PM Modi US Visit: ಭಾರತದ ಕುರಿತು ಅಮೆರಿಕಾ ಏನು ಯೋಚಿಸುತ್ತದೆ, ಮಾಹಿತಿ ಬಹಿರಂಗಪಡಿಸಿದ ಯುಎಸ್ ಅಧಿಕಾರಿ

PM Modi US Visit: ಈ ಹಿಂದೆ ಪ್ರಧಾನಿ ಮೋದಿ ಸೆಪ್ಟೆಂಬರ್ 2021 ರಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ ಸಭೆಗಾಗಿ ಬಿಡೆನ್ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ತಲುಪಿದ್ದರು. ಪ್ರಧಾನಿ ಮೋದಿ ಮತ್ತು ಜೋ ಬಿಡೆನ್ ಜೂನ್ 21 ರಂದು ಮತ್ತೆ ಪರಸ್ಪರ ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನ ಈ ಸಭೆಯ ನಿಜವಾದ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jun 13, 2023, 11:25 PM IST
  • ಮಾಧ್ಯಮ ವರದಿಗಳ ಪ್ರಕಾರ, ಜಾಗತಿಕ ರಾಜಕೀಯದ ಪ್ರತಿಯೊಂದು ಅಂಶದಲ್ಲೂ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂಪೂರ್ಣ ನಂಬಿಕೆಯನ್ನು ಅಮೆರಿಕ ಹೊಂದಿದೆ.
  • ಕ್ವಾಡ್‌ನಲ್ಲಿ ಮತ್ತು ಜಾಗತಿಕ ವೇದಿಕೆಗಳಲ್ಲಿ ಹಲವಾರು ಸಭೆಗಳಲ್ಲಿ ನಿಕಟವಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಅಧ್ಯಕ್ಷರು ಮೋದಿಯವರನ್ನು ಚೆನ್ನಾಗಿ ಅರಿತಿದ್ದಾರೆ ಎಂದು ಹೇಳುವುದು ನ್ಯಾಯೋಚಿತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
  • ಕ್ವಾಡ್ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ.
PM Modi US Visit: ಭಾರತದ ಕುರಿತು ಅಮೆರಿಕಾ ಏನು ಯೋಚಿಸುತ್ತದೆ, ಮಾಹಿತಿ ಬಹಿರಂಗಪಡಿಸಿದ ಯುಎಸ್ ಅಧಿಕಾರಿ title=

PM Modi US Visit: ಜಾಗತಿಕ ರಾಜಕೀಯದ ಪ್ರತಿಯೊಂದು ಅಂಶಗಳಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಭಾರತಕ್ಕಿಂತ ಅತ್ಯುತ್ತಮ ಪಾಲುದಾರ ರಾಷ್ಟ್ರ ಮತ್ತೊಂದಿಲ್ಲ ಎಂದು  ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾವಿಸಿದ್ದಾರೆ. ಬಿಡೆನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರ ಈ ಹೇಳಿಕೆಯು ಯುಎಸ್ ಆಡಳಿತವು ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕೃತ ಭೇಟಿಗೆ ಆಹ್ವಾನಿಸಿರುವುದರ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.

ಜೂನ್ 22 ರಂದು ಔತಣಕೂಟ
ಅಮೆರಿಕ ಅಧ್ಯಕ್ಷ ಬಿಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅವರು ಜೂನ್ 21 ರಿಂದ 24 ರವರೆಗೆ ಅಮೆರಿಕ ಪ್ರವಾಸದಲ್ಲಿರಲಿದ್ದಾರೆ. ಅಧ್ಯಕ್ಷ ಬಿಡೆನ್ ಮತ್ತು ಅವರ ಪತ್ನಿ ಜೂನ್ 22 ರಂದು ಮೋದಿಯ ಗೌರವಾರ್ಥ ಔತಣಕೂಟವನ್ನು ಆಯೋಜಿಸಲಿದ್ದಾರೆ. 2014 ರಲ್ಲಿ ಪ್ರಧಾನಿಯಾದ ಬಳಿಕ ಸುಮಾರು 6 ಬಾರಿಗಿಂತಲೂ ಹೆಚ್ಚು ಬಾರಿ ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರನ್ನು ಮೊದಲ ಬಾರಿಗೆ ಅಧಿಕೃತ ಅಧಿಕೃತ ರಾಜಕೀಯ ಪ್ರವಾಸಕ್ಕಾಗಿ ಆಹ್ವಾನಿಸಲಾಗಿದೆ. ಈ ಗೌರವವನ್ನು ಅಮೆರಿಕದ ತನ್ನ ಆಪ್ತ ದೇಶಗಳಿಗೆ ಮಾತ್ರ ನೀಡುತ್ತದೆ.

