ಆಂಧ್ರ, ಒಡಿಸ್ಸಾಗೆ ಅಪ್ಪಳಿಸಲಿದೆ `ತಿತ್ಲಿ` ಚಂಡಮಾರುತ, ರೆಡ್ ಅಲರ್ಟ್ ಘೋಷಣೆ
ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಚಂಡಮಾರುತದ ಭೀತಿ ಎದುರಾಗಿದೆ ಎಂದು ಮಂಗಳವಾರ ವಿಶೇಷ ಬುಲೆಟಿನ್ನಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಚಂಡಮಾರುತದ ಭೀತಿ ಎದುರಾಗಿದೆ ಎಂದು ಮಂಗಳವಾರ ವಿಶೇಷ ಬುಲೆಟಿನ್ನಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಒರಿಸ್ಸಾ, ಆಂಧ್ರಪ್ರದೇಶ ಕರಾವಳಿ ಪ್ರದೇಶಗಳಲ್ಲಿ ಈ ಚಂಡಮಾರುತದ ಪ್ರಭಾವ ಇರಲಿದ್ದು, ಬುಧವಾರ ಮತ್ತು ಗುರುವಾರ ಒರಿಸ್ಸಾದ ಅನೇಕ ಸ್ಥಳಗಳಲ್ಲಿ ಭಾರೀ ಮಳೆ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದ್ದು, ಆ ಭಾಗಗಳಲ್ಲಿ ರೆಡ್ ಅಲರ್ಟ್ ಜಾರಿ ಮಾಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ 'ತಿತ್ಲಿ' ಎಂದು ಕರೆಯಲಾಗಿದೆ.
ಐಎಂಡಿ ಪ್ರಕಾರ, ಒರಿಸ್ಸಾದಲ್ಲಿ ಆಗ್ನೇಯ ಗೋಪಾಲಪುರದ ಸುಮಾರು 530 ಕಿಮೀ ವರೆಗೆ ಹಾಗೂ ಆಂಧ್ರಪ್ರದೇಶದ ಕಲಿಂಗಪಾತ್ನಾಂನ 480 ಕಿಲೋಮೀಟರ್ ವರೆಗೆ ಈ ಮಾರುತ ಬೀಸಲಿದೆ. ಬಿಲೀವ್ ಸೈನ್ಸ್ ಸೆಂಟರ್ ಆರ್ ಭುವನೇಶ್ವರ ಹವಾಮಾನ ನಿರ್ದೇಶಕ ಹೆಚ್.ಆರ್. ವಿಶ್ವಾಸ್ ಪಿಟಿಐನೊಂದಿಗೆ ಮಾತನಾಡುತ್ತಾ, ''ಮಂಗಳವಾರ ಬೆಳಿಗ್ಗೆ, ತೀರದಿಂದ 500 ಕಿ.ಮೀ ದೂರದಲ್ಲಿದ್ದ ಚಂಡಮಾರುತವು 10 ಕಿ.ಮೀ ವೇಗದಲ್ಲಿ ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ತೀರದ ಕಡೆ ಚಲಿಸುತ್ತಿತ್ತು. ಆದರೆ ಮುಂದಿನ 24 ಗಂಟೆಗಳಲ್ಲಿ ಇದು ಚಂಡಮಾರುತವಾಗಿದೆ ಮತ್ತು ಪಶ್ಚಿಮ-ವಾಯುವ್ಯ ದಿಕ್ಕಿಗೆ ಕೆಲವು ಬಾರಿ ತೀವ್ರವಾದ ಬದಲಾವಣೆ ಉಂಟಾಗಲಿದೆ" ಎಂದು ಹೇಳಿದರು.