ನವದೆಹಲಿ: ರಸ್ತೆ ಅಪಘಾತಗಳಿಂದ ಉಂಟಾಗುವ ಅಪಾಯಗಳನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಹೊಸ ಮೋಟಾರು ವಾಹನ ಕಾಯ್ದೆ 2019(Motor Vehicles Act 2019) ಸೆಪ್ಟೆಂಬರ್ 1 ರಿಂದ ದೇಶಾದ್ಯಂತ ಜಾರಿಗೆ ತರಲಾಗಿದೆ. ಏತನ್ಮಧ್ಯೆ, 15 ಸಾವಿರ ರೂಪಾಯಿಕೊಟ್ಟು ಕೊಂಡ ಸ್ಕೂಟಿಗೆ 23 ಸಾವಿರ ರೂ. ಚಲನ್, 26 ಸಾವಿರದ ಆಟೋಗೆ 46,500 ರೂ. ಚಲನ್ ಈ ರೀತಿಯ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿ ಕೇಳಿ ಬರುತ್ತಿವೆ. ಆದರೆ ಈ ಮಧ್ಯೆ ದೆಹಲಿಯ ಜಂಟಿ ಪೊಲೀಸ್ ಆಯುಕ್ತರು(ಟ್ರಾಫಿಕ್) ಮೀನು ಚೌಧರಿ ದೊಡ್ಡ ಆದೇಶ ಹೊರಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್:
ಜಂಟಿ ಪೊಲೀಸ್ ಆಯುಕ್ತರು ನೀಡಿದ ಆದೇಶದ ಪ್ರಕಾರ, ಪೊಲೀಸ್ ಕರ್ತವ್ಯದಲ್ಲಿರುವಾಗ ಅಥವಾ ತನ್ನ ಖಾಸಗಿ ವಾಹನದಲ್ಲಿರುವ ಟ್ರಾಫಿಕ್ ಪೊಲೀಸ್ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಆತ ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ದೆಹಲಿ ಪೊಲೀಸರ ಪ್ರತಿಯೊಂದು ಘಟಕಕ್ಕೂ ಆದೇಶದ ಪ್ರತಿ ನೀಡಲಾಗಿದೆ. ಕಾನೂನು ರಕ್ಷಕರಾಗಿರುವ ನಾವೇ(ಪೊಲೀಸರೇ) ಅದನ್ನು ಉಲ್ಲಂಘಿಸಬಾರದು. ಅದಕ್ಕಾಗಿ ಈ ರೀತಿ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.



ಕಾನೂನು ನಿಯಮಗಳ ರಕ್ಷಕರಾಗಿರುವ ಪೊಲೀಸರೇ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲವು ಬಾರಿ ವೈರಲ್ ಆಗಿವೆ. ಕೆಲವರು ಮಾಡುವ ತಪ್ಪಿದೆ ಇಡೀ ಪೊಲೀಸ್ ಇಲಾಖೆಯನ್ನೇ ದೂಷಿಸುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ನಿಯಮಗಳೆಲ್ಲವೂ ಕೇವಲ ಜನ ಸಾಮಾನ್ಯರಿಗೆ ಮಾತ್ರವೇ? ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತದೆ. 


ಈ ಆದೇಶದಿಂದಾಗಿ ಪೊಲೀಸರು ತುಂಬಾ ಅಸಮಾಧಾನಗೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸಂಚಾರ ನಿಯಮಗಳನ್ನು ಅನುಸರಿಸುವುದು ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ? ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ ತುರ್ತು ಸಂದರ್ಭಗಳಲ್ಲಿ ಪ್ರಾಯೋಗಿಕವಾಗಿ ಇದು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ.