ನವದೆಹಲಿ: ಹಿರಿಯ ಬಾಲಿವುಡ್ ನಟಿ ಶಬನಾ ಅಜ್ಮಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿದಲ್ಲಿ ಈಗ ದೇಶದ್ರೋಹಿ ಎನ್ನುವ ಪರಿಸ್ಥಿತಿ ಇದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಮಧ್ಯಪ್ರದೇಶದ ಇಂದೋರ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಶಬನಾ ಅಜ್ಮಿ " ನಮ್ಮ ದೇಶದ ಏಳಿಗೆಗಾಗಿ ತಪ್ಪುಗಳನ್ನು ತೋರಿಸಬೇಕು. ಒಂದು ವೇಳೆ ನಾವು ಹಾಗೆ ಮಾಡದಿದ್ದಲ್ಲಿ ನಮ್ಮ ಸ್ಥಿತಿಯಲ್ಲಿ ಬದಲಾವಣೆಯಾಗುವುದಾದರೂ ಹೇಗೆ ಸಾಧ್ಯ. ಆದರೆ ಈಗ ನಾವು ಸರ್ಕಾರವನ್ನು ಟೀಕಿಸಿದಲ್ಲಿ ನಮ್ಮನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಆದರೆ ನಾವು ಇದಕ್ಕೆ ಹೆದರಬಾರದು, ನಮಗೆ ಯಾರ ಸರ್ಟಿಫಿಕೇಟ್ ಕೂಡ ಅಗತ್ಯವಿಲ್ಲ' ಎಂದು ಹೇಳಿದರು.



ಇನ್ನು ಮುಂದುವರೆದು ಮಾತನಾಡಿದ ಅವರು " ನಾವು ಗಂಗಾ ಜಮುನಾ ಸಂಸ್ಕೃತಿ ವಾತಾವರಣದಲ್ಲಿ ಬೆಳೆದಿದ್ದೇವೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ನಾವು ಮಂಡಿಯೂರಿ ಕುಳಿತುಕೊಳ್ಳಬಾರದು. ಭಾರತ ಒಂದು ಸುಂದರ ದೇಶ, ಜನರನ್ನು ವಿಭಜಿಸುವ ಯಾವುದೇ ಯತ್ನ ದೇಶಕ್ಕೆ ಒಳ್ಳೆಯದಲ್ಲ" ಎಂದು ಹೇಳಿದರು.   


ಮಹಿಳೆಯರಿಗಾಗಿ ಆನಂದ್ ಮೋಹನ್ ಮಾಥೂರ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿರುವ ಕುಂತಿ ಮಾಥೂರ್ ಪ್ರಶಸ್ತಿಯನ್ನು ಶಬನಾ ಅಜ್ಮಿ ಇದೇ ಸಂದರ್ಭದಲ್ಲಿ ಸ್ವೀಕರಿಸಿದರು.