ನವದೆಹಲಿ : IMD Alert For Heavy Rainfall : ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿಯಾದರೆ, ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ. ಡಿಸೆಂಬರ್ 1 ರ ವೇಳೆಗೆ ಭಾರತದ 8 ರಾಜ್ಯಗಳಲ್ಲಿ ಭಾರೀ ಮಳೆಯಾಗಬಹುದು  ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಈ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ :
ಭಾರತೀಯ ಹವಾಮಾನ ಇಲಾಖೆಯ (India Meteorological Department) ಪ್ರಕಾರ, ತಮಿಳುನಾಡು, ಪುದುಚೇರಿ (Puducherry), ಕೇರಳ, ಆಂಧ್ರಪ್ರದೇಶ (Andhra Pradesh)  ಮತ್ತು ಲಕ್ಷದ್ವೀಪಗಳಲ್ಲಿ (Lakshadweep)  ಡಿಸೆಂಬರ್ 1 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕೊಮೊರಿನ್ ಪ್ರದೇಶ ಮತ್ತು ಶ್ರೀಲಂಕಾದ ಕರಾವಳಿಯ ಬಳಿ ಬೀಸುವ  ಚಂಡಮಾರುತದ (Cyclone)  ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಲಿದೆ. ಮತ್ತೊಂದೆಡೆ, ಇಡೀ ಸಮಯದಲ್ಲಿ ಈಶಾನ್ಯ ಮಾರುತವೂ ಬೀಸುತ್ತಿದೆ. ಈ ಕಾರಣದಿಂದಾಗಿ ಈ ರಾಜ್ಯಗಳಲ್ಲಿ ಮಳೆಯಾಗಲಿದೆ. ಇದಲ್ಲದೆ, ನವೆಂಬರ್ 29 ರಂದು ಅರಬ್ಬಿ ಸಮುದ್ರದಲ್ಲಿಯೂ ಚಂಡಮಾರುತ ಏಳುವ ಸಂಭವ ಇದೆ. ಇದರಿಂದಾಗಿ,  ಗುಜರಾತ್ (Gujarat), ಗೋವಾ ಮತ್ತು ಮಹಾರಾಷ್ಟ್ರದಲ್ಲಿ (Mahrashtra) ಮಳೆಯಾಗುವ ಸಾಧ್ಯತೆ ಇದೆ. 


ಇದನ್ನೂ ಓದಿ : ಸರ್ಕಾರದ ಸೂಪರ್‌ಹಿಟ್ ಯೋಜನೆ: 1 ರೂ. ಹಾಕಿ 15 ಲಕ್ಷ ಪಡೆಯಿರಿ, ತಕ್ಷಣವೇ ಅರ್ಜಿ ಸಲ್ಲಿಸಿ


ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ  :
 ಈ ಮಧ್ಯೆ, ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಮೀನುಗಾರರು ಮೀನುಗಾರಿಕೆಗೆ ತೆರಳಿದರೆ ಅಪಾಯಕ್ಕೆ ಸಿಲುಕುವ  ಸಾಧ್ಯತೆ ಇದೆ ಎಂದು ಸೂಚನೆ ನೀಡಲಾಗಿದೆ.  


ಶನಿವಾರ ತಮಿಳುನಾಡಿನ ಚೆಂಗಲ್ಪಟ್ಟು, ಕಡಲೂರು, ತಿರುವಳ್ಳೂರು, ಕಾಂಚೀಪುರಂ, ಚೆನ್ನೈ(Chennai), ಕಾರೈಕಾಲ್  ಮತ್ತು ಮೈಲಾಡುತುದುರೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ತಮಿಳುನಾಡಿನಲ್ಲಿ ಇದುವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ. 


ಇದನ್ನೂ ಓದಿ :  ಮಿಜೋರಾಂನಲ್ಲಿ ಮತ್ತೆ ಕಂಪಿಸಿದ ಭೂಮಿ..4.2 ತೀವ್ರತೆ ದಾಖಲು


ಮಳೆಯಿಂದಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಪ್ರವಾಹದಂತಹ ಪರಿಸ್ಥಿತಿ (Flood Like Situation) ಉಂಟಾಗಿದೆ. ಜನರು ಮನೆಯಿಂದ ಹೊರಬರುವಾಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ತೀರಾ ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಹವಾಮಾನ ಇಲಾಖೆ ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.