ನವದೆಹಲಿ: ಈ ವರ್ಷ, ವಿಶ್ವ ಆರೋಗ್ಯ ದಿನದಂದು, ಹಣಕಾಸು ಸೇವಾ ಸಂಸ್ಥೆಯಾದ ಝೆರೋಧಾ, ಆರೋಗ್ಯಕರ ಜೀವನಶೈಲಿಯನ್ನು ಜೀವಿಸಲು ತನ್ನ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಪ್ರಮುಖ ಘೋಷಣೆಯನ್ನು ಮಾಡಿದೆ.


COMMERCIAL BREAK
SCROLL TO CONTINUE READING

ಏನಪ್ಪಾ ಅಂದ್ರೆ ಒಂದು ವೇಳೆ ಉದ್ಯೋಗಿಗಳು ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದೆ ಆದಲ್ಲಿ ಅವರಿಗೆ ಬೋನಸ್ ಆಗಿ ಅರ್ಧ ತಿಂಗಳ ಆದಾಯವನ್ನು ಖಾತರಿಪಡಿಸಿದೆ.


ಕಂಪನಿ ಸಿಇಒ ನಿತಿನ್ ಕಾಮತ್ ಅವರು ಆರೋಗ್ಯ ಮತ್ತು ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಲು ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಅನ್ನು ಕಂಡುಹಿಡಿಯುವುದು ಸರಳ ವಿಧಾನವಾಗಿದೆ ಎಂದು ಹೇಳಿದರು.


ಇದನ್ನೂ ಓದಿ: ನಿಮ್ಮ ಮೊಬೈಲ್ ನಂಬರ್ ನೋಂದಣಿ ಇಲ್ಲದೆಯೇ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಗೊತ್ತೇ?


ಕಾಮತ್ ಅವರ ಲಿಂಕ್ಡ್‌ಇನ್ ಮತ್ತು ಟ್ವಿಟರ್ ಪೋಸ್ಟ್‌ಗಳ ಪ್ರಕಾರ, 25 ಕ್ಕಿಂತ ಕಡಿಮೆ ಬಿಎಂಐ ಹೊಂದಿರುವ ಉದ್ಯೋಗಿಗಳು ಅರ್ಧ ತಿಂಗಳ ಆದಾಯದ ಬೋನಸ್ ಅನ್ನು ಪಡೆಯುತ್ತಾರೆ.ಅಷ್ಟೇ ಅಲ್ಲ, ಉದ್ಯೋಗಿಯ ಬಿಎಂಐ 24ಕ್ಕಿಂತ ಕಡಿಮೆಯಾದರೆ ಆಗಸ್ಟ್ ವೇಳೆಗೆ ಅರ್ಧ ತಿಂಗಳ ವೇತನದ ಬೋನಸ್ ಸಿಗಲಿದೆ ಎಂದು ಉಲ್ಲೇಖಿಸಿದ್ದಾರೆ.


ರಾಜಸ್ಥಾನದ ಕರೌಲಿಯಲ್ಲಿ ಎಪ್ರಿಲ್ 10 ರವರೆಗೆ ಕರ್ಫ್ಯೂ ವಿಸ್ತರಣೆ


ಫೋರ್ಬ್ಸ್‌ನ 2021 ರ ಭಾರತದ ಶ್ರೀಮಂತರ ಪಟ್ಟಿಯಲ್ಲಿ, ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರೇಜ್ ಹೌಸ್ ಝೆರೋಧಾದ ಸಹ-ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ಅವರ ಹಿರಿಯ ಸಹೋದರ ನಿಖಿಲ್ ಕಾಮತ್ ಅವರು 86 ನೇ ಸ್ಥಾನದಲ್ಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.