ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ನ ಈ ಯುಗದಲ್ಲಿಯೂ ಕೂಡ ಚೆಕ್‌ ಗಳು ಇನ್ನೂ ಕೂಡ ತಮ್ಮ ಪ್ರಾಮುಖ್ಯತೆಯನ್ನು ಹೊಂದಿವೆ. ಇಂದಿಗೂ, ವ್ಯವಹಾರ ಅಥವಾ ಬ್ಯಾಂಕ್ ಅಥವಾ ಕೆಲಸದ ಸಮಯದಲ್ಲಿ ರದ್ದಾದ ಚೆಕ್ ಸಲ್ಲಿಸಲು ಹೇಳಲಾಗುತ್ತದೆ. ಕ್ಯಾನ್ಸಲ್ ಚೆಕ್ ನೀಡುವ ಮೊದಲು ಹಲವಾರು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆದರೆ ರದ್ದಾದ ಚೆಕ್ ನಿಂದ ಯಾವುದೇ ಹಾನಿ ಆಗುವುದಿಲ್ಲ. ಈ ರೀತಿಯ ಚೆಕ್ ನಲ್ಲಿ ಬರೆದಿರಲಾಗಿರುವ ನಿಮ್ಮ ಹೆಸರಿನಲ್ಲಿ ಹಲವು ರೀತಿಯ ಮಾಹಿತಿ ಅಡಗಿರುತ್ತದೆ.


COMMERCIAL BREAK
SCROLL TO CONTINUE READING

ಕ್ಯಾನ್ಸಲ್ ಚೆಕ್ ಆವಶ್ಯಕತೆ ಏನು?
ಕ್ಯಾನ್ಸಲ್ ಚೆಕ್ ಅನ್ನು ಪರಿಶೀಲನಾ ದಾಖಲೆಯಾಗಿ ನೋಡಲಾಗುತ್ತದೆ. ನೀವು ಯಾರಿಗಾದರೂ ರದ್ದಾದ ಚೆಕ್ ನೀಡುತ್ತಿದ್ದರೆ, ಅದು ನಿಮ್ಮ ಬ್ಯಾಂಕ್ ಖಾತೆ, ನಿಮ್ಮ ಹೆಸರು ಇತ್ಯಾದಿಗಳನ್ನು ಖಚಿತಪಡಿಸುತ್ತದೆ. ಒಟ್ಟಾರೆಯಾಗಿ,ರದ್ದು ಮಾಡಿರುವ ಚೆಕ್ ನಿಮ್ಮ ಬಗ್ಗೆ ಐದು ಬಲವಾದ ಮಾಹಿತಿಗಳನ್ನು ನೀಡುತ್ತದೆ.


ರದ್ದುಗೊಳಿಸಲಾದ ಚೆಕ್ ಹೇಗಿರುತ್ತದೆ?
ಸಾಮಾನ್ಯ ಚೆಕ್ ನಲ್ಲಿ ಪೆನ್ ನಿಂದ ಕರ್ಣೀಯವಾಗಿ ಎರಡು ಗೆರೆಗಳನ್ನು ಎಳೆದು ಮಧ್ಯದಲ್ಲಿ ಕ್ಯಾನ್ಸಲ್ಡ್ ಎಂದು ಬರೆದರೆ ಆ ಚೆಕ್ ರದ್ದಾಗುತ್ತದೆ. ಈ ಚೆಕ್ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಅದರಿಂದ ಹಣವನ್ನು ಹಿಂಪಡೆಯುವುದು ಸಾಧ್ಯವಿಲ್ಲ. ಇಲ್ಲಿ ನೆನಪಿನಲ್ಲಿಡಬೇಕಾದ ವಿಷಯವೆಂದರೆ, ಕ್ಯಾನ್ಸಿಲ್ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯುವ ಮೊದಲು, ಅದು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳಿಗೆ ಯಾವುದೇ ರೀತಿಯಲ್ಲಿ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.


ಚೆಕ್ ನಲ್ಲಿರುವ ನಿಮ್ಮ ಮಾಹಿತಿ ಏನು?
-ನಿಮ್ಮ ಹೆಸರು
-ನೀವು ಖಾತೆಯನ್ನು ಹೊಂದಿರುವ ಬ್ಯಾಂಕಿನ ಹೆಸರು
-ಖಾತೆ ಸಂಖ್ಯೆ
-ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ (ಐಎಫ್‌ಸಿಐ ಕೋಡ್)
-ನಿಮ್ಮ ಸಹಿ


ಕ್ಯಾನ್ಸಲ್ ಚೆಕ್ ನೀಡುವಾಗ ಜಾಗೃತೆವಹಿಸಿ
ಕ್ಯಾನ್ಸಲ್ ಚೆಕ್ ನಿಷ್ಪ್ರಯೋಜಕ ಚೆಕ್ ಆಗಿದೆ ಎಂದು ಭಾವಿಸಿ ಅದನ್ನು ಯಾರಿಗೆ ಬೇಕಾದರೂ ನೀಡಬೇಡಿ. ರದ್ದಾದ ಚೆಕ್ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹೊಂದಿದೆ. ನಿಮ್ಮ ಖಾತೆಯಿಂದ ಹಣವನ್ನು ಅಕ್ರಮ ರೀತಿಯಲ್ಲಿ ಪಡೆಯಲು ಇದು ಬಳಕೆಯಾಗುವ ಸಾಧ್ಯತೆ ಇದೆ, ಸಹಿ ಮಾಡದೆಯೇ ರದ್ದುಗೊಳಿಸಿದ ಚೆಕ್ ನೀಡಿ. ನೀವು ಸಂಪೂರ್ಣವಾಗಿ ನಂಬುವ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಮಾತ್ರ ಸಹಿ ಮಾಡಿದ ರದ್ದತಿ ಚೆಕ್‌ಗಳನ್ನು ನೀಡಿ.


ರದ್ದಾದ ಚೆಕ್ ಎಲ್ಲಿ ಅಗತ್ಯವಿರುತ್ತದೆ
1. ಡಿಮ್ಯಾಟ್ ಖಾತೆ ತೆರೆಯಲು
2. ಬ್ಯಾಂಕಿನಲ್ಲಿ ಕೆವೈಸಿ ಮಾಹಿತಿ ನೀಡಲು
3. ವಿಮೆ ಖರೀದಿಸಲು
4. ಇಎಂಐ ಪಾವತಿಸಲು
5. ಮ್ಯೂಚುಯಲ್ ಫಂಡ್‌ನಲ್ಲಿ ಹಣ ಹೂಡಿಕೆಗಾಗಿ
6. ಬ್ಯಾಂಕಿನಿಂದ ಸಾಲ ಪಡೆಯಲು
7. ಇಪಿಎಫ್‌ನಿಂದ ಹಣವನ್ನು ಹಿಂಪಡೆಯಲು ಕ್ಯಾನ್ಸಲ್ ಚೆಕ್ ಪಡೆಯಲಾಗುತ್ತದೆ.