ಪಾಟ್ನಾ: ಸರಿಯಾದ ಸಮಯಕ್ಕೆ ಉಪ-ವಿಭಾಗೀಯ ಆಸ್ಪತ್ರೆಯ ಆಂಬುಲೆನ್ಸ್ ತಲುಪಲು ವಿಫಲವಾಗಿದ್ದರಿಂದ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಾಗಹ ನಗರದಲ್ಲಿ ವ್ಯಕ್ತಿಯೊಬ್ಬನು ಸಾವನ್ನಪ್ಪಿದ್ದಾನೆ.


COMMERCIAL BREAK
SCROLL TO CONTINUE READING

ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ಆ ವ್ಯಕ್ತಿಯನ್ನು ಶಿಪಾರಸ್ಸು ಮಾಡಲಾಗಿದೆ.ಆದರೆ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಅವರನ್ನು ತಲುಪದಿರುವುದರಿಂದ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.


ಆಸ್ಪತ್ರೆಯಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿರದಿರುವುದು ವ್ಯಕ್ತಿಯ ಸಾವಿಗೆ ಕಾರಣ ಎಂದು ಸಂಬಂಧಿಕರಲ್ಲಿ ಒಬ್ಬರು  ತಿಳಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ಅವರು "ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ, ಸೂಕ್ತ ಸಮಯದಲ್ಲಿ ಆಂಬುಲೆನ್ಸ್ ತಲುಪದಿರುವುದು ವೈದ್ಯಕೀಯ ಸೌಲಭ್ಯದ ಕೊರತೆಯನ್ನು ಸೂಚಿಸುತ್ತದೆ.


ಈ  ಆರೋಪದ ಬಗ್ಗೆ ಆಸ್ಪತ್ರೆಯ ಅಧೀಕ್ಷಕ ಎಸ್ಪಿ ಅಗರ್ವಾಲ್ ಪ್ರಶ್ನಿಸಿದಾಗ ಅವರು "ನಾವು ವಿಷಯವನ್ನು ತನಿಖೆ ಮಾಡಲು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದೇವೆ" ಎಂದು ಹೇಳಿದರು.