ನವದೆಹಲಿ : "ವಂದೇ ಮಾತರಂ ಗೆ ಗೌರವ ನೀಡದೆ, ಇನ್ನೇನು ಅಫ್ಜಲ್ ಗುರುವಿಗೆ ಗೌರವ ನೀಡುತ್ತೀರಾ?" ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾರವಾಗಿ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

"ವಂದೇ ಮಾತರಂ ಕೆ ಬಾರೇ ಮೇನ್ ವಿವಾದ್ ಹೋತಾ ಹೈ, 'ಮಾ ತುಜೆ ಸಲಾಂ' ಮಾ ಕೊ ಸಲಾಮ್ ನಹಿ ಕರೆಂಗೆ ತೋ ಕಿಸ್ಕೋ ಕರೇಂಗೆ? ಅಫ್ಜಲ್ ಗುರು ಕೋ ಕರೇಂಗೆ ಕ್ಯಾ? (ವಂದೇ ಮಾತರಂ 'ತಾಯ್ನಾಡಿನ ಗೀತೆ, ಅದರೊಂದಿಗೆ ಏನು ಸಮಸ್ಯೆ? ನೀವು ನಿಮ್ಮ ತಾಯಿಗೆ ನಮಸ್ಕರಿಸದೆ, ಇನ್ನೇನು ಅಫ್ಜಲ್ ಗುರುವಿಗೆ  ತಾಯಿಗೆ ವಂದಿಸುತ್ತೀರಾ?'' ಎಂದು ಅವರು ಕೇಳಿದರು.


"ವಂದೇ ಮಾತರಂ" ಬದಲಿಗೆ ಶಾಲೆಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ರಾಷ್ಟ್ರೀಯ ಗೀತೆ ಹಾಡುವಂತೆ ಕೆಲವು ರಾಜಕಾರಣಿಗಳು ಹೇಳಿದ ಬಳಿಕ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಈ ರೀತಿ ಪ್ರತಿಕ್ರಿಯಿಸಿದ್ದಾರೆ. 


2001 ರ ಡಿಸೆಂಬರ್ನಲ್ಲಿ ಭಾರತೀಯ ಸಂಸತ್ತಿನ ಮೇಲಿನ ದಾಳಿಯಲ್ಲಿ ಅಫ್ಜಲ್ ಗುರುವಿನ ಪಾತ್ರಕ್ಕಾಗಿ ಆತನಿಗೆ ಮರಣದಂಡನೆ ವಿಧಿಸಲಾಯಿತು.


 'ಭರತ್ ಮಾತಾ ಕಿ ಜೈ' ಚಿತ್ರದಲ್ಲಿ ಕಾಣುವುದು ಕೇವಲ ದೇವತೆಯಲ್ಲ. ಇದು ಜಾತಿ, ಬಣ್ಣ, ಮತ ಮತ್ತು ಧರ್ಮದ ಹೊರತಾಗಿ ಈ ದೇಶದಲ್ಲಿ ವಾಸಿಸುತ್ತಿರುವ ಸುಮಾರು 125 ಕೋಟಿ ಜನರಿಗೆ ಸಂಬಂಧಿಸಿದ್ದು. ಹಾಗಾಗಿ ಎಲ್ಲರೂ ಭಾರತವನ್ನು ಗೌರವಿಸಬೇಕು'' ಎಂದು ನುಡಿದರು.