ನವದೆಹಲಿ: ಪ್ರಜಾಪ್ರಭುತ್ವದ ಪ್ರಮುಖ ವಿಷಯವೆಂದರೆ ನಾಗರಿಕರ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ,ಇದು ಉತ್ತಮ ಪೋಲಿಸಿಗೆ ನೇರವಾಗಿ ಸಂಬಂಧಿಸಿದೆ ಮತ್ತು ಇದನ್ನು ನಿರಂತರವಾಗಿ ಸುಧಾರಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.


COMMERCIAL BREAK
SCROLL TO CONTINUE READING

ಪೊಲೀಸ್ ವ್ಯವಸ್ಥೆಯನ್ನು ಅತ್ಯಂತ ಕೆಳಮಟ್ಟದಲ್ಲಿ ನಿಯೋಜಿಸಲಾಗಿರುವ "ಬೀಟ್ ಕಾನ್ಸ್ಟೇಬಲ್" ಸಾಮಾನ್ಯ ಮನುಷ್ಯನನ್ನು ರಕ್ಷಿಸುವ ಮೂಲಕ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಲು ಮಹತ್ವದ ಕೊಡುಗೆ ನೀಡುತ್ತಾರೆ ಎಂದು ಶಾ (Amit Shah) ಹೇಳಿದರು.


ಇದನ್ನೂ ಓದಿ: PM Modi Temple: ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನ ಕಟ್ಟಿಸಿದ ಬಿಜೆಪಿ ಕಾರ್ಯಕರ್ತ..!


ಬ್ಯೂರೋ ಆಫ್ ಪೋಲಿಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿಪಿಆರ್ ಮತ್ತು ಡಿ) ಯ 51 ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿಲ್ಲದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ.


'ಪ್ರಜಾಪ್ರಭುತ್ವ ನಮ್ಮ ಸ್ವಭಾವ..ಇದು ಸ್ವಾತಂತ್ರ್ಯಕ್ಕೂ ಮುಂಚೆಯೇ ನಮ್ಮ ಸ್ವಭಾವವಾಗಿತ್ತು ಮತ್ತು ಸ್ವಾತಂತ್ರ್ಯವನ್ನು ಪಡೆದ ನಂತರ ನಾವು ಇದನ್ನು ಒಪ್ಪಿಕೊಂಡಿದ್ದೇವೆ.ಇದು ನಮ್ಮ ಜನರ ಸ್ವಭಾವವಾಗಿದೆ.ಪ್ರಜಾಪ್ರಭುತ್ವದ ಅತಿದೊಡ್ಡ ವಿಷಯವೆಂದರೆ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ" ಎಂದು ಅವರು ಹೇಳಿದರು.ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಕ್ಕೆ ಬಂದಾಗ, ಅದು ನೇರವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಸಮನ್ಸ್ ಜಾರಿಗೊಳಿಸಿದ ಪಶ್ಚಿಮ ಬಂಗಾಳ ಪೋಲಿಸ್


"ಪ್ರಜಾಪ್ರಭುತ್ವವು ಕೇವಲ ಪಕ್ಷಗಳಿಗೆ ಮತಹಾಕುವುದು ಮತ್ತು ಸರ್ಕಾರವನ್ನು ರಚಿಸುವುದಲ್ಲ..ಇದು ಕೇವಲ ವ್ಯವಸ್ಥೆಯ ಒಂದು ಭಾಗವಾಗಿದೆ. ಪ್ರಜಾಪ್ರಭುತ್ವದ ಯಶಸ್ಸು ಅಥವಾ ಫಲವೇನು? ದೇಶದ 130 ಕೋಟಿ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬುದ್ಧಿವಂತಿಕೆ, ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದು ಮತ್ತು ಆ ಮೂಲಕ ದೇಶವು ಅದರ ಅಭಿವೃದ್ಧಿಗೆ ಈ ಸಂಚಿತ ಪರಿಣಾಮದ ಲಾಭವನ್ನು ಪಡೆಯುತ್ತದೆ "ಎಂದು ಅಮಿತ್ ಶಾ ಹೇಳಿದರು.ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಪ್ರಜಾಪ್ರಭುತ್ವ ಏಳಿಗೆ ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.


ಇದನ್ನೂ ಓದಿ: ಕೇಂದ್ರ ಸರ್ಕಾರ ಪ್ರತಿಪಕ್ಷಗಳನ್ನು ನಿಗ್ರಹಿಸಲು ಇಡಿ ಬಳಸುತ್ತಿದೆ- ಶರದ್ ಪವಾರ್


"ಈ ಕೆಲಸವನ್ನು ನಮ್ಮ ಗಡಿಯನ್ನು ಕಾಪಾಡುವ ಪೋಲಿಸ್ ಮತ್ತು ಪಡೆಗಳಿಂದ ಮಾಡಲ್ಪಟ್ಟಿದೆ. ಯಶಸ್ವಿ ಪ್ರಜಾಪ್ರಭುತ್ವಕ್ಕೆ ವ್ಯಕ್ತಿಯ ಭದ್ರತೆಯನ್ನು ಖಾತ್ರಿಪಡಿಸುವುದು ಬಹಳ ಮುಖ್ಯ.ನಾಗರಿಕನು ತನ್ನ ಕಾನೂನು ಹಕ್ಕುಗಳನ್ನು ಅಡೆತಡೆಯಿಲ್ಲದೆ ಪಡೆಯುತ್ತಲೇ ಇರಬೇಕು.ಒಬ್ಬ ಪ್ರಜೆಯು ಸಂವಿಧಾನದ ಸ್ಫೂರ್ತಿಯಂತೆ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಬೇಕು.ಆದ್ದರಿಂದ,ಪೋಲೀಸ್ ಪಡೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಸುಧಾರಿಸುವುದು ಬಿಪಿಆರ್ ಮತ್ತು ಡಿ ಯ ಕೆಲಸ ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.