ನವದೆಹಲಿ:ಮೇ ತಿಂಗಳ 15 ದಿನಗಳು ಈಗಾಗಲೇ ಗತಿಸಿವೆ. ದೇಶದ ನಾಗರಿಕರೂ ಅದರಲ್ಲೂ ವಿಶೇಷವಾಗಿ ರೈತರು ಮಾನ್ಸೂನ್ ಗಾಗಿ ಕಾಯಲು ಆರಂಭ್ಸಿದ್ದಾರೆ.ಏತನ್ಮಧ್ಯೆ ಈ ವರ್ಷ ಕೇರಳದಲ್ಲಿ ಮಾನ್ಸೂನ್ 4 ದಿನ ತಡವಾಗಿ ಕದ ತಟ್ಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಈ ವರ್ಷ ಜೂನ್ 5 ರಂದು ಅಂದರೆ ಅಂದರೆ ಈ ಮೊದಲು ಘೋಷಿಸಲಾಗಿರುವ ಅವಧಿಗಿಂತ ಸ್ವಲ್ಪ ತಡವಾಗಿ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಮೊದಲು ಜೂನ್ 1 ರಂದು ಮಾನ್ಸೂನ್ ಕೇರಳಕ್ಕೆ ಪ್ರವೇಶ ನೀಡಲಿದೆ ಎಂದು ಹೇಳಲಾಗಿತ್ತು. ಭಾರತದ ಕೃಷಿ ವ್ಯವಸ್ಥೆಯಾ ಜೊತೆಗೆ ಆರ್ಥಿಕತೆ ಹೆಚ್ಚಾಗಿ ಮಾನ್ಸೂನ್ ಮೇಲೆ ಅವಲಂಭಿಸಿವೆ ಎಂಬುದು ಇಲ್ಲಿ ಗಮನಾರ್ಹ.


COMMERCIAL BREAK
SCROLL TO CONTINUE READING

ಈ ವರ್ಷದ ಜೂನ್ 5 ರಂದು ಕೇರಳದಲ್ಲಿ ಮಾನ್ಸೂನ್ ± 4 ರ ಮಾದರಿ ದೋಷದೊಂದಿಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಕಳೆದ 15 ವರ್ಷಗಳಲ್ಲಿ, 2015 ಹೊರತುಪಡಿಸಿ, ಪ್ರತಿ ಬಾರಿಯೂ ಇಲಾಖೆಯ ಅಂದಾಜು ನಿಖರ ಎಂದು ಸಾಬೀತಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಳೆದ ವರ್ಷ ಜೂನ್ 8 ರಂದು ಮಾನ್ಸೂನ್ ಕೇರಳಕ್ಕೆ ತಲುಪಿದ್ದು, ಹವಾಮಾನ ಇಲಾಖೆ ಜೂನ್ 6 ರ ಅಂದಾಜು ಬಿಡುಗಡೆ ಮಾಡಿತ್ತು. 2018 ರಲ್ಲಿ, ಮೇ 29 ರ ಮುನ್ಸೂಚನೆಯನ್ನು ಬಿಡುಗಡೆ ಮಾಡಲಾಗಿತ್ತು ಮತ್ತು ಮಾನ್ಸೂನ್ ಮೇ 29 ಕ್ಕೆ ಕದ ತಟ್ಟಿತ್ತು, 2017 ರಲ್ಲಿ ಮೇ 30 ಎಂದು ಅಂದಾಜಿಸಲಾಗಿದೆ, ಮಾನ್ಸೂನ್ ಸಹ ಮೇ 30 ಕ್ಕೆ ತಲುಪಿತ್ತು.


ಮೇ 16ಕ್ಕೆ ಅಂಡಮಾನ್ ಹಾಗೂ ನಿಕೊಬಾರ್ ತಲುಪಲಿದೆ ಮಾನ್ಸೂನ್
ಹವಾಮಾನ ಇಲಾಖೆಯ ಅನುಸಾರ ದಕ್ಷಿಣ-ಪಶ್ಚಿಮ ಅಂದರೆ ನೈಋತ್ಯ ಮಾಸ್ನೂನ್ ಮೇ 16 ಕ್ಕೆ ಅಂಡಮಾನ ಮತ್ತು ನಿಕೊಬಾರ್ ಹಾಗೂ ಬಂಗಾಳ ಕೊಲ್ಲಿ ತಲುಪುವ ನಿರೀಕ್ಷೆ ಇದೆ ಎಂದು ಹೇಳಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಮೇ 20 ರಂದು ಮಾನ್ಸೂನ್ ಇಲ್ಲಿಗೆ ತಲುಪಲಿದೆ. ಖಾರಿಫ್ ಬೆಳೆಗಳಾದ ಭತ್ತ,  ಧಾನ್ಯಗಳು, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳನ್ನು ಬಿತ್ತಲು ನೈಋತ್ಯ ಮುಖ್ಯವೆಂದು ಪರಿಗಣಿಸಲಾಗುತ್ತದೆ.