Ukraine Russia Crisis: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ: ದೇಶಕ್ಕೆ ಮರಳುವಂತೆ ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ಸೂಚನೆ

Ukraine Russia Crisis Latest Update: ಉಕ್ರೇನ್‌ನಲ್ಲಿ ಪರಿಸ್ಥಿತಿ ನಿರಂತರವಾಗಿ ಕ್ಷೀಣಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಅಲ್ಲಿ ನಿಯೋಜಿಸಲಾದ ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಹಿಂತಿರುಗುವಂತೆ ನಿರ್ದೇಶಿಸಿದೆ.

Written by - Yashaswini V | Last Updated : Feb 21, 2022, 10:54 AM IST
  • ಉಕ್ರೇನ್‌ನಲ್ಲಿ 20 ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ
  • ಎಲ್ಲಾ ದೇಶಗಳ ಕಾನೂನುಬದ್ಧ ಭದ್ರತಾ ಹಿತಾಸಕ್ತಿಗಳನ್ನು ನೋಡಿಕೊಳ್ಳಿ
  • ಸಂವಾದದ ಮೂಲಕ ಸಮಸ್ಯೆ ಪರಿಹಾರಕ್ಕೆ ಒತ್ತಾಯ
Ukraine Russia Crisis: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ: ದೇಶಕ್ಕೆ ಮರಳುವಂತೆ ಭಾರತೀಯ ರಾಜತಾಂತ್ರಿಕರ ಕುಟುಂಬಗಳಿಗೆ ಸೂಚನೆ title=
Ukraine Russia Crisis Latest Update

Ukraine Russia Crisis Latest Update: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು (Govt Of India) ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಮರಳುವಂತೆ ಕೇಳಿದೆ. ರಾಜತಾಂತ್ರಿಕರ ಕುಟುಂಬಗಳು ಉಕ್ರೇನ್ ತೊರೆದು ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಕೇಳಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ, ಉಕ್ರೇನ್‌ನ (Ukraine) ಪೂರ್ವ ಪ್ರದೇಶಗಳಲ್ಲಿ ಸರ್ಕಾರಿ ಸೇನೆ ಮತ್ತು ರಷ್ಯಾದ ಪರ ಪ್ರತ್ಯೇಕತಾವಾದಿಗಳ ನಡುವೆ ಘರ್ಷಣೆಗಳು ಪ್ರಾರಂಭವಾಗಿವೆ. ಈ ಘರ್ಷಣೆಯಲ್ಲಿ (Ukraine Russia Crisis) ಇಬ್ಬರು ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎರಡೂ ಕಡೆಯಿಂದ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಉಕ್ರೇನ್‌ನಲ್ಲಿನ ಈ ಪರಿಸರದ ದೃಷ್ಟಿಯಿಂದ, ಭಾರತ ಸರ್ಕಾರವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಉಕ್ರೇನ್‌ನಲ್ಲಿ ಪರಿಸ್ಥಿತಿ (Ukraine Russia Crisis) ನಿರಂತರವಾಗಿ ಕ್ಷೀಣಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು (Govt Of India) ಅಲ್ಲಿ ನಿಯೋಜಿಸಲಾದ ತನ್ನ ರಾಜತಾಂತ್ರಿಕರ ಕುಟುಂಬಗಳನ್ನು ದೇಶಕ್ಕೆ ಹಿಂತಿರುಗುವಂತೆ ನಿರ್ದೇಶಿಸಿದೆ.

ಇದನ್ನೂ ಓದಿ- Russia-Ukraine Tension: ಏನಿದು False Flag Attack? ಇಂದಿನ ಸಮಯದಲ್ಲಿ ಅದು ಸಾಧ್ಯವೇ?

ಉಕ್ರೇನ್‌ನಲ್ಲಿ 20 ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ:
ಪ್ರಸ್ತುತ, ಉಕ್ರೇನ್‌ನಲ್ಲಿ ಸುಮಾರು 20,000 ಭಾರತೀಯ ನಾಗರಿಕರು (Indian Citizens) ವಾಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ವಾಸಿಸುವ ತನ್ನ ನಾಗರಿಕರಿಗೆ ಹಲವಾರು ಸಲಹೆಗಳನ್ನು ನೀಡಿದೆ. ಭಾನುವಾರ ಹೊರಡಿಸಿದ ಹೊಸ ಸಲಹೆಯಲ್ಲಿ, ಉಕ್ರೇನ್‌ನಲ್ಲಿ (Ukraine) ಮುಂದುವರಿದ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿ ವಾಸಿಸುವ ಎಲ್ಲಾ ಭಾರತೀಯರು ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ. 

