ನವದೆಹಲಿ : Ration Card Latest News: ಮುಂದಿನ 4 ತಿಂಗಳು ಅಂದರೆ ನವೆಂಬರ್ ವರೆಗೆ ಬಡವರಿಗೆ ಉಚಿತ ಪಡಿತರ (free ration) ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಇದರ ಅಡಿಯಲ್ಲಿ, ಈಗ 5 ಕೆಜಿ ಆಹಾರ ಧಾನ್ಯಗಳನ್ನು ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಇನ್ನೂ ಅನೇಕ ಪ್ರಯೋಜನಗಳನ್ನು ಸಹ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಪಡಿತರ ಕಾರ್ಡ್ ಅಗತ್ಯ :
ಪಡಿತರ ಚೀಟಿಯಿಂದ ಇನ್ನೂ ಅನೇಕ ಪ್ರಯೋಜನಗಳಿವೆ (Ration card benfits). ಪಡಿತರ ಕಾರ್ಡ್ ಶ್ರೀಮಂತನಾಗಲಿ ಅಥವಾ ಬಡವರಾಗಲಿ ಎಲ್ಲರಿಗೂ  ಬಹಳ ಮುಖ್ಯವಾದುದು. ಇದನ್ನು ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ, ಬಡ ಜನರಿಗೆ ಸರ್ಕಾರ ಉಚಿತ ಪಡಿತರ ಸೌಲಭ್ಯಗಳನ್ನು ನೀಡಿತ್ತು.


ಇದನ್ನೂ ಓದಿ : Pornography case: ಮಾಡೆಲ್, ನಟಿ ಗೆಹಾನಾ ವಸಿಷ್ಠ ಸೇರಿ ಮೂವರಿಗೆ ಮುಂಬೈ ಕ್ರೈ ಬ್ರಾಂಚ್ ಸಮನ್ಸ್..!


4 ತಿಂಗಳ ಉಚಿತ ಪಡಿತರ :
ನವೆಂಬರ್ ವರೆಗೆ ಬಡವರಿಗೆ ಉಚಿತ ಪಡಿತರ ನೀಡುವುದಾಗಿ ಸರ್ಕಾರ (governmet) ಘೋಷಿಸಿದೆ. ಈ ಯೋಜನೆಯ ಮೂಲಕ ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರ ಸೌಲಭ್ಯ ನೀಡಲಾಗುವುದು. ಇದರ ಅಡಿಯಲ್ಲಿ 5 ಕೆಜಿ ಆಹಾರ ಧಾನ್ಯಗಳನ್ನು ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. 


ಪಡಿತರ ಚೀಟಿಯ ಪ್ರಯೋಜನಗಳು :
ರೇಶನ್  ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ಆಗಿ ಬಳಸಬಹುದು. ಇದಲ್ಲದೆ, ಇದು ಗುರುತಿನ ಚೀಟಿಯಂತೆಯೂ ಕಾರ್ಯನಿರ್ವಹಿಸುತ್ತದೆ. ನೀವು ಈ ಕಾರ್ಡ್ ಅನ್ನು ಬ್ಯಾಂಕ್ (Bank) , ಲ್ಯಾಂಡ್ ಪೇಪರ್ಸ್, ಗ್ಯಾಸ್ ಸಂಪರ್ಕದಂತಹ ಎಲ್ಲಾ ರೀತಿಯ ಕೆಲಸಗಳಿಗೆ ಬಳಸಬಹುದು. ಮತದಾರರ ಗುರುತಿನ ಚೀಟಿ ಪಡೆಯುವ ಸಂದರ್ಭದಲ್ಲಿಯೂ ಇದು ಕೆಲಸಕ್ಕೆ ಬರುತ್ತದೆ. 


ಇದನ್ನೂ ಓದಿ : UP Assembly election 2022: ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ನಿರಾಕರಿಸಿದ AIMIM 


ಅರ್ಹತೆ ಏನು? :
 ವಾರ್ಷಿಕ ಆದಾಯವು 27 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ ಬಿಪಿಎಲ್ (BPL) ಅರ್ಜಿ ಸಲ್ಲಿಸಬಹುದು. ಸರ್ಕಾರದಿಂದ ಪಡೆದ ಅರ್ಹತೆಯ ಪ್ರಕಾರ, ಬಡತನ ರೇಖೆಗಿಂತ ಮೇಲಿರುವವರು (APL), ಬಡತನ ರೇಖೆಗಿಂತ ಕೆಳಗಿರುವ (BPL) ಕಾರ್ಡ್ ಮತ್ತು ಆಂಟ್ಯೋದಯ ಪಡಿತರ ಚೀಟಿ (AAY) ಪದೆದುಕೊಳ್ಳಬಹುದು. 


ರೇಷನ್ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು?
1. ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
2 . ಈಗApply online for ration card ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಈಗ ನಿಮಗೆ ಪಡಿತರ ಚೀಟಿ ಪಡೆಯಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆರೋಗ್ಯ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಐಡಿ ಪ್ರೂಫ್ ಆಗಿ ನೀಡಬಹುದು.
4. ಅರ್ಜಿಯನ್ನು ಭರ್ತಿ ಮಾಡಿದ ನಂತರ, 05 ರಿಂದ 45 ರೂಗಳವರೆಗಿನ ಶುಲ್ಕವನ್ನು ಕಟ್ಟಿ ಅರ್ಜಿಯನ್ನು ಸಲ್ಲಿಸಿ.
5. ಈಗ ಪರಿಶೀಲನೆಯ ನಂತರ, ನಿಮ್ಮ ಅಪ್ಲಿಕೇಶನ್ ಸರಿಯಾಗಿದ್ದರೆ,  ನಿಮಗೆ ಪದಯಾರ ಚೀಟಿ ನೀಡಲಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.