನ್ನು ರಾಜಕೀಯ ಪರತಂತ್ರದಿಂದ  ಮುಕ್ತಗೊಳಿಸಲು ಬಯಸಿದ್ದಲ್ಲದೆ, ಜನರ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದು ಹೇಳಿದ್ದರು. ಜನರು ಆಕಾಶದಲ್ಲಿನ ಸ್ವತಂತ್ರ ಪಕ್ಷಿಗಳಂತೆ ಭಾವಿಸಬೇಕು ಎನ್ನುತ್ತಿದ್ದರು" ಎಂದು ಎನ್ಎಸ್ಎ ಹೆಲ್ಲಿದ್ದಾರೆ. 


ಇದನ್ನೂ ಓದಿ-Adipurush: 'ಕೀಳು ರಾಜಕೀಯಕ್ಕಾಗಿ ತಾಯಿ ಸೀತೆ - ಶ್ರೀರಾಮನಿಗೆ ಅವಮಾನ'', 'ಆದಿಪುರುಷ್ ಚಿತ್ರದ ವಿರುದ್ಧ ಆಪ್ ಅಸಮಾಧಾನ


ನೇತಾಜಿ ಬದುಕಿದ್ದರೆ ಭಾರತದ ವಿಭಜನೆ ಆಗುತ್ತಿರಲಿಲ್ಲ
"ಬ್ರಿಟಿಷರ ವಿರುದ್ಧ ಹೋರಾಡುತ್ತೇನೆ, ಸ್ವಾತಂತ್ರ್ಯಕ್ಕಾಗಿ ಭಿಕ್ಷೆ ಬೇಡುವುದಿಲ್ಲ, ಅದು ನನ್ನ ಹಕ್ಕು ಮತ್ತು ನಾನು ಅದನ್ನು ಹೊಂದುತ್ತೇನೆ" ಎಂಬ ಆಲೋಚನೆ ನೇತಾಜಿಯವರ ಮನಸ್ಸಿನಲ್ಲಿ ಬಂದಿತ್ತು. "ಸುಭಾಷ್ ಚಂದ್ರ ಬೋಸ್ ಬದುಕಿದ್ದರೆ ಇಂದು ಭಾರತ ವಿಭಜನೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ''ನಾನು ಒಬ್ಬ ನಾಯಕನನ್ನು ಮಾತ್ರ ಒಪ್ಪಿಕೊಳ್ಳಬಲ್ಲೆ ಮತ್ತು ಅದು ಸುಭಾಷ್ ಚಂದ್ರ ಬೋಸ್ ಎಂದು ಜಿನ್ನಾ ಹೇಳಿದ್ದರು" ಎಂದು  ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದ್ದಾರೆ, "ನನಗೆ ನನ್ನ ಜೀವನದಲ್ಲಿ ಒಂದು ಪ್ರಷ್ಟೆ ಆಗಾಗ ಕಾಡುತ್ತದೆ. ಅದೇನೆಂದರೆ ಜೀವನದಲ್ಲಿ, ನಮ್ಮ ಪ್ರಯತ್ನಗಳು ಮುಖ್ಯವೋ ಅಥವಾ ಫಲಿತಾಂಶಗಳು ಮುಖ್ಯ." ಎಂದು ಅಜಿತ್ ದೊವಲ್ ಹೇಳಿದ್ದಾರೆ.


ಇದನ್ನೂ ಓದಿ-Shehbaz Sharif ಪ್ರಧಾನಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆಯೇ? ಪಾಕ್ ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ


"ನೇತಾಜಿಯವರ ಮಹಾನ್ ಪ್ರಯತ್ನಗಳನ್ನು ಯಾರೂ ಸಂದೇಹಿಸಲಾರರು, ಮಹಾತ್ಮ ಗಾಂಧಿಯವರು ಸಹ ಅವರ ಅಭಿಮಾನಿಯಾಗಿದ್ದರು, ಆದರೆ ಜನರು ನಿಮ್ಮ ಫಲಿತಾಂಶಗಳ ಮೂಲಕ ನಿಮ್ಮನ್ನು ನಿರ್ಣಯಿಸುತ್ತಾರೆ. ಆದ್ದರಿಂದ ಸುಭಾಷ್ ಚಂದ್ರ ಬೋಸ್ ಅವರ ಸಂಪೂರ್ಣ ಪ್ರಯತ್ನವು ವ್ಯರ್ಥವಾಯಿತು" ಎಂದು ಎನ್ಎಸ್ಎ ಹೇಳಿದ್ದಾರೆ. "ಇತಿಹಾಸವು ನೇತಾಜಿಗೆ ನಿರ್ದಯವಾಗಿದೆ, ಪ್ರಧಾನಿ ಮೋದಿ ಅದನ್ನು ಪುನರುಜ್ಜೀವನಗೊಳಿಸಲು ಉತ್ಸುಕರಾಗಿದ್ದಾರೆಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ" ಎಂದು ಎನ್ಎಸ್ಎ ಹೇಳಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