'ಎಲ್ಲಾ ದೇಶಗಳ ಕಾನೂನುಬದ್ಧ ಭದ್ರತಾ ಹಿತಾಸಕ್ತಿಗಳನ್ನು ನೋಡಿಕೊಳ್ಳಿ':
ಪ್ರಜೆಗಳ ಸುರಕ್ಷತೆಯೇ ತನಗೆ ಮೊದಲು ಎಂದು ಭಾರತ ಈ ಹಿಂದೆ ಹಲವು ಬಾರಿ ಹೇಳಿತ್ತು. ಕಳೆದ ವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸಭೆಯಲ್ಲಿ ಮಾತನಾಡಿದ ಭಾರತೀಯ ರಾಯಭಾರಿ ಟಿ.ಎಸ್. ತಿರುಮೂರ್ತಿ ಎಲ್ಲಾ ದೇಶಗಳ ಕಾನೂನುಬದ್ಧ ಭದ್ರತಾ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಉದ್ವಿಗ್ನತೆಯನ್ನು ತಕ್ಷಣವೇ ಕಡಿಮೆ ಮಾಡಬೇಕು ಎಂದು  ಹೇಳಿದ್ದರು. ಇಡೀ ಪ್ರದೇಶದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವ ಬಗ್ಗೆಯೂ ಅವರು ಒತ್ತಿ ಹೇಳಿದರು. 

ಇದನ್ನೂ ಓದಿ- Russia Nuclear Drill: ಉಕ್ರೇನ್ ಉದ್ವಿಗ್ನತೆಯ ನಡುವೆ ನ್ಯೂಕ್ಲಿಯರ್ ಡ್ರಿಲ್ ಆರಂಭಿಸಿದ ರಷ್ಯಾ ಸೇನೆ, ಡ್ರಿಲ್ ಸ್ವತಃ ಸಾಕ್ಷಿಯಾದ Vladimir Putin

'ಸಂವಾದದ ಮೂಲಕ ಸಮಸ್ಯೆ ಪರಿಹಾರ':
UNSC ಸಭೆಯಲ್ಲಿ, ಭಾರತವು ಮಿನ್ಸ್ಕ್ ಒಪ್ಪಂದವನ್ನು ಮತ್ತು ನಾರ್ಮಂಡಿ ಸ್ವರೂಪದ ಅಡಿಯಲ್ಲಿ ಮಾತುಕತೆಗಳ ಆರಂಭವನ್ನು ಸಹ ಬೆಂಬಲಿಸಿತು. ಭಾರತೀಯ ರಾಯಭಾರಿ, 'ಮಿನ್ಸ್ಕ್ ಒಪ್ಪಂದವು ಪೂರ್ವ ಉಕ್ರೇನ್‌ನಲ್ಲಿ ಉಭಯ ದೇಶಗಳ ನಡುವೆ ಸಕಾರಾತ್ಮಕ ಸಂವಾದಕ್ಕೆ ಆಧಾರವನ್ನು ಒದಗಿಸುತ್ತದೆ ಎಂದು ನಾವು ನಂಬುತ್ತೇವೆ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ದೂರವಿರಿಸಿ ಮಾತುಕತೆಯ ಮೂಲಕ ಸಕಾರಾತ್ಮಕ ಪರಿಹಾರವನ್ನು ಕಂಡುಕೊಳ್ಳಲು ಎಲ್ಲಾ ಕಡೆಯವರು ಪ್ರಯತ್ನಿಸಬೇಕು' ಎಂದು ಒತ್ತಾಯಿಸಿದ್ದರು.

ಭಾರತವು ಮಿನ್ಸ್ಕ್ ಒಪ್ಪಂದಕ್ಕೆ ಒತ್ತಾಯಿಸುತ್ತದೆ:
ಮಿನ್ಸ್ಕ್ ಒಪ್ಪಂದವು ರಷ್ಯಾ, ಉಕ್ರೇನ್, ಯುರೋಪ್ ಮತ್ತು OSCE ಅನ್ನು ಒಳಗೊಂಡಿದೆ. ಒಪ್ಪಂದವು ಡೊನೆಟ್ಸ್ಕ್, ಲುಹಾನ್ಸ್ಕ್ ಮತ್ತು ಪೂರ್ವ ಉಕ್ರೇನ್‌ನ ಇತರ ಪ್ರದೇಶಗಳಲ್ಲಿ ಕದನ ವಿರಾಮಕ್ಕೆ ಕರೆ ನೀಡುತ್ತದೆ. ಆದರೆ ಮಾತುಕತೆಗಳ ನಾರ್ಮಂಡಿ ಸ್ವರೂಪವು ಜರ್ಮನಿ, ಫ್ರಾನ್ಸ್ ಮತ್ತು ಮಿನ್ಸ್ಕ್ ಒಪ್ಪಂದದ ಸದಸ್ಯರನ್ನು ಒಳಗೊಂಡಿದೆ. ಈ ಸ್ವರೂಪವು ಮಿನ್ಸ್ಕ್ ಒಪ್ಪಂದದ ಸರಿಯಾದ ಅನುಷ್ಠಾನಕ್ಕೆ ಸಂಬಂಧಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News