ಈ ವರ್ಷ ಮುಂಗಾರಿನ ಮೊದಲ ಮಳೆ ಯಾವಾಗ ಬೀಳಲಿದೆ ಎಂಬುದರ ಮಾಹಿತಿ ಇದೀಗ ಬಹಿರಂಗಗೊಂಡಿದೆ.  ಭಾರತೀಯ ಹವಾಮಾನ ಇಲಾಖೆ (IMD) ಈ ವರ್ಷದ ನೈಋತ್ಯ ಮಾನ್ಸೂನ್ ನ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. ಇಂದು ಭಾರತೀಯ ಹವಾಮಾನ ಇಲಾಖೆ ಮಾನ್ಸೂನ್ ಗಾಗಿ ತನ್ನ ದೀರ್ಘಾವಧಿಯ ಮುನ್ಸೂಚನೆಯನ್ನು ಬಿಡುಗಡೆ ಮಾಡಿದ್ದು, ಈ ವರ್ಷ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಹೇಳಿದೆ. ಮಳೆಗಾಲ ಅಂದರ ಜೂನ್-ಸೆಪ್ಟೆಂಬರ್ ಮಧ್ಯೆ ಶೇ.100ರಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜು ವ್ಯಕ್ತಪಡಿಸಿದೆ. ಪ್ರತಿ ವರ್ಷ ಏಪ್ರಿಲ್ ಮತ್ತು ಜೂನ್ ಈ ಎರಡು ತಿಂಗಳಲ್ಲಿ ಹವಾಮಾನ ಇಲಾಖೆ ದೆಹ್ಸಾದ್ಯಂತ ಮಾನ್ಸೂನ್ ಪರಿಸ್ಥಿತಿಗಳ ಕುರಿತು ತನ್ನ ಅಂದಾಜು ವರದಿಯನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಉತ್ತಮ ಮಾನ್ಸೂನ್ ನಿಂದ ಏನಾಗುತ್ತದೆ?
ಭಾರತದ ಆರ್ಥಿಕತೆಯಲ್ಲಿ ಮಾನ್ಸೂನ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಷೇರು ಮಾರುಕಟ್ಟೆಯಿಂದ ಹಿಡಿದು ಉದ್ಯೋಗ ಕ್ಷೇತ್ರದ ಮೇಲೆ ಮಾನ್ಸೂನ ಪೂರ್ವಾನುಮಾನ ಸಾಕಷ್ಟು ಪ್ರಭಾವ ಬೀರುತ್ತದೆ. ಕಾಲಕ್ಕೆ ತಕ್ಕಂತೆ ಮಳೆಯಾದರೆ ಷೇರು ಮಾರುಕಟ್ಟೆಯಿಂದ ಹಿಡಿದು ಉದ್ಯೋಗ ಕ್ಷೇತ್ರದಲ್ಲಿ ಉತ್ಸಾಹದ ವಾತಾವರಣವಿರುತ್ತದೆ. ಇದೆ ವೇಳೆ ಕಡಿಮೆ ಮಳೆಯಾಗುವ ಸಾಧ್ಯತೆಯಿಂದ ಆರ್ಥಿಕತೆಯು ಆಲಸ್ಯತೆಯಿಂದ ಕೂಡಿರುತ್ತದೆ. ದೇಶದಲ್ಲಿ ಬೀಳುವ ಒಟ್ಟು ಮಳೆಯ ಶೇ.70 ರಷ್ಟು ಮಳೆ ಮಾನ್ಸೂನ್ ಮೇಲೆ ಅವಲಂಭಿಸಿರುತ್ತದೆ. ಇದರ ಮೇಲೆ ಸೋಯಾಬೀನ್, ಹತ್ತಿ, ಬೇಳೆಕಾಳುಗಳು ಹಾಗೂ ಭಟ್ತದಂತಹ ಬೆಳೆಗಳ ಬಿತ್ತನೆ ಅವಲಂಭಿಸಿರುತ್ತದೆ.


ಈ ವರ್ಷದ ಮಾನ್ಸೂನ್ ಕುರಿತು ಮಾಹಿತಿ ನೀಡಿರುವ IMD ದೇಶದಲ್ಲಿ ಈ ಬಾರಿ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಹೇಳಿದೆ. ಆದರೆ, ಈ ಅಂದಾಜಿನಲ್ಲಿ +5 ಅಥವಾ -5 ಪ್ರತಿಶತದಷ್ಟು ಏರುಪೇರಾಗುವ ಸಾಧ್ಯತೆ ಇದೆ. ಜೂನ್ ನಿಂದ ಹಿಡಿದು ಸೆಪ್ಟೆಂಬರ್ ಈ ಅವಧಿಯಲ್ಲಿ ಶೇ.100 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಜೂನ್ 5 ರಿಂದ ಸೆಪ್ಟೆಂಬರ್ 13ರ ಮಧ್ಯೆ ಶೇ.100 ರಷ್ಟು ಮಳೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಎರಡನೇ ಹಂತದ ಅನುಮಾನವನ್ನು ಮೇ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

IMD Highlights
- ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿರಲಿದೆ.
- %9 ರಷ್ಟು ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ ಆಗುವ ಸಾಧ್ಯತೆ.
- ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
- ಕೃಷಿ ಹಾಗೂ ಅರ್ಥವ್ಯವಸ್ಥೆಗೆ ಸಾಮಾನ್ಯ ಮಾನ್ಸೂನ್ ಅವಶ್ಯಕವಾಗಿದೆ.
- ಮೇ-ಜೂನ್ ಅವಧಿಯಲ್ಲಿ ಮಾನ್ಸೂನ್ ಸ್ಥಿತಿ ಇನ್ನಷ್ಟು ಸ್ಪಷ್ಟವಾಗಲಿದೆ.
- ಮೇ ಕೊನೆ ವಾರದಲ್ಲಿ ಅಥವಾ ಜೂನ್ ನ ಮೊದಲ ವಾರದಲ್ಲಿ ಮಾನ್ಸೂನ್ ಕುರಿತು ಎರಡನೇ ಅಂದಾಜು ಪ್ರಕಟಿಸಲಾಗುವುದು.
- LPAಯ ಶೇ.100ರಷ್ಟು ಮಳೆಯಾಗುವ ಸಾಧ್ಯತೆ.
- ಹಲವು ರಾಜ್ಯಗಳಲ್ಲಿ 7-10 ದಿನಗಳು ತಡವಾಗಿ ಬರಲಿದೆ ಮಾನ್ಸೂನ್ 
- ಕೇರಳದಲ್ಲಿ ಜೂನ್ 1ಕ್ಕೆ ಮಾನ್ಸೂನ್ ಕದತಟ್ಟಲಿದೆ.
- ಮುಂಬೈನಲ್ಲಿ ಜೂನ್ 11ರಂದು ಮಾನ್ಸೂನ್ ಕದ ತಟ್ಟಲಿದೆ.
- ಜೂನ್ 27 ಕ್ಕೆ ಮಾನ್ಸೂನ್ ದೆಹಲಿ ಪ್ರವೇಶಿಸಲಿದೆ.
- ಕೊಲ್ಕತ್ತಾದಲ್ಲಿ ಜೂನ್ 11 ಕ್ಕೆ ಮಾನ್ಸೂನ್ ಎಂಟ್ರಿ ನೀಡಲಿದೆ.