ನವದೆಹಲಿ: ವಿಶ್ವದ ಬಹುತೇಕ ದೇಶಗಳಲ್ಲಿ ಇದೀಗ ಕೊರೊನಾ ವೈರಸ್ ಮಹಾಮಾರಿಯ ಪ್ರಕೋಪ ಮುಂದುವರೆದಿದೆ. ಈ ಮಧ್ಯೆ ಭಾರತದ ಆಂಧ್ರ ಪ್ರದೇಶದಲ್ಲಿ(Andhra Pradesh) ಕೊರೊನಾ ಹೊರತುಪಡಿಸಿ ನಿಗೂಢ ಕಾಯಿಲೆಯೊಂದು ಜನರನ್ನು ಬೆಚ್ಚಿಬೀಳಿಸಿದೆ. ರಾಜ್ಯದ ಎಲ್ಲೂರು ಜಿಲ್ಲೆಯಲ್ಲಿ ಹೊಸ ನಿಗೂಢ ಕಾಯಿಲೆಯೊಂದು ಪಸರಿಸಲು ಆರಂಭಿಸಿದೆ.


COMMERCIAL BREAK
SCROLL TO CONTINUE READING

ಭಾನುವಾರ ಈ ನಿಗೂಢ ಕಾಯಿಲೆಯ ಓರ್ವ ವ್ಯಕ್ತಿ ಬಲಿಯಾಗಿದ್ದು 291 ಜನರು ಈ ಕಾಯಿಲೆಯಿಂದ ಬಳಲುತ್ತಿದ್ದರೆ ಎನ್ನಲಾಗಿದೆ. ಅನಾರೋಗ್ಯ ಪೀಡಿತ ಜನರಿಗೆ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಆರೋಗ್ಯ ಅಧಿಕಾರಿಯೊಬ್ಬರು, 140 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.


ಇದನ್ನು ಓದಿ-ದೇಶದ ಸಾಕ್ಷರತೆಯಲ್ಲಿ ಕೇರಳಕ್ಕೆ ಅಗ್ರಸ್ಥಾನ, ಅತ್ಯಂತ ತಳಮಟ್ಟದಲ್ಲಿರುವ ರಾಜ್ಯವಿದು


ಆಕಸ್ಮಿಕವಾಗಿ ಜನರು ಯಾವ ಕಾಯಿಲೆಗೆ ತುತ್ತಾಗಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ನಿಗೂಢ ಕಾಯಿಲೆಗೆ ಗುರಿಯಾದವರಲ್ಲಿ ಅಪಸ್ಮಾರ, ವಾಂತಿಗಳಂತಹ ಲಕ್ಷಣಗಳು ಕಂಡುಬಂದಿವೆ. ವಿಜಯವಾಡಾನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ನಿಗೂಢ ಕಾಯಿಲೆಗೆ ಉರಿಯಾದ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.


ಹಠಾತ್ ಹರಡಿರುವ ನಿಗೂಢ ಕಾಯಿಲೆಯಿಂದಂಗಿ ಆಂಧ್ರಪ್ರದೇಶದ ಎಲ್ಲೂರು ಜಿಲ್ಲೆಯಲ್ಲಿ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ. ಇದರಿಂದ ಜಿಲ್ಲಾಡಳಿತ ಕೂಡ ಆತಂಕಕ್ಕೆ ಒಳಗಾಗಿದೆ. ಪ್ರಸ್ತುತ ಅನಾರೋಗ್ಯ ಪೀಡಿತರ ನೆರವಿಗಾಗಿ ವೈದ್ಯರ ವಿಶೇಷ ತಂಡ ಎಲ್ಲೂರು ತಲುಪಿದೆ. ಜೊತೆಗೆ ಮನೆ-ಮನೆ ಸಮೀಕ್ಷೆ ಕಾರ್ಯ ಕೂಡ ನಡೆಸಲಾಗುತ್ತಿದೆ.


ಇದನ್ನು ಓದಿ-ವಿಶಾಖಪಟ್ಟಣಂ: ಔಷಧೀಯ ಕಂಪನಿಯಲ್ಲಿ ಅನಿಲ ಸೋರಿಕೆ, ಇಬ್ಬರು ಮೃತ


ಪ್ರಕರಣದ ಗಂಭೀರತೆನ್ನು ಪರಿಗಣಿಸಿ ಬಿಜೆಪಿ ಸಂಸದ GVL ನರಸಿಂಹರಾವ್ ಪ್ರಮುಖ ಕಾರ್ಯದರ್ಶಿ ನೀಲಂ ಸಾಹನಿ ಅವರ ಜೊತೆ ದೂರವಾಣಿ ಕರೆ ಮೂಅಕ ಮಾತುಕತೆ ನಡೆಸಿದ್ದಾರೆ. ಬಳಿಕ ಮಲ್ಕಾನಗಿರಿ AIIMS ಆಸ್ಪತ್ರೆಯ ಐವರು ವೈದ್ಯರ ತಂಡ ರೋಗಿಗಳ ಚಿಕಿತ್ಸೆಗಾಗಿ ಎಲ್ಲೂರು ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿರುವ GVL ನರಸಿಂಹರಾವ್, ಈ ನಿಗೂಢ ಕಾಯಿಲೆಯ ಕುರಿತು ತಾವು ದೆಹಲಿಯ AIIMS ನಿರ್ದೇಶಕ ಡಾ. ರಣದೀಪ್ ಗುಲೆರಿಯಾ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಪಶ್ಚಿಮ ಗೋದಾವರಿ ಜಿಲ್ಲೆಯ ಆರೋಗ್ಯ ಅಧಿಕಾರಿಗೊಂದಿಗೂ ಕೂಡ ಮಾತನಾಡಿರುವುದಾಗಿ ಹೇಳಿದ್ದಾರೆ. ವಿಷಪದಾರ್ಥ ಸೇವನೆಯ ಕಾರಣ ಈ ನಿಗೂಢ ಕಾಯಿಲೆ ಹರಡಿರುವ ಸಾಧ್ಯತೆಯನ್ನು ಅವರು ವರ್ತಿಸಿದ್ದಾರೆ.