ನವದೆಹಲಿ : ಇದೇ ಮೊದಲ ಬಾರಿಗೆ, ಬಿಹಾರ ಪೊಲೀಸ್ ಇಲಾಖೆಯು ವಿವಿಧ ಹುದ್ದೆಗಳಿಗೆ ಮಂಗಳಮುಖಿಯರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಇತ್ತೀಚಿನ ಬೆಳವಣಿಗೆಯ ಪ್ರಕಾರ, ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದುಳಿದ ವರ್ಗಗಳ ವೇಳಾಪಟ್ಟಿ (2) ನಲ್ಲಿ ಮಂಗಳಮುಖಿಯರನ್ನು ಸೇರಿಸಲು ಸಾಮಾನ್ಯ ಆಡಳಿತ ಇಲಾಖೆ ನಿರ್ಣಯವನ್ನು ಹೊರಡಿಸಿದೆ.ಇದರ ಅಡಿಯಲ್ಲಿ, ಬಿಹಾರ (Bihar) ಪೊಲೀಸ್‌ನಲ್ಲಿ ಮುಂಬರುವ ಕಾನ್ಸ್‌ಟೇಬಲ್ ಅಥವಾ ಇನ್‌ಸ್ಪೆಕ್ಟರ್ ನೇಮಕಾತಿಗಳಲ್ಲಿ ಪ್ರತಿ 500 ಹುದ್ದೆಗಳಿಗೆ ಒಬ್ಬ ಟ್ರಾನ್ಸ್‌ಜೆಂಡರ್‌ನ ನೇರ ನೇಮಕಾತಿ ಇರುತ್ತದೆ.


ಇದನ್ನೂ ಓದಿ-Ukraine Russia Crisis: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ: ದೇಶಕ್ಕೆ ಮರಳುವಂತೆ ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ಸೂಚನೆ


ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೃಹ ಮತ್ತು ಸಾಮಾನ್ಯ ಆಡಳಿತ ಇಲಾಖೆಯ ಅಧಿಕಾರಿಗಳೂ ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಮುಂಬರುವ ಹಂತದ ನೇಮಕಾತಿಯಲ್ಲಿ 51 ಮಂಗಳ ಮುಖಿಯರನ್ನು ನೇರವಾಗಿ ಪೊಲೀಸ್ ಸೇವೆಯಲ್ಲಿ ನೇಮಿಸಿಕೊಳ್ಳಬಹುದಾಗಿದ್ದು, ಅದರಲ್ಲಿ 41 ಕಾನ್‌ಸ್ಟೆಬಲ್ ಹುದ್ದೆಗಳು, ಉಳಿದ 10 ಇನ್‌ಸ್ಪೆಕ್ಟರ್ ಹುದ್ದೆಗಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ದಾಳಿ ಕುರಿತು ನ್ಯಾಟೋ ಮುಖ್ಯಸ್ಥರು ಹೇಳಿದ್ದೇನು?


ಪ್ರತಿ 500 ನೇಮಕಾತಿಗಳಿಗೆ ಒಬ್ಬ ತೃತೀಯಲಿಂಗಿಯನ್ನು ನೇಮಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು. ಆದಾಗ್ಯೂ, ಅಧಿಕಾರಿಗಳು ಹುದ್ದೆಗೆ ಅರ್ಹ ಮಂಗಳ ಮುಖಿಯರನ್ನು ಹುಡುಕಲು ಸಾಧ್ಯವಾಗದಿದ್ದರೆ, ಹಿಂದುಳಿದ ವರ್ಗಕ್ಕೆ ಸೇರಿದ ಯಾವುದೇ ಅರ್ಹ ಅಭ್ಯರ್ಥಿಯಿಂದ ಭರ್ತಿ ಮಾಡಲಾಗುತ್ತದೆ.


ಗೃಹ ಇಲಾಖೆ ಮತ್ತು ಸಾಮಾನ್ಯ ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚೈತನ್ಯ ಪ್ರಸಾದ್, ಗೃಹ ಕಾರ್ಯದರ್ಶಿ ಕೆ ಸೆಂಥಿಲ್ ಕುಮಾರ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮಹೇಂದ್ರಕುಮಾರ್ ಮತ್ತು ಗೃಹ ಇಲಾಖೆ ವಿಶೇಷ ಶಾಖೆಯ ಜಂಟಿ ಕಾರ್ಯದರ್ಶಿ ಅನಿಮೇಶ್ ಪಾಂಡೆ ಸಭೆಯಲ್ಲಿ ಉಪಸ್ಥಿತರಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