ನವದೆಹಲಿ:  ಕೊರೊನಾವೈರಸ್‌ನಿಂದಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಿಬಿಡಿಟಿ ಕೊನೆಯ ದಿನಾಂಕವನ್ನು ವಿಸ್ತರಿಸಿದ್ದು ನವೆಂಬರ್ 30 ರೊಳಗೆ ಐಟಿಆರ್ (ITR) ಸಲ್ಲಿಸಬಹುದು. ಆದರೆ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಕಾಲಿಕವಾಗಿ ಸಲ್ಲಿಸುವುದು ಪ್ರಯೋಜನಕಾರಿ. ಆದರೆ ಪ್ಯಾನ್ ಕಾರ್ಡ್ (PAN Card) ಇಲ್ಲದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದೇ? ಎಂದು ನೀವು ಯೋಚಿಸುತ್ತಿದ್ದರೆ ಚಿಂತೆಬಿಡಿ. ಪ್ಯಾನ್ ಸಂಖ್ಯೆ ಇಲ್ಲದಿದ್ದರೆ ಆಧಾರ್‌ನಿಂದ ಐಟಿಆರ್ ಸಲ್ಲಿಸಬಹುದು. ತೆರಿಗೆದಾರರಿಗೆ ಆಧಾರ್‌ನಿಂದ ಐಟಿಆರ್ ಸಲ್ಲಿಸುವಾಗ ಡಬಲ್ ಲಾಭ ಸಿಗುತ್ತದೆ.
 
ಏನದು ಎರೆಡೆರಡು ಲಾಭ?

ಆಧಾರ್‌ನಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದೊಡ್ಡ ಅನುಕೂಲವೆಂದರೆ ಪ್ಯಾನ್ ಕಾರ್ಡ್ ಇಲ್ಲದೆಯೂ ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲಾಗುವುದು. ಎರಡನೆಯದಾಗಿ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ನೀವು ಆಧಾರ್ (Aadhaar) ಮೂಲಕ ಸಲ್ಲಿಸಿದರೆ ಆದಾಯ ತೆರಿಗೆ ಇಲಾಖೆ ನಿಮಗೆ ಪ್ಯಾನ್ ಕಾರ್ಡ್ ಅನ್ನು ಹಂಚುತ್ತದೆ. ಇದರೊಂದಿಗೆ ಆಧಾರ್-ಪ್ಯಾನ್ ಲಿಂಕ್ (Aadhaar-PAN Link) ಅನ್ನು ಸಹ ಲಿಂಕ್ ಮಾಡಲಾಗುತ್ತದೆ. ಸಿಬಿಡಿಟಿ ಪ್ರಕಾರ ಆಧಾರ್‌ನಿಂದ ಐಟಿಆರ್ ಸಲ್ಲಿಸುವ ಸೌಲಭ್ಯ ಹೆಚ್ಚುವರಿ ಸೌಲಭ್ಯವಾಗಿದೆ. ಇದರೊಂದಿಗೆ ಹೆಚ್ಚು ಹೆಚ್ಚು ಜನರು ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗುತ್ತದೆ. ಪ್ಯಾನ್ ಮತ್ತು ಆಧಾರ್ ಅನ್ನು ಪರಸ್ಪರ ಬದಲಾಗಿ ಬಳಸಲು ಅನುಮತಿಸಲಾಗಿದೆ.


COMMERCIAL BREAK
SCROLL TO CONTINUE READING

ಐಟಿಆರ್ ಫೈಲ್ ಆಧಾರ್‌ನಿಂದ ಬಂದಿದ್ದರೂ, ಪ್ಯಾನ್ ಕಾರ್ಡ್ ಅವಶ್ಯಕತೆ ಇದ್ದೇ ಇದೆ. ಏಕೆಂದರೆ ಆಧಾರ್‌ನಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲಾಗುವುದು. ಆದಾಗ್ಯೂ ಇತರ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ.