ಸವಾಲುಗಳಿಂದ ಕೂಡಿದ ಸಂದರ್ಭದಲ್ಲಿ ಪಾಲುದಾರಿಕೆಯ ಉದ್ದೇಶ
ವಿಶ್ವದ ಯಾವುದೇ ದೇಶದೊಂದಿಗೆ ಅಮೆರಿಕದ ದ್ವಿಪಕ್ಷೀಯ ಸಂಬಂಧಕ್ಕಿಂತ ಭಾರತದೊಂದಿಗಿನ ಅದರ ಸಂಬಂಧ ಉತ್ತಮವಾಗಿದೆ ಎಂದು ಅಮೆರಿಕಾದ ಅಧ್ಯಕ್ಷರು ಭಾವಿಸುತ್ತಾರೆ ಎಂದು ಬಿಡೆನ್ ಆಡಳಿತದ ಹಿರಿಯ ಅಧಿಕಾರಿ ಸೋಮವಾರ ಮಾಧ್ಯಮಗಳಿಗೆ ಹೇಳಿದ್ದಾರೆ. ನಾವು 21 ನೇ ಶತಮಾನದತ್ತ ನೋಡಿದಾಗ ಮತ್ತು ಈ ಸವಾಲಿನ ಸಮಯದಲ್ಲಿ ನೀವು ಪಾಲುದಾರರಾಗಲು ಬಯಸಿದರೆ, ಭಾರತಕ್ಕಿಂತ ಉತ್ತಮ ಪಾಲುದಾರರಿಲ್ಲ ಎಂದು ಅವರು ಸಂಪೂರ್ಣವಾಗಿ ನಂಬುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ-Strange Facts: ದುಬೈ ಜನರ ಈ ಬೆರಗುಗೊಳಿಸುವ ಈ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಧಾನಿ ಮೋದಿ ರಾಜಕೀಯ ಪ್ರವಾಸಕ್ಕೆ ತೆರಳುತ್ತಿದ್ದಾರೆ
ರಾಜಕೀಯ ಪ್ರವಾಸಕ್ಕೆ ಅಮೆರಿಕದಿಂದ ಆಹ್ವಾನ ಪಡೆದ ಮೂರನೇ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಮೋಡಿಯವರದ್ದಾಗಿದೆ. ಇದಲ್ಲದೆ, ಅಧ್ಯಕ್ಷ ಬಿಡೆನ್ ಅವರಿಂದ ಆಹ್ವಾನ ಪಡೆದ ಮೂರನೇ ವಿದೇಶಿ ನಾಯಕ ಮೋದಿ ಮತ್ತು ಇದು ಭಾರತ-ಯುಎಸ್ ಸಂಬಂಧಗಳು ಮತ್ತು ಮೋದಿಯೊಂದಿಗಿನ ಸ್ನೇಹಕ್ಕೆ ಬಿಡೆನ್ ನೀಡಿದ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಧಿಕೃತ ರಾಜಕೀಯ ಭೇಟಿಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಆಡಳಿತದೊಳಗೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಇದನ್ನೂ ಓದಿ-Weapon Race: ತಮ್ಮ ಕೈಯಾರೆ ತಮ್ಮ ಸಮಾಧಿ ತೋಡಿಕೊಳ್ಳುತ್ತಿವೆ ಸೂಪರ್ ಪವರ್ ರಾಷ್ಟ್ರಗಳು, ಇಲ್ಲಿದೆ ಬೆಚ್ಚಿಬೀಳಿಸುವ ವರದಿ

ಅಮೇರಿಕಾ ಏನು ಯೋಚಿಸುತ್ತದೆ?
ಮಾಧ್ಯಮ ವರದಿಗಳ ಪ್ರಕಾರ, ಜಾಗತಿಕ ರಾಜಕೀಯದ ಪ್ರತಿಯೊಂದು ಅಂಶದಲ್ಲೂ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂಪೂರ್ಣ ನಂಬಿಕೆಯನ್ನು ಅಮೆರಿಕ ಹೊಂದಿದೆ. ಕ್ವಾಡ್‌ನಲ್ಲಿ ಮತ್ತು ಜಾಗತಿಕ ವೇದಿಕೆಗಳಲ್ಲಿ ಹಲವಾರು ಸಭೆಗಳಲ್ಲಿ ನಿಕಟವಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಅಧ್ಯಕ್ಷರು ಮೋದಿಯವರನ್ನು ಚೆನ್ನಾಗಿ ಅರಿತಿದ್ದಾರೆ ಎಂದು ಹೇಳುವುದು ನ್ಯಾಯೋಚಿತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಕ್ವಾಡ್ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡವಳಿಕೆಯನ್ನು ತಡೆಯಲು ಇದನ್ನು 2017 ರಲ್ಲಿ ರಚಿಸಲಾಗಿತ್ತು. ಗಮನಾರ್ಹವೆಂದರೆ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್ 21 ರಿಂದ 24 ರವರೆಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಅವರು ಅಲ್ಲಿನ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ನೋಡಿ-

 

Trending News