ನವದೆಹಲಿ: ದೇಶಾದ್ಯಂತ ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಆನ್‌ಲೈನ್ ಹಗರಣಕಾರರು ಬಳಕೆದಾರರ ಖಾತೆಗಳ ವಿವರಗಳನ್ನು ಕದಿಯಲು ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಈ ಸಮಯದಲ್ಲಿ ಬ್ಯಾಂಕಿಂಗ್ ವಲಯವು ಸೈಬರ್ ವಂಚನೆಯ ದೊಡ್ಡ ಗುರಿಯಾಗಿದೆ. ಹೀಗಾಗಿ ವಂಚನೆಯಿಂದ ತನ್ನ ಗ್ರಾಹಕರನ್ನು ರಕ್ಷಿಸಲು ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ತನ್ನ ಗ್ರಾಹಕರನ್ನು ಎಚ್ಚರಿಸುತ್ತಲೇ ಇರುತ್ತಾದೆ. ಇಂದು ಸಹ ಎಸ್‌ಬಿಐ ಸುರಕ್ಷಿತ ಬ್ಯಾಂಕಿಂಗ್ ಸಲಹೆಗಳನ್ನು ನೀಡಿದೆ-


COMMERCIAL BREAK
SCROLL TO CONTINUE READING

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಟ್ವಿಟ್ಟರ್ ಖಾತೆಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಸುರಕ್ಷಿತ ಬ್ಯಾಂಕಿಂಗ್ ಸಲಹೆಗಳನ್ನು ನೀಡಿದೆ. ಇದಕ್ಕಾಗಿ ಬ್ಯಾಂಕ್ ವಿಡಿಯೋ  ಒಂದನ್ನು ಬಿಡುಗಡೆ ಮಾಡಿದೆ. ಈ 45 ಸೆಕೆಂಡುಗಳ ವೀಡಿಯೊದಲ್ಲಿ ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ನ ಹಂತಗಳನ್ನು ಎಸ್‌ಬಿಐ ವಿವರಿಸಿದೆ.


ಎಸ್‌ಬಿಐ ಹಂಚಿಕೊಂಡ ವೀಡಿಯೊ ಮೂರು ವಿಭಿನ್ನ ಸಮಯಗಳನ್ನು ತೋರಿಸುತ್ತದೆ -


  • ನೀವು ವಂಚನೆ ಕರೆ, ಇಮೇಲ್ ಮತ್ತು ಸಂದೇಶವನ್ನು ಪಡೆದರೆ ಅದರಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತದೆ ಅಥವಾ ಪಾವತಿ ಬಗ್ಗೆ ಕೇಳಲಾಗುತ್ತದೆ.

  • ಇದಲ್ಲದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಮಾಡದ ವ್ಯವಹಾರಗಳನ್ನು ಕಾಣುವುದು.

  • ನೀವು ವೈಯಕ್ತಿಕ ಮಾಹಿತಿ ಅಥವಾ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಂಡಿದ್ದರೆ...


ಎಸ್‌ಬಿಐನಲ್ಲಿ ಈ ಖಾತೆ ತೆರೆದರೆ ಸಿಗುತ್ತೆ ಬಂಪರ್ ಲಾಭ, ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ


ಬ್ಯಾಂಕ್ ಸಲಹೆ-
ನೆಟ್ ಬ್ಯಾಂಕಿಂಗ್ ಬಳಸುವ ಬಳಕೆದಾರರು ತಮ್ಮ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಸ್‌ಬಿಐ (SBI) ಸಲಹೆ ನೀಡಿದೆ. ಇದಲ್ಲದೆ ನೀವು ಸೈಬರ್ ಅಪರಾಧದ ಬಗ್ಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ (https://cybercrime.gov.in/) ದೂರು ನೀಡಬಹುದು.


ಎಸ್‌ಬಿಐ ಟ್ವೀಟ್ :
ಎಸ್‌ಬಿಐ ತನ್ನ ಟ್ವೀಟ್‌ನಲ್ಲಿ ಜಾಗರೂಕರಾಗಿರಿ ಮತ್ತು ಸೈಬರ್-ಅಪರಾಧಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಇದಲ್ಲದೆ ಹೆಚ್ಚಿನ ಮಾಹಿತಿಗಾಗಿ ನೀವು ಈ ಲಿಂಕ್ https://bit.ly/3h0jWie ಗೆ ಭೇಟಿ ನೀಡಬಹುದು.


ಸರ್ಕಾರಿ ಪೋರ್ಟಲ್‌ನಲ್ಲಿ ದೂರು ನೀಡಿ:
ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ಗ್ರಾಹಕರು ವಂಚನೆ ವಿರುದ್ಧ ದೂರು ನೀಡುತ್ತಾರೆ. ಗ್ರಾಹಕರು ಸೈಬರ್ ಅಪರಾಧ ದೂರನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಈ ಪೋರ್ಟಲ್ ದೇಶದ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.