Akhilesh Uadav CBI Summon: ಯುಪಿ ಗಣಿ ಹಗರಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸಿಬಿಐ ಸಮನ್ಸ್ ಕಳುಹಿಸಿದ್ದು, ಫೆಬ್ರವರಿ 29 ರಂದು ಅವರನ್ನು ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.


COMMERCIAL BREAK
SCROLL TO CONTINUE READING

ಸಿಬಿಐ ಅಖಿಲೇಶ್ ಯಾದವ್ ಅವರಿಗೆ ಸಮನ್ಸ್ ಕಳುಹಿಸಿದ ನಂತರ, ಯುಪಿ ರಾಜಕೀಯ ಬಿಸಿ ಹೆಚ್ಚಾಗಿದೆ. ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದು ಇಂಡಿಯಾ ಮೈತ್ರಿಕೂಟದಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಘಟಕಗಳು ಆರೋಪಿಸುತ್ತಿದೆ. ವಿರೋಧ ಪಕ್ಷಗಳು ಬಂಗಾಳದಿಂದ ಮುಂಬೈವರೆಗೆ, ಅಂದರೆ ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿವೆ.


ಇದನ್ನೂ ಓದಿ: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಯಶಸ್ವಿ ಜೈಸ್ವಾಲ್ ಹೈ ಜಂಪ್… ಅಗ್ರ 10ರತ್ತ ಸ್ಟಾರ್ ಬ್ಯಾಟ್ಸ್’ಮನ್


ಮತ್ತೊಂದೆಡೆ ಭ್ರಷ್ಟಾಚಾರ ತಡೆಯಲು ಕಾನೂನು ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಏಜೆನ್ಸಿಗಳು ತಮ್ಮ ಕೆಲಸ ಮಾಡುತ್ತಿವೆ. ಯಾರೇ ತಪ್ಪು ಮಾಡಿದರೂ ಅವರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಹೇಳುತ್ತಿದ್ದಾರೆ.


100 ಕೋಟಿಗೂ ಹೆಚ್ಚು ಹಗರಣ


ಅಕ್ರಮ ಗಣಿಗಾರಿಕೆ ನಡೆದಿರುವ ಪ್ರಕರಣದಲ್ಲಿ ಸಿಬಿಐ ಹಲವೆಡೆ ತನಿಖೆ ನಡೆಸಿತ್ತು. ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವೆ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಒತ್ತಾಸೆಯಲ್ಲಿ 100 ಕೋಟಿ ರೂ.ಗೂ ಅಧಿಕ ಮೊತ್ತದ ಈ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಆರೋಪಿಸಲಾಗಿದೆ. ಗಾಯತ್ರಿ ಪ್ರಜಾಪತಿ ಅವರು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಈ ವೇಳೆ ಗಣಿ ಹಗರಣ ಬೆಳಕಿಗೆ ಬಂದಿತ್ತು.


ಇದನ್ನೂ ಓದಿ: ಬೇವಿನ ಎಲೆಗಳನ್ನು ಈ ಸಮಯದಲ್ಲಿ ಜಗಿದು ತಿನ್ನಿ: ಈ 4 ರೋಗಗಳು ಶಾಶ್ವತವಾಗಿ ಗುಣವಾಗುತ್ತವೆ


ಇಡೀ ವಿಷಯ ಏನು?


ಬಿ ಚಂದ್ರಕಲಾ ಅವರನ್ನು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಹಮೀರ್‌ಪುರ ಜಿಲ್ಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲಾಯಿತು. 2012ರ ಜುಲೈ ನಂತರ ಹಮೀರ್‌ಪುರ ಜಿಲ್ಲೆಯಲ್ಲಿ 50 ಮೌರಾಂಗ್‌ಗಳಿಗೆ ಗಣಿ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇ-ಟೆಂಡರ್ ಮೂಲಕ ಮೌರಂಗ್ ಲೀಸ್ ಗೆ ಮಂಜೂರಾತಿ ನೀಡಬೇಕೆಂಬ ನಿಯಮವಿತ್ತು ಆದರೆ ಬಿ.ಚಂದ್ರಕಲಾ ಅವರು ಎಲ್ಲ ನಿಬಂಧನೆಗಳನ್ನು ನಿರ್ಲಕ್ಷಿಸಿದ್ದರು. ಮೌರಾಂಗ್ ಅಕ್ರಮ ಗಣಿಗಾರಿಕೆ ಕುರಿತು 2015ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅಕ್ಟೋಬರ್ 16, 2015 ರಂದು, ಹಮೀರ್‌ಪುರದಲ್ಲಿ ನೀಡಲಾದ ಎಲ್ಲಾ 60 ಮೌರಾಂಗ್ ಗಣಿ ಗುತ್ತಿಗೆಗಳನ್ನು ಕಾನೂನುಬಾಹಿರವೆಂದು ಘೋಷಿಸಿ ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ಹೊರತಾಗಿಯೂ ಇಲ್ಲಿ ಭಾರಿ ಪ್ರಮಾಣದಲ್ಲಿ ಗಣಿಗಾರಿಕೆ ನಡೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.