ನವದೆಹಲಿ: ಮಹಾರಾಷ್ಟ್ರದ ಬಿಜೆಪಿ ಹಿರಿಯ ನಾಯಕ ಏಕನಾಥ್ ಖಡ್ಸೆ ಅವರು ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪಕ್ಷವನ್ನು ಬುಧವಾರ ತೊರೆದರು.ಖಡ್ಸೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಎನ್‌ಸಿಪಿ ಮುಖಂಡ ಮತ್ತು ಮಹಾರಾಷ್ಟ್ರ ಸಚಿವ ಜಯಂತ್ ಪಾಟೀಲ್ ಪ್ರಕಟಣೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಿಜೆಪಿ ಮುಖಂಡ ಏಕ್ನಾಥ್ ಖಡ್ಸೆ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ನನಗೆ ಮಾಹಿತಿ ನೀಡಲಾಗಿದೆ. ನಾವು ಅವರಿಗೆ ಎನ್‌ಸಿಪಿಯಲ್ಲಿ ಪ್ರವೇಶ ನೀಡಲು ನಿರ್ಧರಿಸಿದ್ದೇವೆ.ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಅವರನ್ನು ಔಪಚಾರಿಕವಾಗಿ ಎನ್‌ಸಿಪಿಗೆ ಸೇರಿಸಲಾಗುವುದು ಎಂದು ಪಾಟೀಲ್ ಮಾಧ್ಯಮಕ್ಕೆ ತಿಳಿಸಿದರು.


ವಿವಿಧ ಹಂತದ ಹಲವಾರು ಕಾರ್ಯಕರ್ತರು ಸೇರಿದಂತೆ ಇತರ ಬಿಜೆಪಿ ನಾಯಕರು ಖಡ್ಸೆ ಅವರನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಸುಳಿವು ನೀಡಿದ್ದಾರೆ. ಚುನಾಯಿತ ಶಾಸಕರು ಕೂಡ ನಂತರದ ಹಂತದಲ್ಲಿ ಬಿಜೆಪಿಯನ್ನು ತೊರೆಯಬಹುದು ಎಂದು ಅವರು ಹೇಳಿದರು.


ಖಡ್ಸೆ ಬಿಜೆಪಿಯನ್ನು ತೊರೆಯುವ ಬಗ್ಗೆ ಸ್ವಲ್ಪ ಸಮಯದವರೆಗೆ ತೀವ್ರ ಊಹಾಪೋಹಗಳು ಇದ್ದವು ಆದರೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಂಗಳವಾರ ಇದನ್ನು ಅಲ್ಲಗಳೆದಿದ್ದರು, ಇಂತಹ  ಮಹೂರ್ತ ಪ್ರತಿದಿನ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.