Farmer Income: ರೈತರ ಆದಾಯ ಹೆಚ್ಚಳಕ್ಕೆ `ಕೃಷಿ ಉತ್ಪನ್ನಗಳ ಪಟ್ಟಿ ಅಂತಿ`ಗೊಳಿಸಿದ ಸರ್ಕಾರ!
‘ಒಂದು ಜಿಲ್ಲೆ ಒಂದು ಉತ್ಪನ್ನ ಉತ್ತೇಜನ’ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಉತ್ಪನ್ನಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.
ನವದೆಹಲಿ: ರೈತರ ಆದಾಯ ಹೆಚ್ಚಿಸಲು ಹಾಗೂ ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ‘ಒಂದು ಜಿಲ್ಲೆ ಒಂದು ಉತ್ಪನ್ನ ಉತ್ತೇಜನ’ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಉತ್ಪನ್ನಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಕರ್ನಾಟಕದ 31 ಜಿಲ್ಲೆಗಳು ಸೇರಿದಂತೆ ದೇಶದೆಲ್ಲೆಡೆಯ 728 ಜಿಲ್ಲೆಗಳಲ್ಲಿ ತಲಾ ಒಂದೊಂದು ಬೆಳೆಗಳ ಪ್ರಚಾರಕ್ಕೆ ಸರ್ಕಾರ ಆದ್ಯತೆ ನೀಡಲಿದೆ.
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಗಳಿಂದ ಮಾಹಿತಿಯನ್ನು ಪಡೆದು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕೃಷಿ(Agri), ಹೈನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಚಲಚರ ಸಾಕಾಣಿಕೆ ಹಾಗೂ ಇತರ ವಲಯಗಳಿಂದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
Amit Shah: 'ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ.40ಕ್ಕಿಂತ ಕಡಿಮೆ ಮಾಡುತ್ತೇವೆ'
ಉದಾಹರಣೆಗೆ ಭತ್ತವನ್ನು 40 ಜಿಲ್ಲೆಗಳಲ್ಲಿ ಉತ್ತೇಜಿಸಲಾಗುವುದು. ಗೋಧಿಯನ್ನು 5 ಜಿಲ್ಲೆಗಳಲ್ಲಿ , ಬೇಳೆಕಾಳು- ದವಸ- ಧಾನ್ಯಗಳನ್ನು 25 ಜಿಲ್ಲೆ(Districts)ಗಳಲ್ಲಿ, ವಾಣಿಜ್ಯ ಬೆಳೆಗಳನ್ನು 22 ಜಿಲ್ಲೆಗಳಲ್ಲಿ ಪ್ರೋತ್ಸಾಹಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
Milk Price Hike: ಮಾರ್ಚ್ 1 ರಿಂದ ಲೀಟರ್ ಹಾಲಿನ ಬೆಲೆ 100 ರೂ.? ನಿಜಾನಾ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.