ತೆರಿಗೆದಾರರ ಸಂಪೂರ್ಣ ವಿವರಗಳು ಲಭ್ಯ:
ಆದಾಯ ತೆರಿಗೆ ಇಲಾಖೆಯು ಆಧಾರ್‌ನಿಂದ ಐಟಿಆರ್ ಸಲ್ಲಿಸುವ ಬಗ್ಗೆ ನಿಮ್ಮ ವಿವರಗಳನ್ನು ಹೊಂದಿರುತ್ತದೆ. ಸಿಬಿಡಿಟಿಯ ಪ್ರಕಾರ, ಅಂತಹ ಸಂದರ್ಭಗಳಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗೆ ಪ್ಯಾನ್ ಹಂಚುವ ಸಾಧ್ಯತೆಯ ಬಗ್ಗೆ ಯೋಚಿಸಬಹುದು. ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ, ಐಟಿಆರ್ ಅನ್ನು ಭರ್ತಿ ಮಾಡುವ ಪ್ರಕ್ರಿಯೆಯಿಂದ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 


ಇದಲ್ಲದೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕೂಡ ಅಗತ್ಯವಾಗಿದೆ. ಇದು ಕಾನೂನಿನಡಿಯಲ್ಲಿ ಕಡ್ಡಾಯವಾಗಿದೆ. ಆದಾಗ್ಯೂ ಈಗ ಈ ಪ್ರಕ್ರಿಯೆಯು ಸುಲಭವಾಗುತ್ತದೆ. ಏಕೆಂದರೆ ಆಧಾರ್‌ನಿಂದ ಐಟಿಆರ್ ಸಲ್ಲಿಸುವಾಗ ತೆರಿಗೆದಾರರಿಗೆ ಪ್ಯಾನ್ ನೀಡಿದಾಗ ಅದನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ. ಸಿಬಿಡಿಟಿಯ ಪ್ರಕಾರ, ಎರಡೂ ಡೇಟಾಬೇಸ್‌ಗಳನ್ನು ಸಂಯೋಜಿಸುವುದು ಅವಶ್ಯಕವಾಗಿದೆ ಮತ್ತು ಇದನ್ನು ಕಾನೂನಿನಲ್ಲಿಯೂ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ.


ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ತೆರಿಗೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಆದರೆ ಈಗಲೂ ದೇಶದಲ್ಲಿ ಕೇವಲ 22 ಕೋಟಿ ಜನರು ಮಾತ್ರ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದ್ದಾರೆ. ಆದರೆ ದೇಶದಲ್ಲಿ 120 ಕೋಟಿಗೂ ಹೆಚ್ಚು ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಉಳಿದ ತೆರಿಗೆ ಪಾವತಿದಾರರು ಸಹ ತೆರಿಗೆ ಪಾವತಿಸಲು ಪ್ರೇರೇಪಿಸಬೇಕಾಗಿದೆ. ಎರಡನೆಯದಾಗಿ ಪ್ಯಾನ್ ಕಾರ್ಡ್ ಇಲ್ಲದ ಗ್ರಾಹಕರು ಆಧಾರ್ ಮೂಲಕ ರಿಟರ್ನ್ಸ್ ಸಲ್ಲಿಸಿದರೆ ಆದಾಯ ತೆರಿಗೆ ಇಲಾಖೆಗೆ ಪ್ಯಾನ್-ಆಧಾರ್ ಡೇಟಾಬೇಸ್ ಅನ್ನು ಸೇರಿಸುವುದು ಸುಲಭವಾಗುತ್ತದೆ.


ಆಧಾರ್‌ನಿಂದ ರಿಟರ್ನ್ ಸಲ್ಲಿಸುವಾಗ ಆದಾಯ ತೆರಿಗೆ ಇಲಾಖೆಯು ಆಧಾರ್ ಮೂಲಕ ತೆರಿಗೆದಾರರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತದೆ. ಆದಾಯ ತೆರಿಗೆ ಇಲಾಖೆಯ ಮೌಲ್ಯಮಾಪನ ಅಧಿಕಾರಿ ವಿವರಗಳಿಗೆ ಹೊಂದಿಕೆ ಮಾಡಿ ತೆರಿಗೆ ಪಾವತಿದಾರರಿಗೆ ಪ್ಯಾನ್ ನೀಡುತ್ತಾರೆ. ಸಿಬಿಡಿಟಿ ಪ್ರಕಾರ ಅಧಿಕಾರಿಯು ಪ್ಯಾನ್ ನೀಡುವ ಮತ್ತು ಆಧಾರ್-ಪ್ಯಾನ್ ಎರಡನ್ನೂ ಲಿಂಕ್ ಮಾಡುವ ಹಕ್ಕನ್ನು ಹೊಂದಿರುತ್ತಾರೆ.